ಟ್ರಂಪ್ ಪ್ರಭಾವ; ಮೆಟಾ ಕಚೇರಿಗಳಲ್ಲಿದ್ದ ಟ್ಯಾಂಪೂನ್‌ಗಳನ್ನು ತೆಗೆಯಲು ಜುಕರ್‌ಬರ್ಗ್ ಆದೇಶ

By Anusha Kb  |  First Published Jan 14, 2025, 2:51 PM IST

ಮೆಟಾ ಕಚೇರಿಗಳ ಪುರುಷರ ವಾಶ್‌ರೂಮ್‌ಗಳಲ್ಲಿ ಇರಿಸಿದ್ದ ಟ್ಯಾಂಪೂನ್‌ಗಳನ್ನು ತೆಗೆಯುವಂತೆ ಆದೇಶ ಬಂದಿದೆ. ಇದಕ್ಕೇನು ಕಾರಣ ಇಲ್ಲಿದೆ ಓದಿ


ನ್ಯೂಯಾರ್ಕ್‌: ಅಮೆರಿಕಾದ ಸಿಲಿಕಾನ್ ವ್ಯಾಲಿ, ಟೆಕ್ಸಾಸ್, ನ್ಯೂಯಾರ್ಕ್‌ನಲ್ಲಿರುವ ಮೆಟಾ ಕಚೇರಿಗಳ ಪುರುಷರ ವಾಶ್‌ರೂಮ್‌ಗಳಲ್ಲಿ ಇರಿಸಿದ್ದ ಟ್ಯಾಂಪೂನ್‌ಗಳನ್ನು ಕೂಡಲೇ ತೆಗೆಯುವಂತೆ ಅಲ್ಲಿನ ಕಚೇರಿಗಳಿಗೆ ಆದೇಶ ಬಂದಿದೆ ಎಂದು ವರದಿಯಾಗಿದೆ.   ಮೆಟಾ ಸಂಸ್ಥಾಪಕ ಮಾರ್ಕ್  ಜುಕರ್‌ಬರ್ಗ್ ಅವರ ಈ ಸಂಸ್ಥೆಗಳಲ್ಲಿ ಈ ಹಿಂದೆ ತೃತೀಯ ಲಿಂಗಿಗಳಿಗಾಗಿ ಈ ಟ್ಯಾಂಪೂನ್‌ಗಳನ್ನು ಇಡಲಾಗಿತ್ತು. ಸಂಸ್ಥೆಯ ಇಬ್ಬರು ಉದ್ಯೋಗಿಗಳು ನೀಡಿದ ಮಾಹಿತಿ ಆಧರಿಸಿ ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ವರದಿ ಮಾಡಿದೆ. ಅಮೆರಿಕಾದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಮೆಟಾ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್ ಭೇಟಿಯಾಗಿ ಅವರ ಕಾರ್ಯಕ್ರಮಕ್ಕೆ 1 ಮಿಲಿಯನ್ ಡಾಲರ್ ಹಣಕಾಸು ನೆರವು ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.

ಮಾರ್ಕ್ ಜುಕರ್‌ಬರ್ಗ್ (Mark Zuckerberg)ಅವರು ಪ್ಯಾಕ್ಟ್ ಚೆಕ್ಕಿಂಗ್ ಕಾರ್ಯಕ್ರಮವನ್ನು (fact-checking programme) ಸ್ಥಗಿತಗೊಳಿಸಿ ಸುದ್ದಿಯಲ್ಲಿರುವ ಬೆನ್ನಲೇ ಈಗ ಇದೊಂದು ಹೊಸ ಬೆಳವಣಿಗೆ ನಡೆದಿದೆ. ವರದಿಗಳ ಪ್ರಕಾರ ಮಾರ್ಕ್ ಜುಕರ್‌ಬರ್ಗ್ ಅವರು ತಮ್ಮ ಕಚೇರಿಗಳ ಪುರುಷರ ಬಾತ್‌ರೂಮ್‌ನಲ್ಲಿ ಇಟ್ಟಿದ್ದ ಟ್ಯಾಂಪೂನ್‌ಗಳನ್ನು ತೆಗೆಯಲು ಹೇಳಿದ್ದಾರೆ ಎಂದು ವರದಿಯಾಗಿದೆ. 'ಇನ್‌ಸೈಡ್ ಮಾರ್ಕ್ ಜುಕರ್‌ಬರ್ಗ್ಸ್ ಸ್ಪ್ರಿಂಟ್ ಟು ರೀಮೇಕ್ ಮೆಟಾ ಫಾರ್ ದಿ ಟ್ರಂಪ್ ಎರಾ' ಎಂಬ ಶೀರ್ಷಿಕೆಯಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಮಾಡಿದ ವರದಿಯಲ್ಲಿಮೆಟಾ, ಪುರುಷರ ಬಾತ್‌ರೂಮ್‌ಗಳಲ್ಲಿ ಟ್ರಾನ್ಸ್‌ಜೆಂಡರ್ ಉದ್ಯೋಗಿಗಳ ಬೆಂಬಲಿಸಲು ಇರಿಸಿದ್ದ  ಟ್ಯಾಂಪೂನ್‌ಗಳನ್ನು ತೆಗೆದುಹಾಕಲು ಆದೇಶಿಸಿದೆ ಎಂದು ವರದಿ ಮಾಡಿದೆ.

Tap to resize

Latest Videos

ಮೆಟಾದ ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ ಕಾರ್ಯಕ್ರಮಗಳನ್ನು ಕೊನೆಗೊಳಿಸಲು ಮತ್ತು ಕಂಪನಿಯು ಅತ್ಯಂತ ಪ್ರತಿಭಾನ್ವಿತ ಜನರೊಂದಿಗೆ ತಂಡಗಳನ್ನು ನಿರ್ಮಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಮೆಟಾದ ಮುಖ್ಯ ಜಾಗತಿಕ ಅಧಿಕಾರಿ ಜೋಯಲ್ ಕಪ್ಲಾನ್ ಹೇಳಿದ್ದಾರೆ. ನಮ್ಮಲ್ಲಿ ಹೊಸ ಆಡಳಿತ ಬರುತ್ತಿದೆ, ಅದು ಕಂಪನಿಗಳ ಮೇಲೆ ಸೆನ್ಸಾರ್ ಮಾಡುವಂತೆ ಒತ್ತಡ ಹೇರುವುದಿಲ್ಲ ಮತ್ತು ಮುಕ್ತ ಅಭಿವ್ಯಕ್ತಿಯ ದೊಡ್ಡ ಬೆಂಬಲಿಗನಾಗಿರಲಿದೆ. ಇದು ಮಾರ್ಕ್ ಕಂಪನಿಯನ್ನು ಸ್ಥಾಪಿಸಿದ ಮೌಲ್ಯಗಳಿಗೆ ನಮ್ಮನ್ನು ಮರಳಿ ಕರೆದೊಯ್ಯುತ್ತದೆ ಎಂದು ಅವರು ಹೇಳಿದರು ಎಂದು ಫಾಕ್ಸ್ ನ್ಯೂಸ್ ಡಿಜಿಟಲ್‌ ವರದಿ ಮಾಡಿದೆ. 

ಅಂದಹಾಗೆ ಡೋನಾಲ್ಡ್‌ ಟ್ರಂಪ್ ಕೇವಲ ಸ್ತ್ರೀ ಹಾಗೂ ಪುರುಷ ಎಂಬ 2 ಲಿಂಗಗಳು ಮಾತ್ರವಿದೆ ಎಂದು ನಂಬುತ್ತಿದ್ದು ಎಲ್‌ಜಿಬಿಟಿಕ್ಯೂ ಸಮುದಾಯದ ಬಗ್ಗೆ ಅವರಿಗೆ ಒಲವಿಲ್ಲ. 

ಕೋವಿಡ್ ಲಸಿಕೆ ವರದಿಗೆ ಸೆನ್ಸಾರ್ ಮಾಡುವಂತೆ ಆಗ್ರಹ

ಈ ನಡುವೆ ಕೋವಿಡ್-19 ಲಸಿಕೆಗಳ ವಿಷಯವನ್ನು ಸೆನ್ಸಾರ್ ಮಾಡಲು ಅಮೆರಿಕಾದ ನಿರ್ಗಮಿಸಲಿರುವ ಅಧ್ಯಕ್ಷ ಜೋ ಬೈಡೆನ್ ಅವರ ಆಡಳಿತವು ಫೇಸ್‌ಬುಕ್ ಅನ್ನು ಒತ್ತಾಯಿಸಿದೆ ಎಂದು ಆರೋಪಿಸಿ ಮಾರ್ಕ್‌ ಜುಕರ್‌ಬರ್ಗ್ ಅವರು ಬೈಡೆನ್ ಆಡಳಿತದ ವಿರುದ್ಧ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಜುಕರ್‌ಬರ್ಗ್‌ ಸರ್ಕಾರದ ಸೆನ್ಸಾರ್‌ಶಿಪ್ ಬಗ್ಗೆ ಮಾತನಾಡಿದ್ದು, ಇದು ಅತ್ಯಂತ ತೀವ್ರ ಹೊಡೆತವಾಗಿದೆ. ಬೈಡೆನ್ ಆಡಳಿತದ ಸಮಯದಲ್ಲಿ ಅವರು ಲಸಿಕೆ ಕಾರ್ಯಕ್ರಮವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದರು ಎಂದು ನಾನು ಹೇಳುತ್ತೇನೆ. ಈಗ ನಾನು ಸಾಮಾನ್ಯವಾಗಿ ಲಸಿಕೆಗಳನ್ನು ಹೊರತರುವ ಪರವಾಗಿರುತ್ತೇನೆ, ಲಸಿಕೆಗಳು ನಕಾರಾತ್ಮಕಕ್ಕಿಂತ ಹೆಚ್ಚು ಸಕಾರಾತ್ಮಕವಾಗಿವೆ ಎಂದು ನಾನು ಭಾವಿಸುತ್ತೇನೆ ಆದರೆ ಅವರು ಆ ಕಾರ್ಯಕ್ರಮವನ್ನು ಕೈಬಿಡಲು ಪ್ರಯತ್ನಿಸುತ್ತಿರುವಾಗ ಅದರ ವಿರುದ್ಧ ವಾದಿಸುವ ಯಾರನ್ನಾದರೂ ಸೆನ್ಸಾರ್ ಮಾಡಲು ಪ್ರಯತ್ನಿಸಿದರು ಎಂದು ನಾನು ಭಾವಿಸುತ್ತೇನೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ. 

click me!