ದೇಶದೇಶದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಜೋರಾಗಿದೆ. ದಿನದಿಂದ ದಿನಕ್ಕೆ ಪ್ರಕರಣಗಳು ಅತ್ಯಧಿಕ ಸಂಖ್ಯೆಯಲ್ಲಿ ದಾಖಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಫ್ಲೈಟ್‌ಗಳಿಗೆ ನಿಷೇಧ ಹೇರಲಾಗಿದೆ.
ದುಬೈ/ ಮೆಲ್ಬರ್ನ್(ಏ.23): ಭಾರತದಲ್ಲಿ ಕೊರೋನಾ ಪ್ರಕರಣಗಳು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ದ ವಿಮಾನಯಾನ ಸಂಸ್ಥೆಗಳು ಭಾರತದಿಂದ ದುಬೈಗೆ ಆಗಮಿಸುವ ವಿಮಾನಗಳನ್ನು ಏ.25ರಿಂದ 10 ದಿನಗಳ ಮಟ್ಟಿಗೆ ಅಮಾನತುಗೊಳಿಸಿವೆ.
ಭಾರತದಿಂದ ದುಬೈಗೆ ಪ್ರಯಾಣಿಸಬೇಕಿದ್ದ ಎಮಿರೇಟ್ಸ್, ಫ್ಲೈ ದುಬೈ, ಏರ್ ಅರೇಬಿಯಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಆದರೆ, ಒಂದು ವೇಳೆ ಭಾರತೀಯರು ಬೇರೆ ದೇಶದಲ್ಲಿ 14 ದಿನಗಳ ಕಾಲ ತಂಗಿದ್ದರೆ ಅಲ್ಲಿಂದ ಯುಎಇಗೆ ಆಗಮಿಸಲು ಅವಕಾಶ ನೀಡಲಾಗಿದೆ.
ಭಾರತದ ವಿಮಾನಗಳಿಗೆ 2 ವಾರಗಳ ಕಾಲ ಹಾಂಗ್‌ಕಾಂಗ್ ನಿಷೇಧ! ..
ಇದೇ ವೇಳೆ ಭಾರತದಿಂದ ಆಗಮಿಸುವ ವಿಮಾನಗಳನ್ನು ಶೇ.30ರಷ್ಟುತಗ್ಗಿಸುವುದಾಗಿ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸ್ಸನ್ ಗುರುವಾರ ಘೋಷಿಸಿದ್ದಾರೆ. ಈ ನಡುವೆ ಬ್ರಿಟನ್ನಿನ ಅತಿ ದೊಡ್ಡ ವಿಮಾನ ನಿಲ್ದಾಣ ಹೀಥ್ರೂ ಏರ್‌ಪೋರ್ಟ್ ಭಾರತದಿಂದ ಹೊರಟಿದ್ದ 4 ಅಂತಾರಾಷ್ಟ್ರೀಯ ವಿಮಾನಗಳ ನಿಲುಗಡೆಗೆ ನಿರಾಕರಿಸಿದೆ. ಕೆಂಪು ಪಟ್ಟಿಯಲ್ಲಿರುವ ದೇಶಗಳ ವಿಮಾನಗಳಿಗೆ ನಿಷೇಧ ಹೇರಲಾಗಿದೆ. ಭಾರತವನ್ನೂ ಈ ಪಟ್ಟಿಗೆ ಸೇರಿಸಲಾಗಿದೆ ಎಂದು ಏರ್‌ಪೋರ್ಟ್ ತಿಳಿಸಿದೆ.