ಲಸಿಕೆ ತೆಗೆದುಕೊಂಡ 13 ಜನರಿಗೆ ಲಕ್ವಾ!

By Suvarna NewsFirst Published Jan 18, 2021, 11:14 AM IST
Highlights

ಇಸ್ರೇಲ್‌ನಲ್ಲಿ ಫೈಝರ್‌ ಲಸಿಕೆ ತೆಗೆದುಕೊಂಡ 13 ಜನರಿಗೆ ಲಕ್ವಾ!| ನಾರ್ವೆ ಬಳಿಕ ಇಸ್ರೇಲ್‌ನಲ್ಲೂ ಗಂಭೀರ ಅಡ್ಡಪರಿಣಾಮ ಪತ್ತೆ

ನವದೆಹಲಿ(ಜ.18): ನಾರ್ವೆಯಲ್ಲಿ ಕೊರೋನಾಕ್ಕೆ ಫೈಝರ್‌ ಲಸಿಕೆ ಪಡೆದ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆಂಬ ವರದಿಯ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಕೊರೋನಾ ಲಸಿಕೆ ಪಡೆದ 13 ಮಂದಿಯ ಮುಖಕ್ಕೆ ಪಾರ್ಶ್ವವಾಯು ಬಡಿದಿದೆ ಎಂದು ವರದಿಯಾಗಿದೆ. ಆದರೆ, ಇದು ಸಣ್ಣ ಪ್ರಮಾಣದ ಪಾರ್ಶ್ವವಾಯುವಾಗಿದ್ದು, ಇವರಿಗೆ ಎರಡನೇ ಡೋಸ್‌ ಕೂಡ ನೀಡಬೇಕು ಎಂದು ಆರೋಗ್ಯ ಇಲಾಖೆ ಆದೇಶ ನೀಡಿದೆ.

ಇಸ್ರೇಲ್‌ನಲ್ಲಿ ನೀಡಿರುವುದು ಯಾವ ಲಸಿಕೆ ಮತ್ತು ಯಾವ ವಯಸ್ಸಿನವರ ಮುಖಕ್ಕೆ ಪಾರ್ಶ್ವವಾಯು ಬಡಿದಿದೆ ಎಂಬುದು ತಿಳಿದುಬಂದಿಲ್ಲ. ಲಸಿಕೆಯ ಮೊದಲ ಡೋಸ್‌ ತೆಗೆದುಕೊಂಡ ಬಳಿಕ ಮುಖಕ್ಕೆ ಪಾರ್ಶ್ವವಾಯು ಬಡಿದ 13 ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಂಥವರ ಸಂಖ್ಯೆ ವಾಸ್ತವವಾಗಿ ಇನ್ನಷ್ಟು ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ.

‘ಲಸಿಕೆಯ ಅಡ್ಡ ಪರಿಣಾಮದಿಂದ ಹೀಗಾಗುತ್ತದೆ. ನಂತರ ಸರಿಯಾಗುತ್ತದೆ’ ಎಂದು ಕೆಲ ವೈದ್ಯರು ಹೇಳಿದ್ದಾರೆ. ಆದರೆ, ಪಾಶ್ರ್ವವಾಯು ಉಂಟಾದವರಿಗೆ ಅದು ಸಂಪೂರ್ಣವಾಗಿ ಕಡಿಮೆಯಾಗಿದೆಯೇ ಇಲ್ಲವೇ ಎಂಬುದು ತಿಳಿದುಬಂದಿಲ್ಲ.

click me!