ಬ್ರೇಕಿಂಗ್ : ಕೊರೊನಾಗೆ ಹೊಸ ಔಷಧ, ಮಹಾಮಾರಿಯ ಮರಣಶಾಸನ!

By Suvarna News  |  First Published Apr 8, 2021, 9:03 PM IST

ಕೊರೋನಾಕ್ಕೆ ಲಸಿಕೆ ಹೊರತುಪಡಿಸಿ ಔಷಧಿ ಸಿದ್ಧ/ ಇಂಗ್ಲೆಂಡ್ ಕಂಪನಿಯೊಂದರಿಂದ ಚಮತ್ಕಾರ/ ಮೂಗಿಗೆ ಸ್ಪ್ರೆ ಮಾಡಿಕೊಂಡರೆ ಮುಗೀತು ಕೊರೋನಾ ಕತೆ/ ವೈರಸ್ ನ್ನು ಹಂತಹಂತವಾಗಿ ಕೊಂದು ಹಾಕುತ್ತದೆ


ವ್ಯಾಂಕೋವರ್(ಇಂಗ್ಲೆಂಡ್, ಏ.  08) ಜಗತ್ತನ್ನೇ ಹಿಂಡಿ ಹಿಪ್ಪೆ ಮಾಡಿದ ಕೊರೋನಾಕ್ಕೆ ಮದ್ದು ಸಿಕ್ಕಿದೆ. ಭಾರತ ಸೇರಿ ಹಲವಾರು ರಾಷ್ಟ್ರಗಳು ಲಸಿಕೆ ಸಿದ್ಧಮಾಡಿಕೊಂಡಿವೆ. ಲಸಿಕೆ ನೀಡಿಕೆ ಕೆಲಸವೂ ಪ್ರಗತಿಯಲ್ಲಿದ್ದು ಕೋವಾಕ್ಸಿನ್, ಕೋವಿಡ್ ಶೀಲ್ಡ್ ಭಾರತದ್ದಾದರೆ, ರಷ್ಯಾ ಮತ್ತು ಅಮೆರಿಕ Sputnik V, ಫೈಜರ್ ಮೇಲೆ ಅವಲಂಬಿತವಾಗಿವೆ. ಚೀನಾ ಸಹ ತಾನು ಲಸಿಕೆ ಕಂಡುಹಿಡಿದ್ದೇನೆ ಎಂದು ಹೇಳಿದ್ದು ಅದನ್ನು ಪಡೆದುಕೊಂಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಎರಡೇ ದಿನದಲ್ಲಿ ಕೊರೋನಾ ಸೋಂಕಿಗೆ ಗುರಿಯಾಗಿದ್ದರು. ಇದೆಲ್ಲವನ್ನು ಮೀರಿಸುವ ಒಂದು ಸುದ್ದಿ ಇದೆ.

ಕೊರೋನಾ ಬ್ರಿಟಿಷ್ ಕಂಪನಿ ಹೊಸ ಔಷಧಿ ಕಂಡುಹಿಡಿದಿದೆ. Nasal Spray ಅಂತಾರಲ್ಲ ಅದೇ ಇದು. ಮೂಗಿಗೆ ನಾವೇ ಸಿಂಪಡಿಸಿಕೊಂಡರೆ ಕೊರೋನಾ ಹತ್ತಿರವೂ ಸುಳಿಯುವುದಿಲ್ಲ, ಸುಳಿದಿದ್ದರೆ ಕಾಲು ಕೀಳುತ್ತದೆ ಎಂದು ಅಧ್ಯಯನ ಹೇಳಿದೆ. SaNOtize’s Nitric Oxide Nasal Spray ಸರಳವಾಗಿ ಹೇಳಬೇಕೆಂದರೆ  ಸಾನಿಟೈಜ್ ನೈಟ್ರಿಕ್ ನೋಸಲ್ ಸ್ಪ್ರೇ.. 

Latest Videos

undefined

ಕೊರೋನಾ ಕಂಟ್ರೋಲ್.. ಸಿಎಂಗಳಿಗೆ ಮೋದಿ ಮಹತ್ವದ ಸಲಹೆ

ಬ್ರಿಟಿಷ್ ಕೊಲಂಬಿಯಾ ಮತ್ತು ಸರ್ರೆ, ಇಂಗ್ಲೆಂಡ್ - (ಬಿಸಿನೆಸ್ ವೈರ್)  ಮತ್ತು ಬಯೋಟೆಕ್ ಕಂಪನಿ ಸಾನೊಟೈಜ್ ರಿಸರ್ಚ್ ಮತ್ತು  ಡೆವಲಪ್ಮೆಂಟ್ ಮತ್ತು ಎನ್‌ಎಚ್‌ಎಸ್ ಫೌಂಡೇಶನ್ ಸಂಟ್ ಪೀಟರ್ಸ್ ಆಸ್ಪತ್ರೆ ಜಂಟಿಯಾಗಿ ಸಂಶೋಧನೆ ನಡೆಸಿ ವರದಿ ಪ್ರಕಟಿಸಿವೆ. ಬರ್ಕ್ಷೈರ್ ಮತ್ತು ಸರ್ರೆ ಪ್ಯಾಥಾಲಜಿ ಸರ್ವೀಸಸ್ ಸಹ ಇದಕ್ಕೆ ಸಾಥ್ ನೀಡಿತ್ತು. ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶ ಪ್ರಕಟ ಆಗಿದ್ದು ಸುರಕ್ಷಿತ ಮತ್ತು ಪರಿಣಾಮಕಾರಿ ಟ್ರೀಟ್ ಮೆಂಟ್ ಸಾಧ್ಯ ಎಂಬುದನ್ನು ತಿಳಿಸಿದೆ.

ಲಾಕ್ ಡೌನ್ ಭಯ; ತವರಿನತ್ತ ಹೊರಟ ಮುಂಬೈ ಕನ್ನಡಿಗರು

ಅಧ್ಯಯನ, ಸಂಶೋಧನೆ  ಮತ್ತು ವರದಿಯ  ಹೈಲೈಟ್ಸ್ ಇಲ್ಲಿದೆ

* ಕೊರೋನಾ ಸೋಂಕು ತಗುಲಿದ್ದ  79  ರೋಗಿಗಳ ಮೇಲೆ ಪ್ರಯೋಗ ನಡೆಸಲಾಗಿತ್ತು
* ಈ SaNOtize(ಸಾನೋಟೈಜ್) ಆರಂಭದಲ್ಲಿಯೇ SARS-CoV-2 ಸೋಂಕಿನ ಮೇಲೆ ದಾಳಿ ಮಾಡಿತು.
* 72  ಗಂಟೆಗಳ ಅವಧಿಯಲ್ಲಿ ಶೇ. 99 ವೈರಸ್ ರೋಗಿಯಿಂದ ದೂರವಾಯಿತು.
* ಈ ರೋಗಿಗಳಲ್ಲಿ ಹೆಚ್ಚಿನವರು ಯುಕೆ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದರು.
* ಜಾಗತಿಕವಾಗಿ ಕಾಡುತ್ತಿರುವ ಕೊರೋನಾಕ್ಕೆ ಪರಿಹಾರ ಇದು ಎಂದು NHS ಕ್ಲಿನಿಕಲ್ ಪ್ರಯೋಗದ ಸಲಹೆಗಾರ ವೈದ್ಯಕೀಯ ವೈರಾಲಜಿಸ್ಟ್ ಮತ್ತು ಮುಖ್ಯ ತನಿಖಾಧಿಕಾರಿ ಡಾ. ಸ್ಟೀಫನ್ ವಿಂಚೆಸ್ಟರ್ ಹೇಳುತ್ತಾರೆ. 
*ಈ ಮೂಗಿನ ಸ್ಪ್ರೆ  COVID-19 ಚಿಕಿತ್ಸೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಬಲ್ಲದು ಮತ್ತು ನಂತರದ ಪ್ರಸರಣವನ್ನು ಕಡಿಮೆ ಮಾಡುತ್ತದೆ.
*  ಶ್ವಾಸಕೋಶದೆಡೆಗೆ ವೈರಸ್ ಪ್ರವೇಶ ಮಾಡುವುದಕ್ಕೆ ಇದು ಬ್ರೇಕ್ ಹಾಕಲಿದೆ.
* ಇದು ನೈಟ್ರಿಕ್ ಆಕ್ಸೈಡ್ (NO) ಅನ್ನು ಆಧರಿಸಿ ಕೆಲಸ ಮಾಡುತ್ತದೆ
* ಮಾನವನದ ದೇಹದಲ್ಲಿಯೇ ರೋಗಕ್ಕೆ ಮಾರಕವಾಗುವ ಅಂಶ ಉತ್ಪತ್ತಿ ಮಾಡಿ ಅಲ್ಲಿಯೇ ವೈರಸ್ ಕೊಲೆಯಾಗುವಂತೆ ನೋಡಿಕೊಳ್ಳುತ್ತದೆ.
* ಯುಕೆ ಮತ್ತು ಕೆನಡಾದದ ಶಾಲೆಗಳು ಸೇರಿದಂತೆ ಹಲವು ಕಡೆ ಇದರ ತುರ್ತು ಬಳಕೆಗೆಗೆ ಮನವಿ ಮಾಡಿಕೊಳ್ಳಲಾಗಿದೆ.
* ತ್ವರಿತ ಅನುಮೋದನೆ ಮತ್ತು ಉತ್ಪಾದನೆಗೆ ಅವಕಾಶ ಸಿಕ್ಕರೆ ದೊಡ್ಡ ಮಟ್ಟದ ಬದಲಾವಣೆ ಸಾಧ್ಯ ಎಂದು ಕಂಪನಿ  ಹೇಳಿದೆ.

ಹೇಗೆ ಕೆಲಸ ಮಾಡುತ್ತದೆ: 
ಆಶ್‌ಫರ್ಡ್ ಮತ್ತು ಸೇಂಟ್ ಪೀಟರ್ಸ್ ಹಾಸ್ಪಿಟಲ್ಸ್ ಎನ್‌ಎಚ್‌ಎಸ್ ಫೌಂಡೇಶನ್ ನಲ್ಲಿ ಡಾ. ಸ್ಟೀಫನ್ ವಿಂಚೆಸ್ಟರ್ ಮತ್ತು ಡಾ. ಐಸಾಕ್ ಜಾನ್ ಅವರು ಅಧ್ಯಯನ ವರದಿಯನ್ನು ಸರಳವಾಗಿ ತಿಳಿಸಿದ್ದಾರೆ.  ಆರು ದಿನಗಳ ಕಾಲ  ಸ್ಪ್ರೇ ಮತ್ತು ವೈರಸ್ ನಡುವೆ ಹೋರಾಟ ನಡೆಯಲಿದೆ.

ಕೊರೋನಾ ಕಂಡುಹಿಡಿಯುವ ಮೂರು ವಿಧಾನ.. ಮೊದಲು ತಿಳಿದುಕೊಳ್ಳಿ

ಮೂಗಿನ ಮೂಲಕ ವೈರಸ್ ಎಂಟ್ರಿಯಾಗುವುದನ್ನು ತಪ್ಪಿಸುತ್ತದೆ.  ಬೇರೆ ಎಲ್ಲ ಥೆರಫಿಗಳಿಗಿಂತ ಇದು ಸರಳ ಮತ್ತು ಸುಲಭ  ಎಂದು  ವೈದ್ಯರು  ಹೇಳುತ್ತಾರೆ. SaNOtize ಸಂಶೋಧನೆ ಮತ್ತು ಅಭಿವೃದ್ಧಿ ಕಂಪನಿ ಈ ಹಿಂದಿನಿಂದಲೂ ನೈಟ್ರಿಕ್  ಆಕ್ಸೈಡ್ ನಲ್ಲಿ ಪೆಟೆಂಟ್ ಪಡೆದುಕೊಂಡಿದ್ದು ಇದಕ್ಕೆ  ಎಲ್ಲ ಸರ್ಕಾರಗಳ ಮಾನ್ಯತೆ ಸಿಕ್ಕರೆ ಮುಂದೆ ಕೊರೋನಾದಿಂದ ಮುಕ್ತಿ ಸಿಗಬಹುದು ಎಂಬುದು ಎಲ್ಲರ ನಿರೀಕ್ಷೆ
 

 

click me!