
ಟೆಲ್ ಅವೀವ್ (ಏ.08) ಅಮೆರಿಕ ಹಾಗೂ ಇರಾನ್ ನಡುವಿನ ಕದನವಿರಾಮದಿಂದ ನಿಟ್ಟುಸಿರು ಬಿಟ್ಟ ರಾಷ್ಟ್ರಗಳಿಗೆ ಇದೀಗ ಮತ್ತೆ ಆತಂಕ ಹೆಚ್ಚಾಗಿದೆ. ಕಾರಣ ಒಂದೆಡೆ ಕದನ ವಿರಾಮ ಉಲ್ಲಂಘನೆಯಾಗಿದೆ ಅನ್ನೋ ವರದಿಗಳು ಹೊರಬರುತ್ತಿದೆ. ಇದಕ್ಕೆ ಕಾರಣ ಲೆಬೆನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ. ಕಳೆದ 40 ವರ್ಷದ ಇತಿಹಾಸದಲ್ಲಿ ಲೆಬೆನಾನ್ ಮೇಲೆ ಇಸ್ರೇಲ್ ಇದೀಗ ಅತೀ ದೊಡ್ಡ ದಾಳಿ ನಡೆಸಿದೆ. ಬೈರತ್ ನಗರದ ಮೇಲೆ ಇಸ್ರೇಲ್ 100ಕ್ಕೂ ಹೆಚ್ಚು ದಾಳಿ ನಡಿಸಿದೆ. ಈ ದಾಳಿಯಲ್ಲಿ ಸದ್ಯ 1500 ಮಂದಿ ಹತ್ಯೆಯಾಗಿದ್ದಾರೆ. ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೆ ಏರಿಕೆಯಾಗುತ್ತಲೇ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಅಮೆರಿಕ ಹಾಗೂ ಇರಾನ್ ನಡುವೆ ನಡೆದಿರುವ ಕದನ ವಿರಾಮ ಇರಾನ್ ಮೇಲಿನ ದಾಳಿಗೆ ಮಾತ್ರ. ಆದರೆ ಉಗ್ರ ಹೆಝ್‌ಬೊಲ್ಲಾ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಇಲ್ಲ ಎಂದು ಇಸ್ರೇಲ್ ಹೇಳಿಕೆ. ಬಳಿಕ ಸತತವಾಗಿ ಲೆಬೆನಾನ್ ಮೇಲೆ ದಾಳಿ ಮಾಡಿದೆ. ಹೆಝ್‌ಬೊಲ್ಲಾದ 100 ಕಮಾಂಡರ್ ಸೆಂಟರ್ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಇರಾನ್ ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿರುವ ಇಸ್ರೇಲ್, ಲೆಬೆನಾನ್ ಮೇಲಿನ ದಾಳಿ ನಿಲ್ಲಿಸಲು ಒಪ್ಪಿಕೊಂಡಿಲ್ಲ.
1982ರಲ್ಲಿ ಇಸ್ರೇಲ್ ಲೆಬೆನಾನ್ ರಾಜಧಾನಿ ಬೈರತ್ ಮೇಲೆ ಭೀಕರ ದಾಳಿ ನಡೆಸಿತ್ತು. ಇದಾದ ಬಳಿಕ ಲೆಬೆನಾನ್ ಮೇಲೆ ಇಸ್ರೇಲ್ ಅತೀ ದೊಡ್ಡ ದಾಳಿ ಇದೀಗ ನಡೆಸಿದೆ. ಯಾವುದೇ ಸೂಚನೆ, ವಾರ್ನಿಂಗ್, ಅಲರ್ಟ್ ನೀಡದೆ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇಸ್ರೇಲ್ ನಡೆಸಿದ ಈ ದಾಳಿಯಿಂದ ಇರಾನ್ ಕೆರಳಿದೆ. ಇದೇ ಕಾರಣದಿಂದ ಹೊರ್ಮುಜ್ ಜಲಸಂಧಿ ಬಂದ್ ಮಾಡಲಾಗಿದೆ ಎಂದು ವರದಿಯಾಗಿದೆ.
ಇಸ್ರೇಲ್ ದಾಳಿಯಿಂದ 1500ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದರೆ, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ. ಹೆಝ್‌ಬೊಲ್ಲಾಉಗ್ರರ ವಿರುದ್ಧಧ ಮಿಲಿಟರಿ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಎಚ್ಚರಿಸಿದ್ದಾರೆ. ಮಾರ್ಚ್ 2 ರಂದು ಇಸ್ರೇಲ್ ಲೆಬೆನಾನ್ ನಾಗರೀಕರಿಗೆ ಎಚ್ಚರಿಕೆ ನೀಡಿತ್ತು. ಹೆಝ್‌ಬೊಲ್ಲಾ ಉಗ್ರರ ವಿರುದ್ದ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಎಚ್ಚರಿಸಿತ್ತು. ಇದೇ ವೇಳೆ ನಾಗರೀಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಕ್ಕೆ ಸೂಚಿಸಿತ್ತು. ಬಳಿಕ ಇರಾನ್ ಮೇಲೆ ಯುದ್ಧದ ನಡುವೆ ಲೆಬೆನಾನ್ ಮೇಲೆ ದಾಳಿ ನಡೆಸಿತ್ತು. ಇದೀಗ ಇರಾನ್ ಮೇಲೆ ಕದನ ವಿರಾಮದ ಕಾರಣ ಎಲ್ಲಾ ಗಮನವನ್ನು ಲೆಬೆನಾನ್ ಹೆಝ್‌ಬೊಲ್ಲಾ ಮೇಲೆ ಇಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ