
ಸಿಂಗಾಪುರ(ಏ. 20): ಕನ್ನಡ ಸಂಘ ಸಿಂಗಾಪುರ 25 ವರ್ಷಗಳ ಯುಗಾದಿ ಸಂಭ್ರಮವನ್ನು ಹಮ್ಮಿಕೊಂಡಿದೆ. ಮೇ 1 ರಂದು ಈ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಕೊರೋವಾ ವೈರಸ್ ಕಾರಣದಿಂದ ಆನ್‌ಲೈನ್‌ನಲ್ಲಿ ಈ ಕಾರ್ಯಕ್ರಮವನ್ನು ನೋಡಿ ಸಂಭ್ರಮಿಸಬಹುದು.
'ಹೊಂಗೆ ಹೂವ ತೊಂಗಲಲ್ಲಿ' ಎಂಬ ಈ ವಿಶೇಷ ಕಾರ್ಯಕ್ರಮವು ಮೇ 1 ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಕಲಿ-ಕನ್ನಡ ಕಲಿ ಅನ್‌ಲೈನ್ ತರಗತಿಗಳಿಗೆ ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗರಭರಣ ಅವರು ಕನ್ನಡ ಕವಿಗಳ ಸಮ್ಮುಖದಲ್ಲಿ ಚಾಲನೆ ನೀಡಲಿದ್ದಾರೆ.
ಯುಗಾದಿ ರಾಶಿ ಫಲ, ಮದುವೆ-ಮನೆ, ಸಮಸ್ಯೆ-ಪರಿಹಾರ?
ಕನ್ನಡ ಚಿತ್ರ ನಿರ್ದೇಶಕರೂ ಆದ ಟಿ.ಎಸ್ ನಾಗಾಭರಣ, ಕವಿ ಬಿ.ಆರ್. ಲಕ್ಷ್ಮಣರಾವ್, ದುಂಡಿರಾಜ್ ಈ ಕಾರ್ಯಕ್ರದಲ್ಲಿ ಪಾಲ್ಗೊಳ್ಳಲಿದ್ದಾರೆ. ಭೃಂಗದ ಸಂಗೀತ ಕೇಳಿಯಲ್ಲಿ ಅಜಯ್ ವಾರಿಯರ್ ಮತ್ತು ಶಶಿಕಲಾ ರಸಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ದೀಪಕ್, ಪ್ರಕಾಶ್ ಆಂಟೋನಿ ಪಾಲ್ಗೊಳ್ಳಲಿದ್ದಾರೆ. ಯುಟ್ಯೂಬ್ ಮೂಲಕ ನೇರ ಪ್ರಸಾರವನ್ನು ನೋಡಲು ಅವಕಾಶ ಇದೆ.
ವಿದೇಶಗಳಲ್ಲಿ ಸಂಘ-ಸಂಸ್ಥೆಗಳು ಕನ್ನಡವನ್ನು ಮೊಳಗಿಸುತ್ತಲೇ ಬಂದಿವೆ. ಅನಿವಾಸಿ ಕನ್ನಡಿಗರ ನಾವಿಕ, ಅಕ್ಕ ಸಮ್ಮೇಳನಗಳು ಪ್ರತಿಭೆ ಅನಾವರಣಕ್ಕೆ ವೇದಿಕೆ ಮಾಡಿಕೊಟ್ಟಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ