Breaking ಕದನ ವಿರಾಮ ಉಲ್ಲಂಘನೆ, ಇಸ್ರೇಲ್ ದಾಳಿಯಿಂದ ಹೊರ್ಮುಜ್ ಜಲಸಂಧಿ ಮುಚ್ಚಿದ ಇರಾನ್?

Published : Apr 08, 2026, 10:10 PM IST
israel lebanon ceasefire exclusion netanyahu vs shehbaz sharif us iran ceasefire middle east conflict update

ಸಾರಾಂಶ

Breaking ಕದನ ವಿರಾಮ ಬ್ರೇಕ್, ಇಸ್ರೇಲ್ ದಾಳಿಯಿಂದ ಹೊರ್ಮುಜ್ ಜಲಸಂಧಿ ಮುಚ್ಚಿದ ಇರಾನ್, ಅಮೆರಿಕ ಮಾಡಿದ ಕದನ ವಿರಾಮದ ಬೆನ್ನಲ್ಲೇ ಲೆಬೆನಾನ್ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಪರಿಣಾಮ ಪರಿಸ್ಥಿತಿ ಉದ್ವಿಘ್ನಗೊಂಡಿದೆ.

ಟೆಹ್ರಾನ್ (ಏ.08) ಇರಾನ್ ಹಾಗೂ ಇಸ್ರೇಲ್ ನಡುವೆ ನಡೆದ ಕದನ ವಿರಾಮ ಉಲ್ಲಂಘನೆಯಾಗಿದೆ. ಕದನ ವಿರಾಮದ ಬಳಿಕ ಇಸ್ರೇಲ್ ನಡೆಯಿಂದ ಇರಾನ್ ಕೆರಳಿದೆ. ಕದನ ವಿರಾಮ ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿಗೆ ಸಂಬಂಧಿಸಿದೆ. ಇದು ಲೆಬೆನಾನ್‌ನಲ್ಲಿರುವ ಹೆಝೆಬೊಲ್ಲಾ ಉಗ್ರರ ದಾಳಿಗಲ್ಲ ಎಂದು ಹೇಳಿ ಇಸ್ರೇಲ್ ಬೈರತ್ ನಗರದ ಮೇಲೆ 100ಕ್ಕೂ ಹೆಚ್ಚು ದಾಳಿ ಮಾಡಿದೆ. ಲೆಬೆನಾನ್ ಮೇಲಿನ ದಾಳಿಯಿಂದ ಇರಾನ್ ಕೆರಳಿದೆ. ಇಸ್ರೇಲ್ ಕದನ ವಿರಾಮ ಉಲ್ಲಂಘಿಸಿದ ಕಾರಣ ಇತ್ತ ಇರಾನ್ ಅತ್ಯಂತ ಪ್ರಮುಖ ಜಲಮಾರ್ಗ ಹೊರ್ಮುಜ್ ಸ್ಟ್ರೈಟ್ ಮತ್ತೆ ಮುಚ್ಚಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದೆ. ಇರಾನ್ ನೌಕಾ ಪಡೆ ಹಡಗುಗಳಿಗೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ.

ಲೆಬೆನಾನ್ ಮೇಲಿನ ದಾಳಿಯಿಂದ ಜಲಸಂಧಿ ಬಂದ್ 

ಇರಾನ್ ಮೇಲೆ ಅಮರಿಕ ಹಾಗೂ ಇಸ್ರೇಲ್ ದಾಳಿಯಿಂದ ಹೊರ್ಮುಜ್ ಜಲಸಂಧಿ ಮುಚ್ಚಲಾಗಿತ್ತು. ಜಲಸಂಧಿ ತೆರೆಯುವಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪದೇ ಪದೇ ವಾರ್ನಿಂಗ್ ನೀಡಿ ಸತತ ದಾಳಿಯನ್ನು ಮಾಡಿದ್ದರು. ಆದರೂ ಇರಾನ್ ಬಗ್ಗಿರಲಿಲ್ಲ. ಕೊನೆಗೆ ಕದನ ವಿರಾಮಕ್ಕೆ ಅಮೆರಿಕ ಹಾಗೂ ಇರಾನ್ ಒಪ್ಪಿಕೊಂಡಿತ್ತು. ಇದರ ಬೆನ್ನಲ್ಲೇ ಹೊರ್ಮುಜ್ ಜಲಸಂಧಿ ತೆರೆಯಲಾಗಿತು. ಆದರೆ ಕದನ ವಿರಾಮದ ಬಳಿಕ ಇಸ್ರೇಲ್ ನೇರವಾಗಿ ಲೆಬೆನಾನ್ ಮೇಲೆ ನಿರಂತರ ದಾಳಿ ಮಾಡಿದೆ. ತಮ್ಮ ದಾಳಿ ಉಗ್ರರ ವಿರುದ್ಧ ಎಂದು ಸತತ ದಾಳಿ ಮಾಡಿದೆ. ಲೆಬೆನಾನ್‌ನಲ್ಲಿ ಹೆಝೆಬೊಲ್ಲಾ ಉಗ್ರರು ಅಡಗುತಾಣಗಳ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಇದರ ಪರಿಣಾಮ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ.

ಸರಕು ಹಡಗುಗಳಿಗೆ ಇರಾನ್ ನೌಕಾ ಪಡೆ ಅಲರ್ಟ್

ಜಲಸಂಧಿ ತೆರೆದಿದ್ದ ಕಾರಣ ಹಲವು ಸರಕು ಸಾಗಣೆ, ತೈಲ ಹಾದೂ ಗ್ಯಾಸ್ ಹಡುಗುಗಳ ಹೊರ್ಮುಜ್ ಜಲಸಂಧಿ ಮೂಲಕ ಸಾಗಲು ಸಜ್ಜಾಗಿತ್ತು. ಆಧರೆ ದಾಳಿಯಿಂದ ಇರಾನ್ ತಕ್ಷಣವೇ ಅಮೆರಿಕದ ಕದನ ವಿರಾಮ ಉಲ್ಲಂಘಿಸಿದೆ. ಬಳಿಕ ಹಡುಗಳಿಗೆ ಇರಾನ್ ನೌಕಾ ಪಡೆ ಅಲರ್ಟ್ ನೀಡಿದೆ. ಪರಿಸ್ಥಿತಿ ಭಿನ್ನವಾಗಿರುವ ಕಾರಣ ಹೊರ್ಮುಜ್ ಜಲಸಂಧಿ ಮೂಲಕ ಸಾಗಲು ಅನುವು ನೀಡಲಾಗುವುದಿಲ್ಲ ಅನ್ನೋ ಸಂದೇಶ ನೀಡಿದೆ. ಯಾವುದೇ ಹಡಗುಗಳು ಜಲಸಂಧಿ ಮೂಲಕ ಸಾಗಲು ಪ್ರಯತ್ನಿಸಿದರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಾವನ್ನು ಮಡಿಲಲ್ಲಿಟ್ಟು, ದೇಶಕ್ಕಾಗಿ ಪಾಕ್​ನ ಸೊಸೆಯಾದ ಭಾರತದ ರಾ ಏಜೆಂಟ್​ ಮೈನವಿರೇಳಿಸುವ ಸ್ಟೋರಿ
ಇರಾನ್‌ಗಿಲ್ಲ ಶುದ್ದ ಯುರೇನಿಯಂ, ಸುಂಕ ಕಡಿತ ಹಾಗೂ ನಿರ್ಬಂಧ ಸಡಿಲಿಕೆಯ ಭರವಸೆ ನೀಡಿದ ಟ್ರಂಪ್!