ಗುರುದ್ವಾರದ ಅಧಿಕಾರ ಕಿತ್ತುಕೊಂಡು ಮುಸ್ಲಿಂ ಮಂಡಳಿಗೆ ಕೊಟ್ಟ ಪಾಕ್!

Kannadaprabha News   | Asianet News
Published : Nov 06, 2020, 08:12 AM ISTUpdated : Nov 06, 2020, 08:30 AM IST
ಗುರುದ್ವಾರದ ಅಧಿಕಾರ ಕಿತ್ತುಕೊಂಡು ಮುಸ್ಲಿಂ ಮಂಡಳಿಗೆ ಕೊಟ್ಟ ಪಾಕ್!

ಸಾರಾಂಶ

ಸಿಖ್ಖರ ಪರಮೋಚ್ಚ ಗುರುದ್ವಾರಗಳಲ್ಲಿ ಒಂದಾದ ಕರ್ತಾರ್‌ಪುರ ದರ್ಬಾರ್‌ ಸಾಹಿಬ್‌ ಗುರುದ್ವಾರವನ್ನು ಅಲ್ಲಿನ ಸಿಖ್‌ ಗುರುದ್ವಾರ ಪ್ರಬಂಧಕ ಸಮಿತಿಯ ಆಡಳಿತದಿಂದ ಕಿತ್ತುಕೊಳ್ಳಲಾಗಿದೆ

ಇಸ್ಲಾಮಾಬಾದ್‌/ನವದೆಹಲಿ (ನ.06): ಪಾಕಿಸ್ತಾನದ ಮೇಲೆ ಮುಸ್ಲಿಮೇತರರ ಮೇಲೆ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂಬ ಆರೋಪಗಳ ನಡುವೆಯೇ ಅಂಥದ್ದೇ ಒಂದು ಕ್ರಮವನ್ನು ಇಮ್ರಾನ್‌ ಖಾನ್‌ ಆಡಳಿತ ತೆಗೆದುಕೊಂಡಿದೆ. ಸಿಖ್ಖರ ಪರಮೋಚ್ಚ ಗುರುದ್ವಾರಗಳಲ್ಲಿ ಒಂದಾದ ಕರ್ತಾರ್‌ಪುರ ದರ್ಬಾರ್‌ ಸಾಹಿಬ್‌ ಗುರುದ್ವಾರವನ್ನು ಅಲ್ಲಿನ ಸಿಖ್‌ ಗುರುದ್ವಾರ ಪ್ರಬಂಧಕ ಸಮಿತಿಯ ಆಡಳಿತದಿಂದ ಕಿತ್ತುಕೊಂಡಿರುವ ಸರ್ಕಾರ, ಇದರ ಆಡಳಿತ ನಿರ್ವಹಣೆಯನ್ನು ಮುಸ್ಲಿಂ ಟ್ರಸ್ಟ್‌ ಒಂದಕ್ಕೆ ನೀಡಿದೆ. 

ನವೆಂಬರ್‌ 3ರಂದು ಪಾಕ್‌ ಸರ್ಕಾರವು, ಮುಸ್ಲಿಂ ಸಂಸ್ಥೆಯಾದ ಇವ್ಯಾಕ್ಯುಯೀ ಟ್ರಸ್ಟ್‌ ಪ್ರಾಪರ್ಟಿ ಬೋರ್ಡ್‌ಗೆ (ಇಟಿಪಿಬಿ) ಗುರುದ್ವಾರದ ಅಧಿಕಾರ ಹಸ್ತಾಂತರಿಸಿದೆ. ಪಾಕಿಸ್ತಾನದ ಇತರ ಹಿಂದೂ ದೇವಾಲಯಗಳು ಹಾಗೂ ಗುರುದ್ವಾರಗಳ ನಿರ್ವಹಣೆಯನ್ನು ಇಟಿಬಿಪಿ ನಡೆಸುತ್ತದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ..! ...

ಇಮ್ರಾನ್‌ ಕ್ರಮಕ್ಕೆ ಭಾರತ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದ್ದು, ‘ಇದೊಂದು ಅತ್ಯಂತ ಖಂಡನೀಯ ಕ್ರಮ. ಸಿಖ್ಖೇತರ ಟ್ರಸ್ಟ್‌ಗೆ ಗುರುದ್ವಾರದ ನಿರ್ವಹಣೆಯನ್ನು ವಹಿಸುವ ಮೂಲಕ ಸಿಖ್ಖರ ಭಾವನೆಗೆ ಈ ಮೂಲಕ ಧಕ್ಕೆ ತರಲಾಗಿದೆ. ಈ ಬಗ್ಗೆ ಸಿಖ್‌ ಸಮುದಾಯದಿಂದ ತಮಗೆ ದೂರು ಬಂದಿದೆ. ಸಿಖ್ಖರ ಹಕ್ಕುಗಳ ಕಿತ್ತುಕೊಳ್ಳುವಿಕೆ ನಡೆದಿದೆ’ ಎಂದು ಕಿಡಿಕಾರಿದೆ.

ಕರ್ತಾರ್‌ಪುರ ಕಾರಿಡಾರ್‌ ಭಾರತದ ಗಡಿಗೆ ಕೂಗಳತೆ ದೂರದಲ್ಲಿ ಇರುವ ನರೋವಾಲ್‌ ಜಿಲ್ಲೆಯಲ್ಲಿದೆ. ಇದು ಸಿಖ್ಖರ ಪರಮೋಚ್ಚ ಧರ್ಮಗುರು ಗುರುನಾನಕ್‌ ಅವರ ಸಮಾಧಿ ಸ್ಥಳ. 2019ರ ನ.9ರಂದು ಭಾರತದ ಗಡಿ ತೆರೆದು ಕರ್ತಾರ್‌ಪುರಕ್ಕೆ ಭಾರತದ ಸಿಖ್ಖರು ಆಗಮಿಸಲು ಅವಕಾಶ ನೀಡಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!