ಎರಡು ವಾರಗಳ ಕದನ ವಿರಾಮದ ನಡುವೆ ಇರಾನ್‌ಗೆ ಮತ್ತೆ ಬೆದರಿಕೆ ಹಾಕಿದ ಟ್ರಂಪ್!

Published : Apr 09, 2026, 12:35 PM IST
Trump threatens Iran again Amid the US iran ceasefire

ಸಾರಾಂಶ

ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ಹೊರತಾಗಿಯೂ, ಅಧ್ಯಕ್ಷ ಟ್ರಂಪ್ ತಮ್ಮ ಸೇನಾ ಪಡೆಗಳು ಇರಾನ್ ಬಳಿ ಇರುವುದಾಗಿ ಎಚ್ಚರಿಸಿದ್ದಾರೆ. ಕದನ ವಿರಾಮದ ಷರತ್ತುಗಳನ್ನು ಉಲ್ಲಂಘಿಸಿದರೆ ತೀವ್ರ ದಾಳಿಯ ಸುಳಿವು ನೀಡಿದ್ದಾರೆ. 

ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿ ಎರಡು ದಿನವೂ ಕಳೆದಿಲ್ಲ ಆಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹ್ರಾನ್‌ಗೆ ಮತ್ತೆ ವಾರ್ನ್ ಮಾಡಿದ್ದಾರೆ. 'ಎರಡೂ ರಾಷ್ಟ್ರಗಳ ನಡುವೆ ಅಂತಿಮ ಒಪ್ಪಂದ ಏರ್ಪಡುವವರೆಗೆ ಅಮೆರಿಕದ ಮಿಲಿಟರಿ ಪಡೆಗಳು ಇರಾನ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡುಬಿಡಲಿವೆ ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರುಥೌಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ಈ ವಿಚಾರವಾಗಿ ಪೋಸ್ಟ್‌ ಬರೆದಿರುವ ಟ್ರಂಪ್, ಅಮೆರಿಕದ ಎಲ್ಲಾ ಯುದ್ಧ ಹಡಗುಗಳು, ವಿಮಾನಗಳು, ಮಿಲಿಟರಿ ಸಿಬ್ಬಂದಿ ಸೇರಿದಂತೆ ಮಾರಕ ಶಸ್ತ್ರಾಸ್ತ್ರಗಳು ಇರಾನ್ ಸಮೀಪವೇ ಇರಲಿವೆ. ಈಗಾಗಲೇ ದುರ್ಬಲಗೊಂಡಿರುವ ಶತ್ರುವನ್ನು ನಾಶಮಾಡಲು ಅಗತ್ಯವಿರುವ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕದನ ವಿರಾಮ ಒಪ್ಪಂದವು ಸಂಪೂರ್ಣವಾಗಿ ಜಾರಿಗೆ ಬರುವವರೆಗೆ ಈ ನಿಯೋಜನೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಇರಾನ್ ನೀಡಿದ ಭರವಸೆಯಂತೆ ಹಾರ್ಮುಜ್ ಜಲಸಂಧಿಯ ಕಾರ್ಯಾಚರಣೆಯನ್ನು ಸುಗಮವಾಗಿ ನಡೆಸಬೇಕು. ಕದನ ವಿರಾಮದ ಅವಧಿಯಲ್ಲಿ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಬಾರದು ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ. ಒಂದು ವೇಳೆ ಕದನ ವಿರಾಮದ ಷರತ್ತುಗಳನ್ನು ಉಲ್ಲಂಘಿಸಿದರೆ ಅಮೆರಿಕವು ಅತ್ಯಂತ ಪ್ರಬಲವಾಗಿ ದಾಳಿ ನಡೆಸಲಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.

ದಾಳಿಯ ತೀವ್ರ ಎಚ್ಚರಿಕೆ

ಯಾವುದೇ ಕಾರಣಕ್ಕೂ ಈ ಅಂತಿಮ ಒಪ್ಪಂದವು ಯಶಸ್ವಿಯಾಗದಿದ್ದರೆ, ಅಂತಹ ಸಂದರ್ಭ ಬರುವುದು ಅಸಂಭವವಾದರೂ ಒಂದು ವೇಳೆ ಒಪ್ಪಂದ ಮುರಿದರೆ ಹಿಂದೆಂದೂ ಕಾಣದ ರೀತಿಯಲ್ಲಿ ಅಮೆರಿಕ ಗುಂಡಿನ ದಾಳಿ ನಡೆಸುತ್ತದೆ ಅಥವಾ ಇರಾನ್ ನೊಂದಿಗೆ ನೇರ ಯುದ್ಧ ನಿಶ್ಚಿತ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಈ ಮೂಲಕ ಇರಾನ್ ಮೇಲೆ ನಿರಂತರ ಒತ್ತಡ ಹೇರುವ ತಂತ್ರವನ್ನು ಅಮೆರಿಕ ಅನುಸರಿಸುತ್ತಿದೆ.

ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ

ಒಂದೆಡೆ ಅಮೆರಿಕ-ಇರಾನ್ ನಡುವೆ ಕದನ ವಿರಾಮ ನಡೆದಿದ್ದರೂ, ಮತ್ತೊಂದೆಡೆ ಇಸ್ರೇಲ್ ಲೆಬನಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಅಮೆರಿಕ-ಇರಾನ್ ಒಪ್ಪಂದ ನಡುವೆಯೇ ಇಸ್ರೇಲ್ ನಡೆಸಿದ ಭಾರಿ ದಾಳಿಗೆ ಲೆಬನಾನ್‌ನಲ್ಲಿ ಒಂದೇ ದಿನ 254 ಜನರು ಬಲಿಯಾಗಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. 'ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದದಲ್ಲಿ ಲೆಬನಾನ್ ಅನ್ನು ಸೇರಿಸಲಾಗುವುದಿಲ್ಲ' ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.

ಇಸ್ರೇಲ್‌ ದಾಳಿ ನಿಲ್ಲಿಸದಿದ್ರೆ ಒಪ್ಪಂದ ರದ್ದು ಇರಾನ್ ವಾರ್ನ್

ಲೆಬನಾನ್ ಮೇಲಿನ ಇಸ್ರೇಲ್ ದಾಳಿಯನ್ನು ನಿಲ್ಲಿಸದಿದ್ದರೆ ಕದನ ವಿರಾಮ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಬೆದರಿಕೆ ಹಾಕಿದ್ದಾರೆ. ಅಮೆರಿಕವು ಕದನ ವಿರಾಮವನ್ನು ಆರಿಸಿಕೊಳ್ಳಬೇಕು ಅಥವಾ ಇಸ್ರೇಲ್ ಮೂಲಕ ಯುದ್ಧವನ್ನು ಮುಂದುವರಿಸಬೇಕು, ಇವೆರಡನ್ನೂ ಏಕಕಾಲದಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಅವರು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅಮೆರಿಕಕ್ಕೆ ಇರಾನ್ ವಾರ್ನ್ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲೆಬೆನಾನ್ ಮೇಲೆ ಇಸ್ರೇಲ್ ಕಳೆದ 40 ವರ್ಷದಲ್ಲೇ ಅತೀ ಭೀಕರ ದಾಳಿ, 1500 ಮಂದಿ ಹತ್ಯೆ
Breaking ಕದನ ವಿರಾಮ ಉಲ್ಲಂಘನೆ, ಇಸ್ರೇಲ್ ದಾಳಿಯಿಂದ ಹೊರ್ಮುಜ್ ಜಲಸಂಧಿ ಮುಚ್ಚಿದ ಇರಾನ್?