ಹಾರುವ ಗೋಲ್ಡನ್ ಆಮೆ ಕಂಡು ಬೆರಗಾದ ಮಂದಿ, ವೈರಲ್ ಆಯ್ತು ವಿಡಿಯೋ!

By Suvarna News  |  First Published Mar 11, 2021, 3:25 PM IST

ಚಿನ್ನದ ಬಣ್ಣದ ಪುಟ್ಟ ಪುಟ್ಟ ಆಮೆಯಂತಹ ಜೀರುಂಡೆಗಳು| ಹಾರುತ್ತಿರುವ ಚಿನ್ನದ ಜೀವಿ ಕಂಡು ಬೆರಗಾದ ಮಂದಿ| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ


ನವದೆಹಲಿ(ಮಾ.11) ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಬಳಕೆದಾರರು ಆಮೆಯಂತೆ ಕಂಡು ಬರುವ ಜೀರುಂಡೆಯನ್ನು ಕಂಡು ಬೆರಗಾಗಿದ್ದಾರೆ. ಚಿನ್ನದ ಬಣ್ಣದ ಈ ಪುಟ್ಟ ಪುಟ್ಟ ಆಮೆ ಜನರ ಮನಸ್ಸು ಕದ್ದಿವೆ. ಸಾಮಾನ್ಯವಾಗಿ ಆಮೆಗಳು ನೋಡಲು ಬಹಳ ದೊಡ್ಡದಿರುತ್ತವೆ. ಆದರೆ ವಿಡಿಯೋದಲ್ಲಿರುವ ಈ ಆಮೆಗಳು ಪುಟ್ಟ ಪುಟ್ಟಕ್ಕಿವೆ. ಈ ಜೀರುಂಡೆಗಳು ಬಂಗಾರ ಬಣ್ಣದಲ್ಲಿರುವುದರಿಂದ ಜನರಿಗೆ ಮತ್ತಷ್ಟು ಹಿಡಿಸಿದೆ.

ಈ ವಿಡಿಯೋವನ್ನು ಐಎಫ್‌ಎಸ್‌ ಅಧಿಕಾರಿ ಸುಶಾಂತ್ ನಂದಾ ಟ್ವಿಟ್ ಮಾಡಿದ್ದಾರೆ. ವಿಡಿಯೋ ಶೇರ್ ಮಾಡಿಕೊಂಡಿರುವ ಅವರು 'ಅನೇಕ ಬಾರಿ ಹೊಳೆಯುವುದೆಲ್ಲಾ ಚಿನ್ನವಾಗಿರುತ್ತದೆ'. ಈ ಜೀರುಂಡೆ ದಕ್ಷಿಣ ಏಷ್ಯಾದಲ್ಲಿ ಪತ್ತೆಯಾಗಿದೆ. ಜನರು ಇದೇ ಮೊದಲ ಬಾರಿ ಗೋಲ್ಡನ್ ಟಾರ್ಟೈಸ್ ಬೀಟಲ್ ಹೆಸರಿನ ಈ ಜೀವಿಯನ್ನು ಕಂಡಿದ್ದಾರೆ. ಹೀಗಿರುವಾಗ ಇದು ಕಂಡು ಬಂದಿದ್ದೆಲ್ಲಿ ಎಂಬ ಕುತೂಹಲ ಎಲ್ಲರಿಗೂ ಇದೆ ಎಂದಿದ್ದಾರೆ.

Sometimes, all that glitters is gold.
The Golden Tortoise Beetle found in the Southeastern Asia.

🎥: Thokchom Sony pic.twitter.com/nGb1gh7sQ0

— Susanta Nanda IFS (@susantananda3)

Tap to resize

Latest Videos

ವ್ಯಕ್ತಿಯೊಬ್ಬನ ಕೈಯ್ಯಲ್ಲಿ ಮೂರು ಪುಟ್ಟ ಪುಟ್ಟ ಆಮೆಯಂತಹ ಜೀರುಂಡೆಗಳಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಇನ್ನು ಈ ಜೀರುಂಡೆಗಳು ಪದೇ ಪದೇ ರೆಕ್ಕೆ ಬಡಿದು ಹಾರುತ್ತಿರುವ ದೃಶ್ಯವೂ ಇದೆ. ಈ ಪುಟ್ಟ ಪುಟ್ಟ ಸುಂದರ ಜೀವಿಗಳು ಸದ್ಯ ನೆಟ್ಟಿಗರಿಗೆ ಬಹಳ ಇಷ್ಟವಾಗಿವೆ. 

click me!