ಸುಳ್ಳು ಸುದ್ದಿ ವಿರುದ್ಧ ಟ್ವಿಟರ್ ಸಮರ: ಟ್ರಂಪ್ ಬೆನ್ನಲ್ಲೇ ಮತ್ತೊಬ್ಬ ನಾಯಕಿಗೆ ನಿಷೇಧ!

By Suvarna NewsFirst Published Jan 18, 2021, 4:28 PM IST
Highlights

ಅಮೆರಿಕಾದಲ್ಲಿ ಸುಳ್ಳುಸುದ್ದಿಯ ವಿರುದ್ಧ ಟ್ವಿಟರ್ ಸಮರ| ಕಳೆದ ವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರನ್ನೇ ಬ್ಲಾಕ್ ಮಾಡಿದ್ದ ಟ್ವಿಟರ್|  ಟ್ವಿಟರ್ ಎಚ್ಚರಿಕೆಯ ಸಂದೇಶ

ವಾಷಿಂಗ್ಟನ್(ಜ.18): ಅಮೆರಿಕಾದಲ್ಲಿ ಸುಳ್ಳುಸುದ್ದಿಯ ವಿರುದ್ಧ ಟ್ವಿಟರ್ ಸಮರವನ್ನು ಮುಂದುವರಿಸಿದೆ. ಕಳೆದ ವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರನ್ನೇ ಬ್ಲಾಕ್‌ ಮಾಡುವ ಮೂಲಕ ಟ್ವಿಟರ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿತ್ತು.

ಇದೀಗ ರಿಪಬ್ಲಿಕನ್ ಪಕ್ಷದ ಸಂಸದೆ  ಮಾರ್ಜೊರಿ ಟೇಲರ್ ಗ್ರೀನ್‌ ಅವರ ಖಾತೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಜಾರ್ಜಿಯಾ ಸಂಸದೆ ಟೇಲರ್ ಗ್ರೀನ್ ಸುಳ್ಳುಸುದ್ದಿಗಳನ್ನು ಟ್ವೀಟ್ ಮಾಡುವ ಕಂಪನಿಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ, ಎಂದು ಟ್ವಿಟರ್ ವಕ್ತಾರ ಹೇಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಜಾರ್ಜಿಯಾಲ್ಲೂ ಚುನಾವಣಾ ಅಕ್ರಮ ನಡೆದಿದೆ, ಅಂತಾ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಟೇಲರ್ ಗ್ರೀನ್ ಪದೇ ಪದೇ ತಪ್ಪು ಮಾಹಿತಿ ನೀಡುತ್ತಿದ್ದರೆನ್ನಲಾಗಿದೆ.

ಚುನಾವಣಾ ಫಲಿತಾಂಶದ ವಿಚಾರವಾಗಿ ಕಳೆದ ವಾರ ಟ್ರಂಪ್ ಬೆಂಬಲಿಗರು ಅಮೆರಿಕಾ ಸಂಸತ್ತಿಗೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ್ದರು.  ಅದರ ಬೆನ್ನಲ್ಲೇ, ಚುನಾವಣೆ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಸಾವಿರಾರು ಖಾತೆಗಳನ್ನು ಟ್ವಿಟರ್ ನಿಷೇಧಿಸಿದೆ.

click me!