ಇಂಡಿಯಾ ಗೇಟ್: ಟರ್ಕಿಯ ಚರ್ಚ್‌ ಈಗ ಮಸೀದಿ!

By Suvarna NewsFirst Published Jul 31, 2020, 5:45 PM IST
Highlights

ಟರ್ಕಿಯ ಚಚ್‌ರ್‍ ಈಗ ಮಸೀದಿ| ಇಸ್ತಾಂಬುಲ್‌ನಲ್ಲಿ ಪ್ರಾಚೀನ ಕ್ಯಾಥೋಲಿಕ್‌ ಚಚ್‌ರ್‍ ಹಗಿಯಾ ಸೋಫಿಯಾ

ಭಾರತದಲ್ಲಿ ಆ.5ರಂದು ರಾಮಮಂದಿರಕ್ಕೆ ಶಿಲಾನ್ಯಾಸ ನಡೆಯುತ್ತಿರುವಾಗ ಟರ್ಕಿಯ ಇಸ್ತಾಂಬುಲ್‌ನಲ್ಲಿ ಪ್ರಾಚೀನ ಕ್ಯಾಥೋಲಿಕ್‌ ಚಚ್‌ರ್‍ ಹಗಿಯಾ ಸೋಫಿಯಾವನ್ನು ಸುನ್ನಿ ಮಸೀದಿ ಆಗಿ ಪ್ರಾರ್ಥನೆಗೆ ತೆರೆಯಲಾಗಿದೆ.

ಮೂಲತಃ 6ನೇ ಶತಮಾನದಲ್ಲಿ ಕಟ್ಟಲ್ಪಟ್ಟಈ ಚರ್ಚನ್ನು 14ನೇ ಶತಮಾನದಲ್ಲಿ ಕಾನ್ಸ್‌ಸ್ಟಾಂಟಿನೋಪಲ್‌ ಮೇಲೆ ಇಸ್ಲಾಮಿಕ್‌ ಒಟ್ಟೊಮನ್‌ ಸಾಮ್ರಾಜ್ಯದ ದಾಳಿ ನಡೆದಾಗ ಮಹಮ್ಮದ್‌-2 ಮಸೀದಿ ಆಗಿ ಪರಿವರ್ತಿಸಿ ಅಲ್ಲಿದ್ದ ಕ್ರಿಶ್ಚಿಯನ್‌ ವಿಗ್ರಹಗಳನ್ನು ಒಡೆದು ಹಾಕಿದ. 1931ರಲ್ಲಿ ಇದು ಮ್ಯೂಸಿಯಂ ಆಗಿ ಪರಿವರ್ತಿತವಾಗಿತ್ತು.

ರಾಮಮಂದಿರ ಹೋರಾಟ ಶುರುವಾಗಿದ್ದು ಹೇಗೆ?: ಇಲ್ಲಿದೆ ರೋಚಕ ಮಾಹಿತಿ

ಈಗ 90 ವರ್ಷಗಳ ನಂತರ ಟರ್ಕಿಯ ಹೈಕೋರ್ಟ್‌ ನೀಡಿದ ಆದೇಶವನ್ನು ಇಟ್ಟುಕೊಂಡು ಟರ್ಕಿಯ ಅಧ್ಯಕ್ಷ ತಯ್ಯಬ್‌ ಎರ್ದೋಗನ್‌ ಮ್ಯೂಸಿಯಂ ಅನ್ನು ಸುನ್ನಿ ಮಸೀದಿ ಮಾಡಿ ಸ್ವತಃ ತಾನೇ ಪ್ರಾರ್ಥನೆಗೆ ತೆರಳಿದ್ದಾರೆ. ಇದಕ್ಕೆ ಪ್ರತಿಯಾಗಿ ರಷ್ಯಾ, ಸಿರಿಯಾದಲ್ಲಿ ಹಗಿಯಾ ಸೋಫಿಯಾ ತರಹವೇ ಭವ್ಯ ಚಚ್‌ರ್‍ ನಿರ್ಮಿಸಲು ದುಡ್ಡು ಕೊಡುವುದಾಗಿ ಹೇಳಿದೆ. ಅಂದಹಾಗೆ, ಟರ್ಕಿಯ ಎರ್ದೋಗನ್‌ ಭಾರತ ಸರ್ಕಾರದ ಕಟು ಟೀಕಾಕಾರ ಮತ್ತು ಪಾಕಿಸ್ತಾನ ಸರ್ಕಾರದ ಪ್ರಶಂಸಕ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!