
ಕೊಲಂಬಿಯಾ(ಮಾ.11): ಇಎಸ್‌ಪಿಯನ್ ವಾಹಿನಿ ನೇರ ಪ್ರಸಾರದ ವೇಳೆ ಅವಘಡವೊಂದು ಸಂಭವಿಸಿದೆ. ಇಬ್ಬರು ನಿರೂಪಕರು ಹಾಗೂ ಅತಿಥಿಗಳು ಅಭಿಪ್ರಾಯ ಹಂಚಿಕೊಳ್ಳುತ್ತಿರುವಾಗಲೇ, ಸ್ಟುಡಿಯೋದ ಸೆಟ್ ನೇರವಾಗಿ ನಿರೂಪಕನ ಮೇಲೆ ಬಿದ್ದ ಘಟನೆ ನಡೆದಿದೆ.
ಕೆಸರಿಲ್ಲಾಂದ್ರೆ ತಂದೂರಿ ಚಿಕನ್ ಥರಾ ಬೆಂದು ಹೋಗ್ತಿದ್ದೆ ಎಂದ ರಿಷಭ್
ಕೊಲಂಬಿಯಾದಲ್ಲಿ ಈ ಘಟನೆ ನಡೆದಿದೆ. ಇಎಸ್‌ಪಿಯನ್ ನೇರ ಪ್ರಸಾರ ನಡೆಯುತ್ತಿರುವ ವೇಳೆ ಆ್ಯಂಕರ್ ಮೇಲೆ ಸ್ಟುಡಿಯೋದ ಸೆಟ್ ಕಳಬಿ ಬಿದ್ದಿದೆ. ಅದೃಷ್ಠವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಒಂದು ಕ್ಷಣ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಣ್ಣ ಪುಟ್ಟ ತರಚಿದ ಗಾಯಗಳನ್ನು ಹೊರತುಪಡಿಸಿದರೆ ಯಾವುದೇ ಸಮಸ್ಯಯಾಗಿಲ್ಲ.
ಮತ್ತೋರ್ವ ಆ್ಯಂಕರ್ ತಕ್ಷಣವೇ ಇದೀಗ ಪುಟ್ಟ ಬ್ರೇಕ್ ಎಂದು ಪರಿಸ್ಥಿತಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಸ್ಟುಡಿಯೋ ಕ್ಯಾಮರದಲ್ಲಿ ರೆಕಾರ್ಡ್ ಆಗಿರುವ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಕ್ಷಣವೇ ವಾಹಿನಿ ಹಲವರು ಕರೆ ಹಾಗೂ ಮೆಸೇಜ್ ಮಾಡಿದ್ದಾರೆ. ಸ್ಟುಡಿಯೋದಲ್ಲಿ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ. ಬಳಿಕ ಇಎಸ್‌ಪಿಯನ್ ವಾಹಿನಿ ಸ್ಪಷ್ಟನೆ ನೀಡಿದೆ. ಯಾವುದೇ ಅಪಾಯ ಎದುರಾಗಿಲ್ಲ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ