ಭಾರತೀಯ ಪ್ರವಾಸಿಗರಿಗೆ ಅಬುಧಾಬಿಯಿಂದ ಬಿಗ್ ಆಫರ್, ಉಚಿತ ಎಂಟ್ರಿ ವೀಸಾ ಘೋಷಿಸಿದ ಯುಎಇ

Published : Aug 12, 2026, 11:30 AM IST
free visa and ticket

ಸಾರಾಂಶ

ಭಾರತೀಯರಿಗೆ ಇದೀಗ ಬಂಪರ್ ಆಫರ್ ಘೋಷಣೆಯಾಗಿದೆ. ಯುಎಇ ಎಂಟ್ರಿ ವೀಸಾ ಸಂಪೂರ್ಣ ಉಚಿತ. ಮುಂದಿನ 3 ತಿಂಗಳ ಅವಧಿಗೆ ಈ ಆಫರ್ ಘೋಷಿಸಲಾಗಿದೆ, ಯಾರಿಗೆಲ್ಲಾ ಈ ಸೌಲಭ್ಯವಿದೆ, ಬಳಸಿಕೊಳ್ಳುವುದು ಹೇಗೆ?

ಅಬುಧಾಬಿ (ಆ.12) ಪ್ರವಾಸಕ್ಕೆ ಪ್ಲಾನ್ ಮಾಡುತ್ತಿರುವ ಭಾರತೀಯರಿಗೆ ಯುಎಇ ಬಿಗ್ ಆಫರ್ ಘೋಷಿಸಿದೆ. ಅಬುಧಾಬಿ ಮುಂದಿನ ಮೂರು ತಿಂಗಳ ಅವಧಿಗೆ ಸಂಪೂರ್ಣ ಉಚಿತ ಎಂಟ್ರಿ ವೀಸಾ ನೀಡುತ್ತಿದೆ. ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಭಾರತೀಯರಿಗೆ ಈ ಆಫರ್ ಘೋಷಿಸಲಾಗಿದೆ. ಭಾರತೀಯರು ಮುಂದಿನ 3 ತಿಂಗಳ ಅವಧಿಯಲ್ಲಿ ಗಲ್ಫ್ ರಾಷ್ಟ್ರಗಳ ಪ್ರವಾಸ ಅತೀ ಕಡಿಮೆ ವೆಚ್ಚದಲ್ಲಿ ಮುಗಿಸಬಹುದು. ಅಬುಧಾಬಿಯ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆ ಈ ಆಫರ್ ಘೋಷಿಸಿದೆ.

ಉಚಿತ ಎಂಟ್ರಿ ವೀಸಾ ಸೌಲಭ್ಯ ಪಡೆಯುವುದು ಹೇಗೆ?

ಅಬುಧಾಬಿ ಘೋಷಿಸಿರುವ ಉಚಿತ ಎಂಟ್ರಿ ವೀಸಾ ಸೌಲಭ್ಯ ಪಡೆಯಲು ಹೆಚ್ಚಿನ ಕಂಡೀಷನ್ ಇಲ್ಲ. ಅಬುಧಾಬಿಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎತಿಹಾಡ್ ಏರ್‌ವೇಸ್ ಮೂಲಕ ಅಬುಧಾಬಿಗೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡುವ ಭಾರತೀಯ ಪ್ರಯಾಣಿಕರಿಗೆ ಉಚಿತ ಎಂಟ್ರಿ ವೀಸಾ ಸೌಲಭ್ಯ ಸಿಗಲಿದೆ. ಇಷ್ಟೇ ಅಲ್ಲ ಅಬುಧಾಬಿ ಮಾರ್ಗವಾಗಿ ಬೇರೆ ರಾಷ್ಟ್ರಗಳಿಗೆ ಪ್ರಯಾಣಿಸುವ ಭಾರತೀಯ ಪ್ರಯಾಣಿಕರಿಗೂ ಆಫರ್ ನೀಡಲಾಗಿದೆ. ಭಾರತದ ಕನೆಕ್ಟಿಂಗ್ ಪ್ರಯಾಣಿಕರು ಎತಿಹಾಡ್ ಲೇಓವರ್ ಆಯ್ಕೆ ಮಾಡಿಕೊಂಡರೆ 24 ಗಂಟೆಯಿಂದ 48 ಗಂಟೆಗಳ ಉಚಿತ ಟ್ರಾನ್ಸಿಟ್ ವೀಸಾ ಸಿಗಲಿದೆ. ಅಬುಧಾಬಿ ಮಾರ್ಗವಾಗಿ ಯುರೋಪ್, ಅಮೆರಿಕ ಅಥವಾ ಇತರ ದೇಶಗಳಿಗೆ ಪ್ರಯಾಣಿಸುವ ಭಾರತೀಯ ಕನೆಕ್ಟಿಂಗ್ ಪ್ರಯಾಣಿಕರು ಎತಿಹಾಡ್‌ನ 'ಸ್ಟಾಪ್‌ಓವರ್' (Stopover) ಅಥವಾ 'ಲೇಓವರ್' (Layover) ಸೌಲಭ್ಯವನ್ನು ಆಯ್ಕೆ ಮಾಡಿಕೊಂಡರೆ ಉಚಿತ ವೀಸಾ ಸಿಗಲಿದೆ. ಈ ಆಫರ್‌ನಿಂದ ಪ್ರಯಾಣಿಕರು ಹೆಚ್ಚುವರಿ ವೀಸಾ ಶುಲ್ಕ ಪಾವತಿಸಬೇಕಿಲ್ಲ. ಉಚಿತ ಎಂಟ್ರಿ ವೀಸಾ ಮೂಲಕ ಅಬುಧಾಬಿ ಪ್ರವೇಶಿಸಲು ಸಾಧ್ಯವಿದೆ. ಇಷ್ಟೇ ಅಲ್ಲ ಅಬುಧಾಬಿ ಜನಪ್ರಿಯ ಪ್ರವಾಸಿ ತಾಣಗಳಿಗೂ ಭೇಟಿ ನೀಡಲು ಅವಕಾಶವಿದೆ.

ಆರ್ಜಿ ಸಲ್ಲಿಕೆ ಹೇಗೆ?

ಭಾರತೀಯ ಪ್ರಯಾಣಿಕರು ಸುಲಭವಾಗಿ ಆನ್‌ಲೈನ್ ವೀಸಾ ಪಡೆಯಲು ಸಾಧ್ಯವಿದೆ. ಎತಿಹಾಡ್ ಏರ್‌ವೇಸ್ ಅಧಿಕೃತ ವೆಬ್‌‍ಸೈಟ್ ಅಥವಾ ಆ್ಯಪ್ ಮೂಲಕ ಟಿಕೆಟ್ ಬುಕಿಂಗ್ ಮಾಡಬೇಕು. ಟ್ರಾನ್ಸಿಟ್ ವೀಸಾ ಆಗಿದ್ದರೆ ಬುಕಿಂಗ್ ಪ್ರಕ್ರಿಯೆಯಲ್ಲಿ ಅಬುಧಾಬಿ ಸ್ಟಾಪ್ಓವರ್ ಆಯ್ಕೆ ಮಾಡಬೇಕು. ಹಾಸ್‌ಪೋರ್ಟ್ ಸೇರಿದಂತೆ ಇಥರ ವಿವರಗಳನ್ನು ವೆಬ್‌ಸೈಟ್ ಮೂಲಕ ನಮೂದಿಸಬೇಕು.

ಅಬುಧಾಬಿ ಪ್ರವಾಸೋದ್ಯಮದಲ್ಲಿ ಭಾರತೀಯರ ಕೊಡುಗೆ ಹೆಚ್ಚಿದೆ. ಹೀಗಾಗಿ ಭಾರತೀಯರಿಗೆ ಈ ಕೊಡುಗೆ ನೀಡಲಾಗುತ್ತಿದೆ. ಮುಂದಿನ 3 ತಿಂಗಳ ವರೆಗೆ ಉಚಿತ ವೀಸಾ ಆಫರ್ ಇರಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2,300 ವರ್ಷಗಳಷ್ಟು ಹಳೆಯ ಅಪರೂಪದ 3.74 ಲೀಟರ್‌ ಬಿಯರ್‌ ಪತ್ತೆ!
ಎಲ್ಲಾ ದಾಖಲೆ ಉಡೀಸ್‌ ಮಾಡಿದ ಯಶ್ 'ಟಾಕ್ಸಿಕ್'.. ಅಮೆರಿಕಾದಲ್ಲಿ ಆಗಿರೋ ಶಾಕಿಂಗ್ ಬೆಳವಣಿಗೆ ಏನ್ ಗೊತ್ತಾ?!