ಇಸ್ರೇಲ್‌, ಯುಎಇ ಐತಿಹಾಸಿಕ ಶಾಂತಿ ಒಪ್ಪಂದ

By Kannadaprabha NewsFirst Published Aug 14, 2020, 1:36 PM IST
Highlights

ಅಮೆರಿಕ ನಡೆಸಿದ ಸಂಧಾನದಿಂದ ಇಸ್ರೇಲ್‌ ಮತ್ತು ಸಂಯುಕ್ತ ಅರಬ್‌ ಸಂಸ್ಥಾನ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಆ.14): ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಿಂದ ಮಹತ್ವದ ಹೆಜ್ಜೆ ಇಟ್ಟಿರುವ ಇಸ್ರೇಲ್‌ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜತಾಂತ್ರಿಕ ಸಂಬಂಧಗಳ ಮರುಸ್ಥಾಪನೆಗೆ ಒಪ್ಪಿಗೆ ಸೂಚಿಸಿವೆ. 

ಈ ಮೂಲಕ ಇಸ್ರೇಲ್‌ ಜೊತೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿದ ಮೊದಲ ಗಲ್ಫ್ ದೇಶ ಎನ್ನುವ ಹೆಗ್ಗಳಿಕೆಗೆ ಯುಎಇ ದೇಶ ಪಾತ್ರವಾಗಿದೆ. ಇದುವರೆಗೆ ಇಸ್ರೇಲ್‌ ಯಾವುದೇ ಗಲ್ಫ್ ದೇಶದ ಜೊತೆ ರಾಜತಾಂತ್ರಿಕ ಸಂಬಂಧವನ್ನು ಹೊಂದಿರಲಿಲ್ಲ. ಅಮೆರಿಕ ನಡೆಸಿದ ಸಂಧಾನದಿಂದ ಈ ಒಪ್ಪಂದ ಏರ್ಪಟ್ಟಿದೆ. ಒಪ್ಪಂದದ ಭಾಗವಾಗಿ ಇಸ್ರೇಲ್‌ ಪಶ್ಚಿಮ ದಂಡೆಯ ಅತಿಕ್ರಮಿತ ಪ್ರದೇಶವನ್ನು ಬಿಟ್ಟುಕೊಡಲು ಒಪ್ಪಿಕೊಂಡಿದೆ.

ಶಬ್ಬಾಶ್..! ಹುಕ್ಕಾ ಸೇದುತ್ತ ಕೋರ್ಟ್‌ ವಿಚಾರಣೆಗೆ ವಕೀಲ ಹಾಜರ್‌!

ಇದೇ ವೇಳೆ ಇಸ್ರೇಲ್‌ ಮತ್ತು ಯುಎಇ ತಮ್ಮ ಸಂಬಂಧಗಳನ್ನು ಮರುಸ್ಥಾಪಿಸಲು ಒಪ್ಪಿಕೊಂಡಿರುವುದನ್ನು ಟ್ವೀಟ್‌ ಮೂಲಕ ಪ್ರಕಟಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಇದೊಂದು ಐತಿಹಾಸಿಕ ದಿನ. ಇಬ್ಬರು ಶ್ರೇಷ್ಠ ಸ್ನೇಹಿತರ ಮಧ್ಯೆ ಐತಿಹಾಸಿಕ ಶಾಂತಿ ಒಪ್ಪಂದ ಏರ್ಪಟ್ಟಿದೆ. ಇದು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.
 

click me!