
ವಾಷಿಂಗ್ಟನ್ (ನ.06): ಹಿನ್ನೆಡೆಯಾಗುತ್ತಿದ್ದಂತೆ ಚುನಾವಣೆಯಲ್ಲಿ ಆಕ್ರಮ ನಡೆದಿದೆ ಎಂದು ವಾದಿಸುತ್ತಾ ಬಂದಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ಬೆಂಬಲಿಗರು ಈಗ ಅದಕ್ಕೆ ಸಾಕ್ಷ್ಯ ಒಂದನ್ನು ಬಿಡುಗಡೆ ಮಾಡಿದ್ದಾರೆ.
118 ವರ್ಷದ ವಿಲಿಯಂ ಬ್ರಾಡ್‌ಲೇ ಎಂಬ ವ್ಯಕ್ತಿಯ ಹೆಸರಲ್ಲಿ ಮತ ಚಲಾವಣೆ ಆಗಿದೆ.
ಆದರೆ ಅವರು 1984ರಲ್ಲೇ ಸಾವನ್ನಪ್ಪಿದ್ದಾರೆ. ಹಾಗಿದ್ದರೆ ಇದು ಹೇಗೆ ಸಾಧ್ಯವಾಯಿತು ಎಂದು ಟ್ರಂಪ್ ಬೆಂಬಲಿಗರು ಪ್ರಶ್ನಿಸಿದ್ದಾರೆ. ಜೊತೆಗೆ ಇದಕ್ಕೆ ಸಾಕ್ಷ್ಯವಾಗಿ ಅವರ ಮರಣದ ರಿಜಿಸ್ಟರ್‌ನ ಫೋಟೋ ಕೂಡ ಶೇರ್ ಮಾಡಿದ್ದಾರೆ.
ಅಮೆರಿಕ ಇತಿಹಾಸದಲ್ಲೇ ಬೈಡನ್‌ಗೆ ಅತಿ ಹೆಚ್ಚು ಜನಪ್ರಿಯ ಮತ
ನ್ಯೂಯಾರ್ಕ್: ಡೆಮೊಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಅಮೆರಿಕದ ಚುನಾವಣಾ ಇತಿಹಾದಲ್ಲೇ ಅತಿ ಹೆಚ್ಚಿನ ಮತಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬೈಡನ್ ಅವರು 7.7 ಕೋಟಿ ಮತಗಳನ್ನು ಪಡೆದುಕೊಂಡಿದ್ದು, ಅಧ್ಯಕ್ಷ ಟ್ರಂಪ್ ಅವರಿಗಿಂತ 27 ಲಕ್ಷದ ಮತಗಳ ಅಂತರದಿಂದ ಮುಂದೆ ಇದ್ದಾರೆ.
ಆದರೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜನಪ್ರಿಯ ಮತಗಳನ್ನು ಪಡೆದ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಾರೆ ಎಂದೇನೂ ಇಲ್ಲ. 2016ರ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ಅವರಿಗಿಂತ ಕಡಿಮೆ ಮತಗಳನ್ನು ಪಡೆದರೂ, ಒಟ್ಟಾರೆ ಹೆಚ್ಚಿನ ಎಲೆಕ್ಟೋರಲ್ (ಪ್ರತಿನಿಧಿ) ಮತ ಪಡೆದ ಕಾರಣ ಟ್ರಂಪ್ ಗೆಲುವು ಸಾಧಿಸಿದ್ದರು. ಹಿಂದಿನ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ 6.6 ಕೋಟಿ ಮತಗಳನ್ನು ಪಡೆದಿದ್ದರು. ಟ್ರಂಪ್ ಪಡೆದಿದ್ದು 6.3 ಕೋಟಿ ಮತಗಳನ್ನು. ಆದರೆ, ಟ್ರಂಪ್ 304 ಪ್ರತಿನಿಧಿ ಮತ ಹಾಗೂ ಹಿಲರಿ ಕ್ಲಿಂಟನ್ 227 ಪ್ರತಿನಿಧಿ ಮತ ಪಡೆದುಕೊಂಡಿದ್ದರು. 2008ರ ಚುನಾವಣೆಯಲ್ಲಿ ಬರಾಕ್ ಒಬಾಮಾ 6.9 ಕೋಟಿ ಜನಪ್ರಿಯ ಮತಗಳನ್ನು ಪಡೆದುಕೊಂಡಿದ್ದು, ಇದುವರೆಗಿನ ದಾಖಲೆ ಎನಿಸಿಕೊಂಡಿತ್ತು.
ಏನಿದು ಜನಪ್ರಿಯ ಮತ?
ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಗಳಿಸುವ ಒಟ್ಟು ಮತಗಳನ್ನು ಜನಪ್ರಿಯ ಮತ ಎಂದು ಪರಿಗಣಿಸಲಾಗುತ್ತದೆ. ಆದರೆ, ಅಧ್ಯಕ್ಷೀಯ ಅಭ್ಯರ್ಥಿಗಳು ಎಷ್ಟೇ ಮತಗಳನ್ನು ಗಳಿಸಿದ್ದರೂ ಎಲೆಕ್ಟೋರಲ್ ಕಾಲೇಜಿನ ಸದಸ್ಯರ ಮತಗಳೇ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಉದಾಹರಣೆಗೆ ಕ್ಯಾಲಿಫೋರ್ನಿಯಾ 3.8 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, 55 ಎಲೆಕ್ಟೋರಲ್ ಮತಗಳನ್ನು ಹೊಂದಿದೆ. ಜನಪ್ರಿಯ ಮತಗಳನ್ನು ಪಡೆಯುವಲ್ಲಿ ವಿಫಲರಾಗಿಯೂ ಅಧ್ಯಕ್ಷರಾದವರಲ್ಲಿ ಟ್ರಂಪ್ ಐದನೇಯವರು.
1824ಲ್ಲಿ ಕ್ವಿನ್ಸಿ ಆಡಮ್ಸ್, 1876ರಲ್ಲಿ ರುದರ್‌ಫೋರ್ಡ್ ಹೆಯ್‌್ಸ, 1888ರಲ್ಲಿ ಬೆಂಜಮಿನ್ ಹ್ಯಾರಿಸನ್, 2000ರಲ್ಲಿ ಜಾಡ್ ಡಬ್ಲು ್ಯ ಬುಷ್, 2016ರಲ್ಲಿ ಡೊನಾಲ್ಡ್ ಟ್ರಂಪ್ ಹೆಚ್ಚಿನ ಜನಪ್ರಿಯ ಮತಗಳನ್ನು ಪಡೆಯವಲ್ಲಿ ವಿಫಲರಾಗಿದ್ದರೂ ಅಧ್ಯಕ್ಷ ಹುದ್ದೆಗೆ ಏರಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ