ಬೈಡೆನ್‌ ಸರ್ಕಾರದಲ್ಲಿ 2 ಕನ್ನಡಿಗರು ಸೇರಿ 20 ಮಂದಿ ಭಾರತೀಯರು!

By Suvarna NewsFirst Published Jan 18, 2021, 9:55 AM IST
Highlights

ಬೈಡೆನ್‌ ಸರ್ಕಾರದಲ್ಲಿ 2 ಕನ್ನಡಿಗರು ಸೇರಿ 20  ಮಂದಿ ಭಾರತೀಯರು| ಮಂಡ್ಯದ ವಿವೇಕ್‌ ಮೂರ್ತಿ, ಉಡುಪಿಯ ಮಾಲಾ ಅಡಿಗ ಅವರಿಗೆ ಪ್ರಮುಖ ಹುದ್ದೆ

ವಾಷಿಂಗ್ಟನ್(ಜ.18)‌: ಜ.20ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಜೋ ಬೈಡೆನ್‌ ಅವರ ಸರ್ಕಾರದಲ್ಲಿ ಇಬ್ಬರು ಕನ್ನಡಿಗರು ಸೇರಿ ಭಾರತೀಯ ಮೂಲದ 20 ಮಂದಿ ಸ್ಥಾನ ಪಡೆಯಲಿದ್ದಾರೆ. ಅವರ ಪೈಕಿ 17 ಮಂದಿಗೆ ಉನ್ನತ ಹುದ್ದೆ ದೊರೆಯಲಿದೆ.

ಅಮೆರಿಕದ ಸರ್ಜನ್‌ ಜನರಲ್‌ ಹುದ್ದೆಗೆ ಮಂಡ್ಯದವರಾದ ವಿವೇಕ್‌ ಮೂರ್ತಿ ಹಾಗೂ ಪ್ರಥಮ ಮಹಿಳೆ ಆಗಲಿರುವ ಜಿಲ್‌ ಬೈಡೆನ್‌ ಅವರಿಗೆ ಯೋಜನೆ ನಿರ್ದೇಶಕರಾಗಿ ಆಯ್ಕೆ ಆಗಿರುವ ಉಡುಪಿ ಮೂಲದ ಕಮಲಾ ಅಡಿಗ, ಸರ್ಕಾರದಲ್ಲಿ ಸ್ಥಾನ ಪಡೆದ ಕನ್ನಡಿಗರಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಕ್ಕುಂಜೆ ಗ್ರಾಮದವರಾಗಿರುವ ಮಾಲಾ ಅಡಿಗ ಅವರು ಈ ಮುನ್ನ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್‌ ಅವರಿಗೆ ತಂತ್ರಜ್ಞರಾಗಿ ಕಾರ್ಯನಿರ್ವಹಿಸಿದ್ದರು.

ಶ್ವೇತ ಭವನದ ಕಚೇರಿ ನಿರ್ವಹಣೆ ಹಾಗೂ ಬಜೆಟ್‌ನ ನಿರ್ದೇಶಕರಾಗಿ ನೀರಾ ಟಂಡನ್‌, ಸಹಾಯಕ ಅಟಾರ್ನಿ ಜನರಲ್‌ ಆಗಿ ವಿನುತಾ ಗುಪ್ತಾ ನಾಮನಿರ್ದೇನಗೊಂಡಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಕಾಶ್ಮೀರ ಮೂಲದ ಇಬ್ಬರು ವ್ಯಕ್ತಿಗಳು ಬೈಡೆನ್‌ ಸರ್ಕಾರದಲ್ಲಿ ಸ್ಥಾನ ಪಡೆದಿದ್ದಾರೆ. ಶ್ವೇತ ಭವನದ ಕಚೇರಿಗೆ ನೇಮಕಗೊಂಡಿರುವ ಆಷಿಯಾ ಶಾ ಹಾಗೂ ಅಮೆರಿಕದ ರಾಷ್ಟ್ರೀಯ ಆರ್ಥಿಕ ಮಂಡಳಿಯಲ್ಲಿ ಉಪ ನಿರ್ದೇಶಕರಾಗಿ ಸ್ಥಾನ ಪಡೆದಿರುವ ಸಮೀರಾ ಫಾಜಿಲಿ ಅವರು ಮೂಲತಃ ಕಾಶ್ಮೀರದವರಾಗಿದ್ದಾರೆ.

ಈ ಹಿಂದೆ ಒಬಾಮಾ ಸರ್ಕಾರದಲ್ಲಿ ಶ್ವೇತ ಭವನದಲ್ಲಿ ಕಾರ್ಯನಿರ್ವಹಿಸಿದ್ದ ಗೌತಮ್‌ ರಾಘವನ್‌ ಅವರು ಈ ಬಾರಿ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

click me!