ತಲೆಗೆ ಬೀಗ ಹೆಂಡ್ತಿ ಕೈಲಿ ಕೀ: ಕೊನೆಗೂ 26 ವರ್ಷಗಳ ಸಿಗರೇಟ್ ಚಟದಿಂದ ಹೊರಬಂದ ವ್ಯಕ್ತಿ

Published : Oct 27, 2025, 12:14 PM IST
Turkey Mans Unique Attempts To Forget Smoking Habit viral

ಸಾರಾಂಶ

ಟರ್ಕಿಯ ಇಬ್ರಾಹಿಂ ಯುಸೆಲ್ ಎಂಬುವವರು ತಮ್ಮ 26 ವರ್ಷಗಳ ಧೂಮಪಾನದ ಚಟವನ್ನು ಬಿಡಲು ಒಂದು ವಿಚಿತ್ರ ದಾರಿ ಹಿಡಿದು ಅದರಲ್ಲಿ ಯಶಸ್ವಿಯಾಗಿದ್ದಾರೆ.. ಈ ಘಟನೆಯು ದೃಢ ಸಂಕಲ್ಪವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.

ಸಿಗರೇಟ್ ಚಟದಿಂದ ಹೊರಬರಲು ಈ ವ್ಯಕ್ತಿ ಮಾಡಿದ್ದೇನು ನೋಡಿ:

ಸಾಮಾನ್ಯವಾಗಿ ಒಮ್ಮೆ ಕೆಟ್ಟ ಚಟವನ್ನು ಅಭ್ಯಾಸ ಮಾಡಿಕೊಂಡರೆ ಅದನ್ನು ಹೋಗಲಾಡಿಸುವುದು ಬಹಳ ಕಷ್ಟದ ಕೆಲಸ. ಅದರಲ್ಲೂ ಸಿಗರೇಟ್ ಬೀಡಿ ಸೇವನೆ ಕುಡಿತ ಮುಂತಾದ ಚಟಗಳು ಬಿಡಬೇಕು ಎಂದರು ಬಿಡಲಾಗದು. ಈ ಚಟಕ್ಕೆ ಬಲಿಯಾದ ಅನೇಕರು ತಮಗೆ ಬಿಡಬೇಕು ಅನಿಸುತ್ತೆ ಆದರೆ ಬಿಡಕಾಗ್ತಿಲ್ಲ ಅಂತ ಹೇಳೋದನ್ನಾ ನೀವು ಕೇಳಿರಬಹುದು. ಆದರೆ ಧೃಡ ಮನಸ್ಸಿನಿಂದ ನಿರ್ಧಾರ ಮಾಡಿದರೆ ಯಾವುದು ಅಸಾಧ್ಯವಲ್ಲ, ಎಂಬುದಕ್ಕೆ ಇಲ್ಲೊಂದು ಕಡೆ ನಡೆದ ಘಟನೆ ಸಾಕ್ಷಿಯಾಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಬಹಳ ಹಿಂದೆ ಅಂದರೆ ಸುಮಾರು 11 ವರ್ಷಗಳ ಹಿಂದೆ. ಆದರೆ ಇದು ಬಹಳ ಕುತೂಹಲ ಹಾಗೂ ವಿಚಿತ್ರವೆನಿಸುವ ಘಟನೆಯಾಗಿದ್ದರಿಂದ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗ್ತಿದೆ. ಹಾಗಿದ್ದರೆ ಆಗಿದ್ದೇನು ಇಲ್ಲಿದೆ ನೋಡಿ ಡಿಟೇಲ್ ಸ್ಟೋರಿ.

ತಲೆಗೆ ಬೀಗ ಹಾಕಬಲ್ಲಂತಹ ಲೋಹದ ಹೆಲ್ಮೆಟ್ ನಿರ್ಮಿಸಿದ ವ್ಯಕ್ತಿ

ಹೌದು 11 ವರ್ಷಗಳ ಹಿಂದೆ ಟರ್ಕಿಯ ಪುಟ್ಟ ಗ್ರಾಮವೊಂದರ ನಿವಾಸಿ, ತಮ್ಮ 26 ವರ್ಷಗಳ ಧೂಮಪಾನದ ಚಟಕ್ಕೆ ಶಾಶ್ವತ ವಿದಾಯ ಹೇಳಬೇಕು ಎಂದು ನಿರ್ಧರಿಸಿ ಮಾಡಿದ ಒಂದು ವಿಲಕ್ಷಣ ಎನಿಸುವ ಪ್ರಕ್ರಿಯೆಯಿಂದಾಗಿ ಅವರು ಜಾಗತಿಕ ಮಟ್ಟದಲ್ಲಿ ಸುದ್ದಿಯಾದರು. ಅಂದಹಾಗೆ ಅವರ ಹೆಸರು ಇಬ್ರಾಹಿಂ ಯುಸೆಲ್ ಇವರದ್ದು ಒಂದು ವಿಶಿಷ್ಟ ಎನಿಸುವ ಕತೆ. 26 ವರ್ಷಗಳಿಂದ ಈ ಚಟದಿಂದ ಹೊರಬರಲು ಪ್ರಯತ್ನಿಸಿದ್ದ ಇಬ್ರಾಹಿಂ ಯುಸೆಲ್ ಅವರು ಒಂದು ತೀವ್ರವಾದ ಪರಿಹಾರ ಕಂಡುಕೊಳ್ಳಲು ಮುಂದಾದರು. ಇದಕ್ಕಾಗಿ ಅವರು ಮಾಡಿದ್ದೇನು ಎಂದು ತಿಳಿದರೆ ನೀವು ಅಚ್ಚರಿ ಪಡುವಿರಿ. ತಮ್ಮ ಈ ಕೆಟ್ಟ ಚಟವನ್ನು ಬಿಡುವುದಕ್ಕಾಗಿ ಧೃಡಸಂಕಲ್ಪ ಮಾಡಿದ ಇಬ್ರಾಹಿಂ ಅವರು ಹೆಲ್ಮೆಟ್ ಅನ್ನು ಹೋಲುವ ಲೋಹದ ಪಂಜರವನ್ನು ನಿರ್ಮಿಸಿ ಅದರೊಳಗೆ ತನ್ನ ತಲೆಯನ್ನು ಲಾಕ್ ಮಾಡಿಕೊಂಡರು.

ಹೆಂಡ್ತಿ ಕೈನಲ್ಲಿ ಬೀಗ, ಊಟ ಬಾಯಾರಿಕೆಯಾದಾಗ ಮಾತ್ರ ಬೀಗ ತೆರವು

ಕೆಲ ಮಾಧ್ಯಮಗಳ ವರದಿಯ ಪ್ರಕಾರ, , ಯುಸೆಲ್‌ನ ಈ ಅಸಾಮಾನ್ಯ ಆವಿಷ್ಕಾರವನ್ನು ವ್ಯಕ್ತಿ ಧೂಮಪಾನದ ಆಸೆಗೆ ಒಳಗಾಗದಂತೆ ತಡೆಯಲು ವಿನ್ಯಾಸಗೊಳಿಸಲಾಗಿತ್ತು. ಸಿಗರೇಟ್ ಸೇದಬೇಕು ಎಂಬ ಅವರ ಆಸೆ ಹೆಚ್ಚಾದರು ಅವರಿಗೆ ಈ ಲೋಹದ ಪಂಜರವನ್ನು ತೆಗೆಯಲು ಸಾಧ್ಯವಾಗದಂತೆ ಅದನ್ನು ನಿರ್ಮಿಸಲಾಗಿತ್ತು. ಅದರ ಕೀಲಿಗಳನ್ನು ಅವರು ತಮ್ಮ ಪತ್ನಿಯ ಕೈಗೆ ನೀಡಿದ್ದರು. ಇಬ್ರಾಹಿಂ ಯುಸೆಲ್‌ಗೆ ಹಸಿವು ಬಾಯಾರಿಕೆ ಆದಂತಹ ಸಂದರ್ಭದಲ್ಲಿ ಮಾತ್ರ ಪತ್ನಿ ಆತನ ತಲೆಗೆ ಅಳವಡಿಸಿದ ಲೋಹದ ಪಂಜರ ಬೀಗ ತೆರೆದು ಅವನಿಗೆ ಕುಡಿಯುವುದಕ್ಕೆ ತಿನ್ನುವುದಕ್ಕೆ ನೀಡುತ್ತಿದ್ದರು. ಹೀಗಾಗಿ ಧೂಮಪಾನವನ್ನು ಬಿಡಬೇಕು ಎಂಬ ಆತನ ಬದ್ಧತೆಯನ್ನು ತಡೆಯಲು ಯಾವ ಸಿಗರೇಟ್‌ಗೂ ಸಾಧ್ಯವಾಗಲೇ ಇಲ್ಲ.

ಇಬ್ರಾಹಿ ಯುಸೆಲ್ ಅವರು 20 ವರ್ಷಗಳಿಂದ ಈ ಧೂಮಪಾನದ ಚಟಕ್ಕೆ ಅಂಟಿಕೊಂಡಿದ್ದರು. ದಿನಕ್ಕೆ 2 ಪ್ಯಾಕೇಟ್ ಸಿಗರೇಟನ್ನು ಅವರು ಸೇವಿಸುತ್ತಿದ್ದರು. ಮಕ್ಕಳ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಪದೇ ಪದೇ ಈ ಸ್ಮೋಕಿಂಗ್ ಅಭ್ಯಾಸವನ್ನು ನಿಲ್ಲಿಸಲು ಪ್ರಯತ್ನಿಸಿದರೂ, ಕೆಲವೇ ದಿನಗಳ ನಂತರ ಮತ್ತೆ ಧೂಮಪಾನ ಮಾಡಬೇಕು ಎಂಬ ಆಸೆಗೆ ಬಲಿಯಾಗುತ್ತಿದ್ದರು.

ಆದರೆ ಅವರು ಮಾಡಿದ ಈ ವಿಶೇಷ ಪ್ರಯತ್ಬದಿಂದ ಅವರು ಕೊನೆಗೂ ಧೂಮಪಾನದ ಚಟದಿಂದ ವಿಮುಖರಾಗಿದ್ದಾರೆ. ಇದು ಧೃಡಸಂಕಲ್ಪವೊಂದಿದ್ದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಸಾಬೀತು ಮಾಡಿದೆ. ಯುಸೆಲ್ ಅವರು ಈ ಧೂಮಪಾನದಿಂದ ಮುಕ್ತಿಗಾಗಿ ಮಾಡಿಸಿಕೊಂಡ ಈ ಲೋಹದ ಹೆಲ್ಮೆಟ್‌ನ ಫೋಟೋ ವೀಡಿಯೊಗಳು ಮೊದಲು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ, ಅವು ಸಾಕಷ್ಟು ವೈರಲ್ ಆಗಿದ್ದವು. ಅನೇಕರು ಧೂಮಪಾನ ತೊರೆಯುವುದಕ್ಕೆ ಯುಸೆಲ್‌ ಮಾಡಿದ ದೃಢನಿಶ್ಚಯವನ್ನು ಮೆಚ್ಚಿದರು. ಮನಸ್ಸಿದ್ದರೆ ಚಟವೊಂದನ್ನು ಹೋಗಲಾಡಿಸಲು ಅದ್ಭುತ ಇಚ್ಛಾಶಕ್ತಿ ಹೊಂದಿದ್ದಾರೆ ಯಾವುದು ಕಷ್ಟವಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಇದನ್ನೂ ಓದಿ: 15 ವರ್ಷದ ದಾಂಪತ್ಯಕ್ಕೆ ವಿದಾಯ: ವಿಚ್ಚೇದನದತ್ತ ಮುಖ ಮಾಡಿದ ಕಿರುತೆರೆಯ ಸ್ಟಾರ್ ಜೋಡಿ

ಇದನ್ನೂ ಓದಿ: 54,000,000 ಕೋಟಿಗೆ ಹರಾಜಾದ ವಿಂಟೇಜ್ ರೋಲೆಕ್ಸ್ 6062 ವಾಚ್: ಏನಿದರ ವಿಶೇಷತೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!