ಎಮ್ಮೆಗಳಿಂತ ಕಡಿಮೆ ದರಕ್ಕೆ ಸಿಂಹಗಳನ್ನು ಖರೀದಿ ಮಾಡ್ಬಹುದು.. ಆಫರ್‌ ಪಾಕಿಸ್ತಾನದಲ್ಲಿ ಮಾತ್ರ!

Published : Jul 29, 2022, 05:03 PM ISTUpdated : Jul 29, 2022, 05:49 PM IST
ಎಮ್ಮೆಗಳಿಂತ ಕಡಿಮೆ ದರಕ್ಕೆ ಸಿಂಹಗಳನ್ನು ಖರೀದಿ ಮಾಡ್ಬಹುದು.. ಆಫರ್‌ ಪಾಕಿಸ್ತಾನದಲ್ಲಿ ಮಾತ್ರ!

ಸಾರಾಂಶ

ಪಾಕಿಸ್ತಾನದ ಲಾಹೋರ್‌ ಸಫಾರಿ ಮೃಗಾಲಯದ ಆಡಳಿತ ಮಂಡಳಿ, ಆಗಸ್ಟ್‌ ಮೊದಲ ವಾರದ ವೇಳೆಗೆ ತನ್ನಲ್ಲಿರುವ ಅಂದಾಜು 12 ಸಿಂಹಗಳನ್ನು ಮಾರಾಟ ಮಾಡುವ ಗುರಿ ಇರಿಸಿಕೊಂಡಿದೆ.

ಲಾಹೋರ್‌ (ಜುಲೈ 29): ಸಿಂಹ ಕಾಡಿನ ರಾಜ. ಮೃಗಾಲಯಗಳಲ್ಲಿ ಸಿಂಹಗಳಿದ್ದರೆ ಅದರ ಗತ್ತೇ ಬೇರೆ. ಆದರೆ, ಪಾಕಿಸ್ತಾನದಲ್ಲಿ ಇಂಥ ಅಪರೂಪದ ಸಿಂಹಗಳು ಎಮ್ಮೆಗಳಿಗಿಂತ ಕಡಿಮೆ ಮೊತ್ತದಲ್ಲಿ ಮಾರಾಟವಾಗಲು ಸಿದ್ಧವಾಗಿದೆ. ಹೌದು ನೀವು ಓದಿದ್ದು ನಿಜ. ಭಾರತದ ನೆರೆಯ ರಾಷ್ಟ್ರದಲ್ಲಿ ಕಾಡಿನ ರಾಜನನ್ನು ನೀವು ಎಮ್ಮೆಗಳಿಗಿಂತ ಕಡಿಮೆ ರೇಟ್‌ನಲ್ಲಿ ಖರೀದಿ ಮಾಡಬಹುದು ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಲಾಹೋರ್‌ ಸಫಾರಿ ಮೃಗಾಲಯದ ಆಡಳಿತ ಮಂಡಳಿ ತನ್ನಲ್ಲಿರುವ ಕೆಲವೊಂದು ಆಫ್ರಿಕನ್‌ ಸಿಂಹಗಳನ್ನು ಮಾರಾಟ ಮಾಡಲು ಸಿದ್ಧವಾಗಿದೆ. ಪ್ರಸ್ತುತ ಈ ಸಿಂಹಗಳು ಮೃಗಾಲಯದ ಸೆರೆಯಲ್ಲಿವೆ. ಅಂದಾಜು ಪ್ರತಿ ಸಿಂಹಗಳಿಗೆ 50 ಸಾವಿರ ರೂಪಾಯಿ (1.50 ಲಕ್ಷ ಪಾಕಿಸ್ತಾನ ರೂಪಾಯಿ) ನಿಗದಿ ಮಾಡಲಾಗಿದೆ ಎಂದು ಸಾಮ್ನಾ ಟಿವಿ ವರದಿ ಮಾಡಿದೆ. ಮತ್ತೊಂದೆಡೆ, ಆನ್‌ಲೈನ್ ಮಾರುಕಟ್ಟೆಯಲ್ಲಿ ಇಲ್ಲಿನ ಎಮ್ಮೆಗಳು 1.17 ಲಕ್ಷ (3.50 ಲಕ್ಷ ಪಾಕಿಸ್ತಾನ ರೂಪಾಯಿ) ಗಳಿಂದ 3.35 ಲಕ್ಷ ರೂಪಾಯಿಗೆ (1 ಮಿಲಿಯನ್‌ ಪಾಕಿಸ್ತಾನ ರೂಪಾಯಿ) ಲಭ್ಯವಿದೆ. ಒಂದು ಅಂದಾಜಿನ ಪ್ರಕಾರ, ಮುಂದಿನ ಆಗಸ್ಟ್‌ ಮೊದಲವಾರದ ವೇಳೆಗೆ ತನ್ನಲ್ಲಿರುವ ಅಂದಾಜು 12 ಸಿಂಹಗಳನ್ನು ಮಾರಾಟ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಪ್ರಯತ್ನ ನಡೆಸಿದೆ.

ಮಾಂಸ ನೀಡೋಕು ಹಣವಿಲ್ಲ: ಮೂರು ಸಿಂಹಿಣಿಗಳು ಸೇರಿದಂತೆ ಒಟ್ಟು 12 ಸಿಂಹಗಳನ್ನು ಪ್ರಸ್ತುತ ಸೆರೆಯಲ್ಲಿ ಇಡಲಾಗಿದೆ. ಸಿಂಹಗಳನ್ನು ಖಾಸಗಿ ವಸತಿ ಯೋಜನೆಗಳು ಅಥವಾ ಪಶುಸಂಗೋಪನೆ ಉತ್ಸಾಹಿಗಳಿಗೆ ಪ್ರೀಮಿಯಂನಲ್ಲಿ ಮಾರಾಟ ಮಾಡಲಾಗುತ್ತದೆ. ಮೃಗಾಲಯದ ಅಧಿಕಾರಿಗಳು ಮೃಗಾಲಯದಲ್ಲಿ ಪ್ರಾಣಿಗಳ ನಿರ್ವಹಣೆ ಮತ್ತು ಇತರ ವೆಚ್ಚಗಳನ್ನು ಪೂರೈಸುವ ಪ್ರಯತ್ನದಲ್ಲಿ ಸಿಂಹಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಸಿಂಹಗಳನ್ನು ನಿರ್ವಹಣೆ ಮಾಡುವುದು ಕಷ್ಟ ಮಾತ್ರವಲ್ಲದೆ, ದುಬಾರಿಯೂ ಆಗಿದೆ. ಸಿಂಹಗಳು ಪ್ರತಿ ದಿನ 8 ರಿಂದ 9 ಕೆಜಿ ಮಾಂಸವನ್ನು ಸೇವನೆ ಮಾಡುತ್ತದೆ.

ಪಾಕ್ ಪ್ರಧಾನಿ ಶೆಹಬಾಜ್ - ಇಮ್ರಾನ್ ಖಾನ್ ನಡುವೆ ಟ್ವಿಟ್ಟರ್‌ ವಾರ್

ಮೃಗಾಲಯದ ಆಡಳಿತ ಮಂಡಳಿ ಪ್ರಕಾರ, ನಿರಂತರವಾಗಿ ಕೆಲವೊಂದು ಸಿಂಹಗಳನ್ನು ತಾವು ಮಾರಾಟ ಮಾಡಲು ಬಯಸಿದ್ದು, ಆ ಮೂಲಕ ವೆಚ್ಚವನ್ನು ತಗ್ಗಿಸಲು ಪ್ರಯತ್ನಿಸುವ ಕೆಲಸದಲ್ಲಿದ್ದೇವೆ ಎಂದು ಸಾಮ್ನಾ ಟಿವಿ ವರದಿ ಮಾಡಿದೆ.ಕಳೆದ ವರ್ಷ ಸಫಾರಿ ಮೃಗಾಲಯದಲ್ಲಿ ಸೀಮಿತ ಸ್ಥಳಾವಕಾಶದ ನೆಪದಲ್ಲಿ 14 ಸಿಂಹಗಳನ್ನು ನಾಗರಿಕರಿಗೆ ಮಾರಾಟ ಮಾಡಲಾಗಿತ್ತು.

ಅರೆಸ್ಟ್ ಆದ ಪಾಕಿಸ್ತಾನಿ ಎಜೆಂಟ್‌ಗಳೆಲ್ಲಾ ಆರ್‌ಎಸ್ಎಸ್ ಹಾಗೂ ಹಿಂದುಗಳು, RJD ನಾಯಕನ ವಿವಾದ!

ಒಟ್ಟು 40 ಸಿಂಹಗಳು:ಲಾಹೋರ್‌ನ ಸಫಾರಿ ಮೃಗಾಲಯವು 142 ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು ಹಲವಾರು ಕಾಡು ಪ್ರಾಣಿಗಳನ್ನು ಹೊಂದಿದೆ. ಆಡಳಿತವು ಸಿಂಹಗಳ ಮಾರಾಟಕ್ಕೆ ಮುಂದಾಗಿದೆ, ಏಕೆಂದರೆ ಅವುಗಳನ್ನು ನಿರ್ವಹಿಸುವುದು ಕಷ್ಟಕರ ಮತ್ತು ದುಬಾರಿಯಾಗಿದೆ ಎಂದು ವರದಿ ಹೇಳಿದೆ. ಈ ಮೃಗಾಲಯದಲ್ಲಿ ಈವರೆಗೂ 40 ಸಿಂಹಗಳಿವೆ.

ಮೃಗಾಲಯದಲ್ಲಿ ಆಹಾರದ ಅಭಾವ: ಒಂದು ವರ್ಷದ ಹಿಂದೆ ಪಾಕಿಸ್ತಾನದ ಕರಾಚಿಯಿಂದ ಇಂಥದ್ದೇ ಪ್ರಸಂಗ ವರದಿಯಾಗಿತ್ತು. ಕರಾಚಿಯಲ್ಲಿರುವ ಮೃಗಾಲಯದಲ್ಲಿನ ಪ್ರಾಣಿಗಳಿಗೆ ಅಗತ್ಯವಾದ ಆಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಅರೋಪಿಸಲಾಗಿತ್ತು. ಇದನ್ನು ಕರಾಚಿ ಮಹಾನಗರ ಪಾಲಿಕೆ ನಿರಾಕರಿಸಿದ್ದರು. ಆ ಸಮಯದಲ್ಲ ಪ್ರಕಟವಾದ ವಿಡಿಯೋದಲ್ಲಿ ಆಹಾರವಿಲ್ಲದೆ, ಬಳಲಿ ಹೋಗಿದ್ದ ಸಿಂಹಗಳ ವಿಡಿಯೋ ವೈರಲ್‌ ಆಗಿದ್ದವು. 2021ರ ಫೆಬ್ರವರಿಯಿಂದ ಬಿಲ್‌ ಪಾವತಿಯನ್ನು ಮಾಡದ ಕಾರಣಕ್ಕಾಗಿ ನವೆಂಬರ್ ವೇಳೆಗೆ ಮೃಗಾಲಯದಲ್ಲಿ ಆಹಾರ ವಿತರಣೆಯನ್ನು ನಿಲ್ಲಿಸಿದ್ದರು. ಅಂದು ವೈರಲ್ ಆಗಿದ್ದ ವಿಡಿಯೋವನ್ನು ಹಂಚಿಕೊಳ್ಳುವ ವೇಳೆ ಬಹುತೇಕ ಮಂದಿ ಮೃಗಾಲಯದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಆದರೆ, ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದ ಮೃಗಾಲಯದ ಅಧಿಕಾರಿಗಳು ಇದು ಹಳೆಯ ವಿಡಿಯೋವಾಗಿದ್ದು, ಮೃಗಾಲಯಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇದನ್ನು ವೈರಲ್ ಮಾಡಲಾಗುತ್ತಿದೆ ಎಂದು ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ