ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸುತ್ತಿರುವ ಚೀನಾ ಮೇಲೆ ಶೇ.50ರಿಂದ 100ರಷ್ಟು ತೆರಿಗೆ ವಿಧಿಸುವಂತೆ, ರಷ್ಯಾದಿಂದ ತೈಲ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ನ್ಯಾಟೋ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಟೋ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.
ಅಮೆರಿಕವು ರಷ್ಯಾ ವಿರುದ್ಧ ನಿರ್ಣಾಯಕ ನಿರ್ಬಂಧ ಹೇರಲು ಸಿದ್ಧವಾಗಿದೆ. ಆದರೆ, ಇದಕ್ಕಾಗಿ ಯುರೋಪಿನ ಸಹಯೋಗಿ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕು ಮತ್ತು ಈ ಸಮನ್ವಯದ ಕ್ರಮದಲ್ಲಿ ಕೈಜೋಡಿಸಬೇಕು. ಉಕ್ರೇನ್-ರಷ್ಯಾ ಯುದ್ಧ ಮುಕ್ತಾಯಗೊಳ್ಳುವವರೆಗೆ ಚೀನಾದ ಮೇಲೆ ಭಾರೀ ತೆರಿಗೆ ಹಾಕಬೇಕು ಎಂದು ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ ಸೋಷಿಯಲ್‌ನಲ್ಲಿ ಎಲ್ಲಾ ನ್ಯಾಟೋ ದೇಶಗಳು ಹಾಗೂ ವಿಶ್ವವನ್ನುದ್ದೇಶಿಸಿ ಬರೆದುಕೊಂಡಿದ್ದಾರೆ.
‘ನೀವು ಯಾವಾಗ ಹೇಳುತ್ತೀರೋ ಆಗ ನಾನು ನಿರ್ಬಂಧ ವಿಧಿಸಲು ಸಿದ್ಧನಿದ್ದೇನೆ. ನ್ಯಾಟೋ ಒಂದು ಗುಂಪಾಗಿ ಚೀನಾದ ಮೇಲೆ ದಂಡನೆಯ ಕ್ರಮವಾಗಿ ತೆರಿಗೆ ವಿಧಿಸಬೇಕು. ಚೀನಾವು ರಷ್ಯಾದ ಮೇಲೆ ಭಾರೀ ನಿಯಂತ್ರಣ ಹೊಂದಿದೆ. ಈ ತೆರಿಗೆ ಯುದ್ಧ ಮುಗಿಯುವವರೆಗೆ ಮತ್ತು ಸೇನೆಯನ್ನು ಸಂಪೂರ್ಣವಾಗಿ ವಾಪಸ್ ಪಡೆದು ಶಾಂತಿ ಸ್ಥಾಪನೆಯಾಗುವವರೆಗೆ ಮುಂದುವರಿಯಬೇಕು’ ಎಂದು ಅವರು ಹೇಳಿದ್ದಾರೆ.
ಈ ಯುದ್ಧದಲ್ಲಿ ಕಳೆದ ಕೆಲ ವಾರಗಳಲ್ಲಿ 7,118 ಮಂದಿ ಮೃತಪಟ್ಟಿದ್ದಾರೆ. ಒಂದು ವೇಳೆ ನಾನು ಅಧಿಕಾರದಲ್ಲಿರುತ್ತಿದ್ದರೆ ಈ ಯುದ್ಧ ಆರಂಭವಾಗುತ್ತಿರಲೇ ಇಲ್ಲ, ಇದು ‘ಬೈಡನ್ ಮತ್ತು ಜೆಲೆನ್ಸ್ಕಿ ಅವರ ಯುದ್ಧ’ ಎಂದು ಕರೆದಿದ್ದಾರೆ.
ಬಲಪಂಥೀಯ ಫೈರ್‌ಬ್ರ್ಯಾಂಡ್ ಚಾರ್ಲಿ ಕ್ರಿಕ್ ಹತ್ಯೆ, ಅಮೆರಿಕಾದಲ್ಲಿ ನಡೆಯುತ್ತಿರುವುದೇನು?
ಬೆಂಗಳೂರು : ಹಾಡಹಗಲೇ ಜನಜಂಗುಳಿಯಲ್ಲೇ ಚಾರ್ಲಿ ಕ್ರಿಕ್ ಹತ್ಯೆಯು ಅಮೆರಿಕಾವನ್ನು ಬೆಚ್ಚಿಬೀಳಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಆಪ್ತನಾಗಿದ್ದ, ಯುವನಾಯಕನಾಗಿ ಗುರುತಿಸಿಕೊಂಡಿದ್ದ ಚಾರ್ಲಿ ಕ್ರಿಕ್ ಹತ್ಯೆಯು ಅಮೆರಿಕಾದ ರಾಜಕೀಯ ಹಿಂಸೆಯ ಇನ್ನೊಂದು ಮುಖವನ್ನು ಮತ್ತೆ ತೆರೆದಿಟ್ಟಿದೆ.
ಉತಾಹ್ ವ್ಯಾಲಿ ವಿವಿಯಲ್ಲಿ ಖುದ್ದು ತಾನು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಸುಮಾರು 3 ಸಾವಿರ ವಿದ್ಯಾರ್ಥಿಗಳ ಮುಂದೆ ಬಲಪಂಥೀಯ ಫೈರ್‌ಬ್ರ್ಯಾಂಡ್ ಆಗಿದ್ದ 31 ವರ್ಷ ಪ್ರಾಯದ ಚಾರ್ಲಿ ಕ್ರಿಕ್ ಹತ್ಯೆಗೈಯಲ್ಪಟ್ಟಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಹೊಂದಿದ್ದ ಕ್ರಿಕ್ ತನ್ನ 18ನೇ ವಯಸ್ಸಿನಲ್ಲೇ ವಿವಿ ಕ್ಯಾಂಪಸ್‌ಗಳಲ್ಲಿ ಕನ್ಸರ್ವೇಟಿವ್ ವಿಚಾರಧಾರೆಗಳನ್ನು ಪ್ರಚಾರ ಮಾಡಲು ಟರ್ನಿಂಗ್ ಪಾಯಿಂಟ್ ಯುಎಸ್‌ಎ ಎಂಬ ಎನ್‌ಜಿಓಅನ್ನೇ ಸ್ಥಾಪಿಸಿ ಮುನ್ನಡೆಸುತ್ತಿದ್ದ.
ಅಮೆರಿಕಾದಲ್ಲಿ ಗನ್ ಸಂಸ್ಕೃತಿ, ಜನಾಂಗೀಯ & ರಾಜಕೀಯ ಹಿಂಸೆ ಹೊಸದೇನಲ್ಲ. ಅದೆಷ್ಟು ಪ್ರಬಲ ರಾಜಕೀಯ ನಾಯಕರು ಅಧ್ಯಕ್ಷರಾಗಿ ಬಂದು ಹೋದರೂ ಇವುಗಳಿಂದ ಅಮೆರಿಕಾಗೆ ಮುಕ್ತಿ ಕೊಡಿಸಲು ಸಾಧ್ಯವಾಗಿಲ್ಲ. ಕೆಲ ದಿನಗಳ ಹಿಂದೆ, ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲೇ ಯುವತಿಯೊಬ್ಬಳ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಅಮೆರಿಕಾದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಘಟನೆಯು ಒಂದು ಕಡೆ ಸುರಕ್ಷತೆ ಕುರಿತು ಭಾರೀ ಚರ್ಚೆಗೆ ಕಾರಣವಾದರೆ, ಇನ್ನೊಂದು ಕಡೆ ಕರಿಯ-ಬಿಳಿಯ ಚರ್ಚೆಯನ್ನು ಹುಟ್ಟುಹಾಕಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ