ನ್ಯೂಜಿಲೆಂಡ್‌ ತೀರದಲ್ಲಿ ಭಾರೀ ಭೂಕಂಪ, ಸುನಾಮಿ!

By Suvarna NewsFirst Published Feb 11, 2021, 11:52 AM IST
Highlights

ಉತ್ತರ ನ್ಯೂಜಿಲೆಂಡ್‌ ಸನಿಹದ ದಕ್ಷಿಣ ಪೆಸಿಫಿಕ್‌ ಸಾಗರದಲ್ಲಿ ತಳದಲ್ಲಿ 7.7 ತೀವ್ರತೆಯ ಭೂಕಂಪ| ನ್ಯೂಜಿಲೆಂಡ್‌ ತೀರದಲ್ಲಿ ಭಾರೀ ಭೂಕಂಪ, ಸುನಾಮಿ

ಸಿಡ್ನಿ(Pe.೧೧): ಉತ್ತರ ನ್ಯೂಜಿಲೆಂಡ್‌ ಸನಿಹದ ದಕ್ಷಿಣ ಪೆಸಿಫಿಕ್‌ ಸಾಗರದಲ್ಲಿ ತಳದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ವೇಳೆ ಸುನಾಮಿ ಕೂಡ ಎದ್ದಿದ್ದು, ನ್ಯೂಜಿಲೆಂಡ್‌, ವನೌತು ಹಾಗೂ ಆಸ್ಪ್ರೇಲಿಯಾ ಕರಾವಳಿ ತೀರದಲ್ಲಿ ಕಟ್ಟೆಚ್ಚರ ಸಾರಲಾಗಿದೆ. ಫಿಜಿ ತೀರಕ್ಕೆ 0.3 ಮೀ. ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿವೆ.

ಬುಧವಾರ ರಾತ್ರಿ ಇಲ್ಲಿ ತೀವ್ರತರದ ಭೂಕಂಪ ಸಂಭವಿಸಿದ್ದು, ಬಳಿಕ 0.3 ಮೀಟರ್‌ನಿಂದ 1 ಮೀಟರ್‌ ಎತ್ತರದ ಸುನಾಮಿ ಅಲೆಗಳು ದಕ್ಷಿಣ ಪೆಸಿಫಿಕ್‌ನಲ್ಲಿ ಎದ್ದಿವೆ.

ಇವು ಫಿಜಿ, ನ್ಯೂಜಿಲೆಂಡ್‌ ಹಾಗೂ ವನೌತು ತಲುಪುವ ಸಾಧ್ಯತೆ ಇದೆ ಎಂದು ಅಮೆರಿಕ ಸರ್ಕಾರದ ಪೆಸಿಫಿಕ್‌ ಸುನಾಮಿ ಎಚ್ಚರಿಕೆ ಕೇಂದ್ರ ಎಚ್ಚರಿಕೆ ನೀಡಿದೆ. ಆಸ್ಪ್ರೇಲಿಯಾದಲ್ಲಿ ಕೂಡ ಸುನಾಮಿ ಮುನ್ನೆಚ್ಚರಿಕೆ ವಹಿಸಲಾಗಿದೆ.

click me!