ಮರುಭೂಮಿ ಯುಎಇನಲ್ಲಿ ಭಾರೀ ಮಳೆ, ಪ್ರವಾಹ, ವಿಡಿಯೋ ವೈರಲ್!

Published : Jul 30, 2022, 08:50 AM IST
ಮರುಭೂಮಿ ಯುಎಇನಲ್ಲಿ ಭಾರೀ ಮಳೆ, ಪ್ರವಾಹ, ವಿಡಿಯೋ ವೈರಲ್!

ಸಾರಾಂಶ

- 27 ವರ್ಷದಲ್ಲೇ ಗರಿಷ್ಠ ಮಳೆಗೆ 6 ಸಾವು - ದೇಶದಲ್ಲಿ  ರೆಡ್‌ ಅಲರ್ಟ್‌ ಘೋಷಣೆ - ನೀರಿನಲ್ಲಿ ಕೊಚ್ಚಿಹೋದ ಕಾರುಗಳು

ಅಬುಧಾಬಿ (ಜುಲೈ 30): ಮರುಭೂಮಿ ದೇಶವಾದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ಯಲ್ಲಿ ಕಳೆದ ಬುಧವಾರ ಮತ್ತು ಗುರುವಾರ ದಿಢೀರ್‌ ಭಾರೀ ಮಳೆ ಸುರಿದ ಪರಿಣಾಮ ಭಾರೀ ಪ್ರವಾಹ ಕಾಣಿಸಿಕೊಂಡಿದೆ. ಕಳೆದ 30 ವರ್ಷಗಳಲ್ಲೇ ಕಂಡುಕೇಳರಿಯದ ಭಾರೀ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳಲ್ಲಿ ಆಳೆತ್ತರಕ್ಕೆ ನೀರು ನಿಂತಿತ್ತು. ಜೊತೆಗೆ ಕಾರು ಸೇರಿದಂತೆ ವಾಹನಗಳು ನೀರಿನಲ್ಲಿ ತೆಲುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಮಳೆ ಸಂಬಂಧಿ ದುರ್ಘಟನೆಗಳಿಗೆ 6 ಜನ ಬಲಿಯಾಗಿದ್ದು, ಓರ್ವ ಇನ್ನೂ ನಾಪತ್ತೆಯಾಗಿದ್ದಾನೆ. ಸಾವನ್ನಪ್ಪಿದವರೆಲ್ಲಾ ಏಷ್ಯಾ ಮೂಲದ ಪ್ರಜೆಗಳು ಎಂದು ಅಧಿಕಾರಿಗಳು ಹೇಳಿದ್ದಾರೆ. ಶಾರ್ಜಾ, ಫುಜೈರಾಹ್‌, ರಸ್‌ ಅಲ್‌ ಕೈಮಚ್‌ ನಗರಗಳಲ್ಲಿ ಭಾರೀ ಮಳೆಯಾಗಿದೆ. ಈ ಪೈಕಿ ಫುಜೈರಾಹ್‌ ನಗರದಲ್ಲಿ 2 ದಿನದಲ್ಲಿ 255 ಮಿ.ಮೀನಷ್ಟುಭಾರೀ ಮಳೆ ಸುರಿದಿದ್ದು, ಇದು ಕಳೆದ 27 ವರ್ಷಗಳ ಗರಿಷ್ಠ ಮಳೆಯಾಗಿದೆ. ದೇಶದಲ್ಲಿ ವಾರ್ಷಿಕ 140- 200 ಮಿ.ಮೀನಷ್ಟುಮಳೆ ಸುರಿಯುತ್ತದೆ. ಕೆಲವು ಕಡೆ ಮಾತ್ರ 400 ಮಿ.ಮೀವರೆಗೂ ಮಳೆ ಸುರಿಯುತ್ತದೆ. ಆದರೆ ಒಂದೀಡಿ ವರ್ಷದ ಮಳೆ ಎರಡು ದಿನದಲ್ಲಿ ಸುರಿದ ಕಾರಣ ಭಾರೀ ಅನಾಹುತ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಸೃಷ್ಟಿಯಾದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಸುಮಾರು 870 ಜನರನ್ನು ತುರ್ತು ರಕ್ಷಣಾ ತಂಡಗಳು ರಕ್ಷಿಸಿವೆ. ಭೀಕರ ಪ್ರವಾಹಕ್ಕೆ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ಸರ್ಕಾರ ರೆಡ್‌ ಅಲರ್ಚ್‌ ಘೋಷಿಸಿದೆ. 3,897 ಜನರನ್ನು ಸರ್ಕಾರ ತಾತ್ಕಾಲಿಕ ಆಶ್ರಯ ತಾಣಗಳಲ್ಲಿ ಇರಿಸಲಾಗಿದೆ.

27 ವರ್ಷಗಳಲ್ಲೇ ದಾಖಲೆಯ ಮಳೆ: ಯುಎಇ 27 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ. ಎರಡು ದಿನಗಳ ನಿರಂತರ ಮಳೆಯ ನಂತರ, ಫುಜೈರಾಹ್‌ ಬಂದರು ನಿಲ್ದಾಣವು 255.2 ಮಿಮೀ ನೀರನ್ನು ದಾಖಲಿಸಿದೆ, ಇದು ಜುಲೈ ತಿಂಗಳಲ್ಲಿ ಯುಎಇಯಲ್ಲಿ ಅತಿ ಹೆಚ್ಚು ಪ್ರಮಾಣದ ಮಳೆ ಎನಿಸಿದೆ. ಮಸಾಫಿಯಲ್ಲಿ ಎರಡನೇ ಅತಿಹೆಚ್ಚು 209.7ಮಿಮೀ ದಾಖಲಾಗಿದೆ ಮತ್ತು 187.9ಮಿಮೀ ಮಳೆಯೊಂದಿಗೆ ಫುಜೈರಾ ವಿಮಾನ ನಿಲ್ದಾಣದಲ್ಲಿ ಮೂರನೇ ಅತಿಹೆಚ್ಚು ದಾಖಲಾಗಿದೆ.

ಬಹುತೇಕ ಕೇಂದ್ರಗಳು ಕ್ಲೋಸ್: ರಾಷ್ಟ್ರೀಯ ಹವಾಮಾನ ಕೇಂದ್ರದ (ಎನ್‌ಸಿಎಂ) ಡಾ ಅಹ್ಮದ್ ಹಬೀಬ್ ಅವರು ಗುರುವಾರ ಖಲೀಜ್ ಟೈಮ್ಸ್‌ ಪತ್ರಿಕೆಗೆ ಮಾತನಾಡಿದ್ದು “ನಾವು ಭಾರತದ ಕಡೆಯಿಂದ ಕಡಿಮೆ ಒತ್ತಡವನ್ನು ಹೊಂದಿದ್ದು, ಮೇಲಿನ ಮತ್ತು ಮೇಲ್ಮೈ ವಾಯು ಕುಸಿತವು ಪಾಕಿಸ್ತಾನ ಮತ್ತು ಇರಾನ್‌ನ ಭಾಗಗಳಿಂದ ವಿಸ್ತರಿಸಿದೆ. ಯುಎಇ ಜುಲೈ 25 ಮತ್ತು 26 ರಂದು ವಿಶೇಷವಾಗಿ ದೇಶದ ಪೂರ್ವ ಭಾಗದಲ್ಲಿ ಕಡಿಮೆ ಒತ್ತಡದ ಪರಿಣಾಮವನ್ನು ಅನುಭವಿಸಿತು' ಎಂದಿದ್ದಾರೆ.

ಆಗಸ್ಟ್‌ 27ರಿಂದ ಯುಎಇನಲ್ಲಿ ಏಷ್ಯಾಕಪ್‌ ಟಿ20 ಟೂರ್ನಿ..!

ಕ್ಲೌಡ್ ಲೌಂಜ್ ಎಂದು ಕರೆಯಲ್ಪಡುವ ಖೋರ್ ಫಕ್ಕನ್ನ ಅಲ್ ಸುಹುಬ್ ರೆಸ್ಟ್ ಏರಿಯಾವನ್ನು ಅಸ್ಥಿರ ಹವಾಮಾನದ ಕಾರಣದಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಭಾರೀ ಮಳೆಯಿಂದಾಗಿ ಕಲ್ಲುಗಳು ಉರುಳಿದ ನಂತರ ಶಾರ್ಜಾ ಪೊಲೀಸರು ಅಲ್ ಹರಾಯ್-ಖೋರ್ ಫಕ್ಕನ್ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಿದ್ದಾರೆ. ಫುಜೈರಾಹ್‌  ಪೊಲೀಸರು ಕೋವಿಡ್ -19 ಪರೀಕ್ಷಾ ಕೇಂದ್ರವನ್ನು ಭಾರೀ ಮಳೆಯ ಕಾರಣದಿಂದಾಗಿ ಮುಚ್ಚಿದ್ದಾರೆ.

ಯುಎಇಯಲ್ಲಿ ಮಗಳ ಬ್ಯುಸಿನೆಸ್‌ಗೆ ಸಹಾಯ ಮಾಡಿ ಎಂದು ಶಾರ್ಜಾ ರೂಲರ್‌ಗೆ ಕೇಳಿದ್ದ ಕೇರಳ ಸಿಎಂ!

ಅಂದಾಜು 70 ಎಚ್ಚರಿಕೆ: 1995 ರಲ್ಲಿ ಯುಎಇ ಕೂಡ ಭಾರೀ ಮಳೆಗೆ ಸಾಕ್ಷಿಯಾಗಿತ್ತು ಎಂಬ ಅಂಶವನ್ನು ತಿಳಿಸಿದ ಡಾ.ಹಬೀಬ್‌, 1995ರಲ್ಲಿ ಖೋರ್ ಫಕ್ಕನ್‌ನಲ್ಲಿ 175.6 ಮಿಮೀ ಮಳೆ ದಾಖಲಾಗಿತ್ತು ಎಂದಿದ್ದಾರೆ. "ಕಳೆದ ಮೂರು ದಿನಗಳಲ್ಲಿ ಎನ್‌ಸಿಎಂ ಪೊಲೀಸ್ ಸೇರಿದಂತೆ ಪ್ರತಿ ಸಚಿವಾಲಯಕ್ಕೆ 20 ಹವಾಮಾನ ಎಚ್ಚರಿಕೆಗಳನ್ನು ನೀಡಲಾಗಿದೆ. ಜುಲೈ 25-28 ರಿಂದ ಇದು ಪ್ರಾರಂಭವಾಗುದೆ.  ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ನಾವು ಎಲ್ಲರಿಗೂ 70 ಎಚ್ಚರಿಕೆಗಳನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!