ಭಾರತ-ಪಾಕ್‌ ಸಂಘರ್ಷ ನಿಲ್ಲಿಸಿದ್ದು ನಾನೇ : ಟ್ರಂಪ್‌ ಪುನರುಚ್ಚಾರ

Published : Jul 09, 2025, 04:36 AM IST
US President Donald Trump says the US will send more weapons to Ukraine, citing heavy Russian attacks and the need for stronger defense (Source: Reuters)

ಸಾರಾಂಶ

ಭಾರತ ಮತ್ತು ಪಾಕ್‌ ನಡುವಿನ ಸಂಘರ್ಷ ನಿಲ್ಲಿಸಿದ್ದೇ ನಾನು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಪುನರುಚ್ಚರಿಸಿದ್ದಾರೆ.   ಯುದ್ಧ ಮುಂದುವರಿಸಿದ್ದೇ ಆದಲ್ಲಿ ನಾನು ನಿಮ್ಮ ಜತೆಗೆ ವ್ಯಾಪಾರ ಬಂದ್‌ ಮಾಡುವುದಾಗಿ ಎಂದು ಬೆದರಿಕೆ ಹಾಕಿದೆ. ಇದರಿಂದ ಅವರು ಯುದ್ಧ ನಿಲ್ಲಿಸಿದರು ಎಂದು ಹೇಳಿದರು

 ವಾಷಿಂಗ್ಟನ್‌:  ಭಾರತ ಮತ್ತು ಪಾಕ್‌ ನಡುವಿನ ಸಂಘರ್ಷ ನಿಲ್ಲಿಸಿದ್ದೇ ನಾನು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಪುನರುಚ್ಚರಿಸಿದ್ದಾರೆ. ಒಂದು ವೇಳೆ ನೀವು ಇದೇ ರೀತಿ ಯುದ್ಧ ಮುಂದುವರಿಸಿದ್ದೇ ಆದಲ್ಲಿ ನಾನು ನಿಮ್ಮ ಜತೆಗೆ ವ್ಯಾಪಾರ ಬಂದ್‌ ಮಾಡುವುದಾಗಿ ಎಂದು ಬೆದರಿಕೆ ಹಾಕಿದೆ. ಇದರಿಂದ ಅವರು ಯುದ್ಧ ನಿಲ್ಲಿಸಿದರು ಎಂದು ಹೇಳಿದರು.

ಭಾರತ, ಪಾಕಿಸ್ತಾನ, ಸರ್ಬಿಯಾ, ಕೊಸೊವೋ, ರ್‍ವಾಂಡಾ ಮತ್ತು ಕಾಂಗೋ ಮತ್ತಿತರ ದೇಶಗಳು ಗಂಭೀರ ಯುದ್ಧದ ಹೊಸ್ತಿಲಲ್ಲಿದ್ದವು. ನಾವು ಹಲವು ಯುದ್ಧಗಳನ್ನು ತಡೆದಿದ್ದೇವೆ. ಇವುಗಳಲ್ಲಿ ಭಾರತ-ಪಾಕ್‌ ನಡುವಿನ ಯುದ್ಧ ಮಹತ್ವದ್ದು. ಈ ಎರಡೂ ದೇಶಗಳು ಅಣ್ವಸ್ತ್ರ ಕದನಕ್ಕೆ ಸಿದ್ಧರಾಗಿದ್ದವು. ಹೀಗಾಗಿ ಅದನ್ನು ತಡೆಯುವುದು ಮುಖ್ಯವಾಗಿತ್ತು ಎಂದು ಟ್ರಂಪ್‌ ತಿಳಿಸಿದರು.

ನೊಬೆಲ್‌ ಶಾಂತಿ ಪ್ರಶಸ್ತಿಗೆ ಟ್ರಂಪ್‌: ಪಾಕ್‌ ಬಳಿಕ ಇಸ್ರೇಲ್‌ ಶಿಫಾರಸು

ವಾಷಿಂಗ್ಟನ್‌: ಭಾರತ- ಪಾಕ್ ಸಂಘರ್ಷದಲ್ಲಿ ಕದನ ವಿರಾಮ ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಮತ್ತು ಸಂಭವನೀಯ ಪರಮಾಣು ಯುದ್ಧ ತಡೆದಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಾಕಿಸ್ತಾನ ಸರ್ಕಾರ ನೊಬೆಲ್‌ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದ ಬೆನ್ನಲ್ಲೇ ಇದೀಗ ಇಸ್ರೇಲ್‌ ಕೂಡ ಅದೇ ಕೆಲಸ ಮಾಡಿದೆ. ‘ಅರ್ಹರು ನೊಬೆಲ್‌ ಪಡೆಯಬೇಕು’ ಎಂದು ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಟ್ರಂಪ್‌ ಗುಣಗಾನ ಮಾಡಿದ್ದಾರೆ. ಸೋಮವಾರ ಶ್ವೇತಭವನದಲ್ಲಿ ನಡೆದ ಭೋಜನ ಕೂಟದಲ್ಲಿ ಬೆಂಜಮಿನ್ ನೆತನ್ಯಾಹು ಭಾಗಿಯಾಗಿದ್ದರು. ಈ ವೇಳೆ ಅವರು ಡೊನಾಲ್ಡ್‌ ಟ್ರಂಪ್‌ಗೆ ನಾಮ ನಿರ್ದೇಶನ ಪತ್ರವನ್ನು ಹಸ್ತಾಂತರಿಸಿದ್ದಾರೆ. ಇತ್ತೀಚೆಗೆ ಇಸ್ರೇಲ್‌- ಇರಾನ್‌ ಯುದ್ಧ ತಡೆಯುವಲ್ಲೂ ಟ್ರಂಪ್‌ ಪ್ರಮುಖ ಪಾತ್ರ ವಹಿಸಿದ್ದರು.

ಬಾಂಗ್ಲಾ ಸೇರಿ 14 ದೇಶಗಳ ಮೇಲೆ ಟ್ರಂಪ್ ತೆರಿಗೆ

ನ್ಯೂಯಾರ್ಕ್‌/ ವಾಷಿಂಗ್ಟನ್‌: ಬಾಂಗ್ಲಾ, ಜಪಾನ್ ಸೇರಿದಂತೆ 14 ರಾಷ್ಟ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತೆರಿಗೆ ಯುದ್ಧವನ್ನು ಆರಂಭಿಸಿದ್ದು, ಆ.1ರಿಂದ ಹೊಸ ತೆರಿಗೆ ನೀತಿ ಜಾರಿಗೆ ಬರಲಿದೆ ಟ್ರಂಪ್ ಘೋಷಿಸಿದ್ದಾರೆ.

ಟ್ರಂಪ್ ಆಡಳಿತ ಮಂಡಳಿ ಈ ದೇಶಗಳಿಗೆ ತೆರಿಗೆ ಪತ್ರವನ್ನು ಕಳುಹಿಸಿದೆ, ಆ ದೇಶಗಳ ಉತ್ಪನ್ನಗಳ ಮೇಲೆ ಸುಂಕ ವಿಧಿಸುವುದಾಗಿ ಹೇಳಿದೆ. ಲಾವೋಸ್‌ (ಶೇ.40), ಮ್ಯಾನ್ಮಾರ್‌ (ಶೇ.40), ಕಾಂಬೋಡಿಯಾ (ಶೇ.36), ಬಾಂಗ್ಲಾದೇಶ ( ಶೇ.35), ಸರ್ಬಿಯಾ (ಶೇ.35), ಇಂಡೋನೇಷ್ಯಾ (ಶೇ.32), ಬೊಸ್ನಿಯಾ ಮತ್ತು ಹರ್ಜೆಗೋವಿನಾ (ಶೇ.30), ಜಪಾನ್‌ (ಶೇ.25), ಕಝಕಿಸ್ತಾನ್‌ (ಶೇ.25), ಮಲೇಷ್ಯಾ (ಶೇ.25),ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ (ಶೇ.25) , ಥಾಯ್ಲೆಂಡ್‌ ಮತ್ತು ಟ್ಯುನೀಶಿಯಾ (ಶೇ.25) ದೇಶಗಳಿಗೆ ತೆರಿಗೆ ವಿಧಿಸಿ ಟ್ರಂಪ್ ಪತ್ರಕ್ಕೆ ಸಹಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!