ಹೂಸುವ ಉದ್ಯೋಗ: ಮತ್ತೆ ಮತ್ತೆ ಹೂಸಲು ಯತ್ನಿಸಿ ಆಸ್ಪತ್ರೆ ಸೇರಿದ ಅಮೆರಿಕನ್‌ ನಟಿ

By Suvarna NewsFirst Published Jan 6, 2022, 9:05 PM IST
Highlights
  • ಹೂಸು ಬಿಡಲು ಹೋಗಿ ಆಸ್ಪತ್ರೆ ಸೇರಿದ ಮಹಿಳೆ
  • ಹೂಸಿನ ಬ್ಯುಸಿನೆಸ್‌ ನಡೆಸುತ್ತಿದ್ದ ನಟಿ ಆಸ್ಪತ್ರೆಗೆ
  • ತೀವ್ರ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಬಳಲುತ್ತಿರುವ ಸ್ಟಿಫನಿ ಮ್ಯಾಟೊ 

ನ್ಯೂಯಾರ್ಕ್‌(ಜ.6) ಹೂಸು ಬಿಡುವುದನ್ನೇ ಉದ್ಯೋಗವಾಗಿಸಿಕೊಂಡಿದ್ದ ಅಮೆರಿಕನ್‌ ಟಿವಿ ರಿಯಾಲಿಟಿ ಶೋದ ನಟಿಯೊಬ್ಬರು ಈಗ ಆಸ್ಪತ್ರೆ ಸೇರಿದ್ದಾರೆ. ಹೆಚ್ಚು ಹೆಚ್ಚು ಹೂಸಲು ಹೋಗಿ ಇವರು ಅನಾರೋಗ್ಯಕ್ಕೆ ಒಳಗಾಗಿದ್ದು ಆಸ್ಪತ್ರೆ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಅಮೆರಿಕನ್‌ ಟಿವಿ ರಿಯಾಲಿಟಿ ಶೋ (TV Reality Show) ದ ನಟಿ ಸ್ಟಿಫನಿ ಮ್ಯಾಟೊ (Stephanie Matto) ಇತ್ತೀಚೆಗೆ ಟಿಕ್‌ಟಾಕ್ ವೀಡಿಯೊದಲ್ಲಿ ತನಗೆ ಅಸಾಮಾನ್ಯವಾದ ಹೂಸು ಬಿಡುವ ಸಾಮರ್ಥ್ಯವಿದೆ ಎಂದು ಹೇಳಿ ಕೊಂಡಿದ್ದಳು. ಅಲ್ಲದೇ ಅವಳು ತನ್ನ ಹೂಸನ್ನು ಬಾಟಲಿಯಲ್ಲಿ ತುಂಬಿಸಿ  ಅವುಗಳನ್ನು ಜಾರ್‌ಗೆ 1,000 ಡಾಲರ್‌ನಂತೆ ರೂ  ದರ ನಿಗದಿ ಪಡಿಸಿ ಮಾರಾಟ ಮಾಡುತ್ತಿದ್ದಳು. ಆಕೆಯ ಈ ಉತ್ಪನ್ನಕ್ಕೆ ಬೇಡಿಕೆಯು ತುಂಬಾ ಹೆಚ್ಚಿತ್ತು. 

ಸ್ಟಿಫನಿ ಮ್ಯಾಟೊ ಒಂದು ಹಂತದಲ್ಲಿ ವಾರಕ್ಕೆ 50 ಜಾರ್‌ಗಳನ್ನು ಮಾರಾಟ ಮಾಡುತ್ತಿದ್ದಳು ಎಂದು  ಮೆಟ್ರೋ ನ್ಯೂಸ್ ವರದಿ ಮಾಡಿತ್ತು. ಆದಾಗ್ಯೂ, ಆರೋಗ್ಯದಲ್ಲಿ ಉಂಟಾದ ಏರುಪೇರಿನಿಂದಾಗಿ ಆಕೆ  90 ದಿನಗಳವರೆಗೆ ಈ ತನ್ನ ಸೈಡ್‌ ಬ್ಯುಸಿನೆಸ್‌ನ್ನು ನಿಲ್ಲಿಸಿದ್ದಾಳೆ. ಅಲ್ಲದೇ ಪ್ರಸ್ತುತ ಆಕೆ ಆಸ್ಪತ್ರೆ ಸೇರಿರುವುದರಿಂದ ಈ ಲಾಭದಾಯಕ ವ್ಯವಹಾರದಿಂದ ನಿವೃತ್ತಿ ಪಡೆಯುವುದಾಗಿ ಆಕೆ ಘೋಷಿಸಿದ್ದಾಳೆ..

ಹೂಸು ಬಿಡುವುದೇ ಲಾಭದಾಯಕ ಉದ್ದಿಮೆ. ಮಹಿಳೆ ಗಳಿಸುತ್ತಾಳೆ ಲಕ್ಷ ಲಕ್ಷ!

ಹೂಸು ಬಿಡಲು ಹೆಚ್ಚೆಚ್ಚು ಪ್ರಯತ್ನಿಸಿದ ಪರಿಣಾಮ ಈಕೆಗೆ ಅನಾರೋಗ್ಯವಾಗಿದ್ದು, ನನಗೆ ಪಾರ್ಶ್ವವಾಯು ಇದೆ ಮತ್ತು ಇದು ನನ್ನ ಅಂತಿಮ ಕ್ಷಣಗಳು ಎಂದು ನಾನು ಭಾವಿಸಿದೆ. ನಾನು ಅದನ್ನು ಅತಿಯಾಗಿ ಮಾಡುತ್ತಿದ್ದೇನೆ ಎಂದು ಸ್ಟಿಫನಿ ಮ್ಯಾಟೊ ಹೇಳಿದ್ದಾರೆ. ಇವರ ಹೂಸಿಗೆ ಅತೀಯಾದ ಬೇಡಿಕೆ ಬಂದ ಹಿನ್ನೆಲೆ ಸ್ಟೆಫನಿ ಮ್ಯಾಟೊ ಕಾಳುಗಳು, ಮೊಟ್ಟೆಗಳು ಮತ್ತು ಪ್ರೋಟೀನ್ ಶೇಕ್‌ಗಳನ್ನು ಹೆಚ್ಚೆಚ್ಚು ತಿಂದು ಹೂಸು ಬಿಡುತ್ತಿದ್ದರು ಎಂದು ಆಕೆ ಈ ಹಿಂದೆ ಹೇಳಿದ್ದರು. 

Selling Fart: ಹೂಸೋದಷ್ಟೇ ಉದ್ಯೋಗ, ಒಂದೇ ವಾರದಲ್ಲಿ 37 ಲಕ್ಷ ಗಳಿಕೆ

ಆಸ್ಪತ್ರೆಗೆ ದಾಖಲಾಗುವ ದಿನ ಹೆಚ್ಚು ಹೂಸು ಬಿಡುವ ಸಲುವಾಗಿ ನಾನು ಮೂರು ಪ್ರೋಟಿನ್‌ ಶೇಕ್‌ ಹಾಗೂ ಒಂದು ದೊಡ್ಡ ಬಟ್ಟಲಿನಷ್ಟು ಕಪ್ಪು ಬೀನ್ಸ್‌ ಬೀಜದ ಸೂಪ್‌ ಕುಡಿದಿದ್ದಾಗಿ ಹೇಳಿದ್ದಾರೆ ಈ 31 ವರ್ಷದ ಸ್ಟೆಫನಿ ಮ್ಯಾಟೊ ಹೇಳಿದ್ದಾಳೆ. ಇದರ ಪರಿಣಾಮ ಆಕೆ ಉಸಿರಾಡಲು ಕಷ್ಟವಾಗಿದೆ. ಉಸಿರಾಡುವುದು ತುಂಬಾ ಕಷ್ಟಕರವಾಗಿತ್ತು ಮತ್ತು ಪ್ರತಿ ಬಾರಿ ನಾನು ಉಸಿರಾಡಲು ಪ್ರಯತ್ನಿಸಿದಾಗ ನನ್ನ ಹೃದಯದ ಸುತ್ತ ಸೆಟೆದುಕೊಂಡ ನೋವು ಉಂಟಾಗುತ್ತಿತ್ತು ಮತ್ತು ಅದು ಸಹಜವಾಗಿ, ನನ್ನ ಆತಂಕವನ್ನು ಹೆಚ್ಚಿಸಿತು. ನಂತರ ನಾನು ನನ್ನ ಸ್ನೇಹಿತನನ್ನು ಕರೆದು ನನ್ನನ್ನು ಆಸ್ಪತ್ರೆಗೆ ಸೇರಿಸುವಂತೆ ಕೇಳಿದೆ. ಏಕೆಂದರೆ ನನಗೆ ಹೃದಯಾಘಾತವಾಗುವ ಅನುಭವ ಆದಂತಾಗಿತ್ತು ಎಂದು ಆಕೆ ಹೇಳಿದ್ದಾಳೆ.

Fart jars are going digital! Today at 3pm be one of the lucky people to purchase a digital fart jar NFT and own a piece of viral worldwide history! some jars come with redeemable physical jars and other fun collectibles! Begins today, jan3rd at 3pm EST https://t.co/4GoN7fVI1s pic.twitter.com/QYqVv2Tsux

— Stephanie Matto (@StepankaMatto)

 

ನಂತರ ಆಸ್ಪತ್ರೆಗೆ ಬಂದಾಗ, ಹೃದಯಾಘಾತ ಅಥವಾ ಪಾರ್ಶ್ವವಾಯು ಯಾವುದು ಇಲ್ಲ ಎಂದು ತಿಳಿದು ಸಮಾಧಾನವಾಯಿತು. ನಾನು ಅನುಭವಿಸುತ್ತಿರುವುದು ಪಾರ್ಶ್ವವಾಯು ಅಥವಾ ಹೃದಯಾಘಾತವಲ್ಲ ಆದರೆ ತುಂಬಾ ತೀವ್ರವಾದ ಗ್ಯಾಸ್ಟಿಕ್‌ ನೋವು ಎಂದು ಸ್ಪಷ್ಟಪಡಿಸಲಾಗಿದೆ. ನಂತರ ನನ್ನ ಆಹಾರಕ್ರಮವನ್ನು ಬದಲಾಯಿಸಲು ಮತ್ತು ಗ್ಯಾಸ್ ನಿರೋಧಕ ಔಷಧಿಗಳನ್ನು ತೆಗೆದುಕೊಳ್ಳಲು ನನಗೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಅದು ನನ್ನ ವ್ಯವಹಾರವನ್ನು ಕೊನೆಗೊಳಿಸಿದೆ ಎಂದು ಆಕೆ ಹೇಳಿದ್ದಾಳೆ. 

click me!