ಭಾರತದ ಜೊತೆಗಿನ ಒಪ್ಪಂದ ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿರಲಿದೆ: ಕ್ರಿಸ್ಟೋಫರ್ ಲ್ಯಾಂಡೌ

Published : Mar 07, 2026, 08:23 AM IST
Trade Deal with India

ಸಾರಾಂಶ

ಭಾರತದೊಂದಿಗಿನ ವ್ಯಾಪಾರ ಒಪ್ಪಂದವು ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿರಲಿದೆ ಎಂದು ಅಮೆರಿಕದ ವಿದೇಶಾಂಗ ಉಪ ಸಚಿವ ಕ್ರಿಸ್ಟೋಫರ್ ಲ್ಯಾಂಡೌ ಸ್ಪಷ್ಟಪಡಿಸಿದ್ದಾರೆ. ಭಾರತವು ಚೀನಾದಂತೆ ತಮ್ಮ ಪ್ರತಿಸ್ಪರ್ಧಿಯಾಗಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ನವದೆಹಲಿ: ಅಮೆರಿಕದೊಂದಿಗಿನ ಭಾರತದ ವ್ಯಾಪಾರ ಒಪ್ಪಂದವು ಅಂತಿಮ ಹಂತಕ್ಕೆ ತಲುಪಿರುವ ಹೊತ್ತಿನಲ್ಲಿ, ‘ವ್ಯಾಪಾರಕ್ಕೆ ಸಂಬಂಧಿಸಿದಂತೆ 20 ವರ್ಷಗಳ ಹಿಂದೆ ಚೀನಾ ವಿಷಯದಲ್ಲಿ ಮಾಡಿದ ತಪ್ಪನ್ನು ನಾವೀಗ ಭಾರತದ ವಿಷಯದಲ್ಲಿ ಮಾಡುವುದಿಲ್ಲ’ ಎಂದು ಅಮೆರಿಕದ ವಿದೇಶಾಂಗ ಉಪ ಸಚಿವ ಕ್ರಿಸ್ಟೋಫರ್ ಲ್ಯಾಂಡೌ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ, ಭಾರತದ ಲಾಭಕ್ಕಿಂತ ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿಯೇ ಈ ಒಪ್ಪಂದ ಇರಲಿದೆ ಎಂದ ಸುಳಿವನ್ನವರು ನೀಡಿದ್ದಾರೆ.

ಭಾರತದ ವಿಷಯದಲ್ಲಿ ಹೀಗಾಗದು

ದೆಹಲಿಯಲ್ಲಿ ನಡೆಯುತ್ತಿರುವ ವಾರ್ಷಿಕ ಭೌಗೋಳಿಕ-ರಾಜಕೀಯ ಶೃಂಗಸಭೆಯಲ್ಲಿ ಮಾತನಾಡಿದ ಲ್ಯಾಂಡೌ, ‘20 ವರ್ಷಗಳ ಹಿಂದೆ ನಾವು ಚೀನಾಗೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಲು ಬಿಟ್ಟೆವು. ಪರಿಣಾಮ ಅವರ ಉತ್ಪನ್ನಗಳು ನಮ್ಮೊಂದಿಗೇ ಸ್ಪರ್ಧೆಗೆ ನಿಂತವು. ಭಾರತದ ವಿಷಯದಲ್ಲಿ ಹೀಗಾಗದು’ ಎಂದರು.

ತಪ್ಪುಗಳ್ಯಾವುವು?:

-1990ರಿಂದ ವೈರಿರಾಷ್ಟ್ರಗಳ ಮೇಲೆ ಅಮೆರಿಕ ಹೇರಿದ ಭಾರೀ ತೆರಿಗೆಯ ಪರಿಣಾಮ, ಸಂಪದ್ಭರಿತ ಮ್ಯಾನ್ಮಾರ್‌ ಮತ್ತು ಇರಾನ್‌, ಚೀನಾದತ್ತ ವಾಲಿದವು

-2000ರಲ್ಲಿ ಚೀನಾಗೆ ಅಮೆರಿಕ ಶಾಶ್ವತ ಸಾಮಾನ್ಯ ವ್ಯಾಪಾರ ಸಂಬಂಧದ ಸ್ಥಾನ ನೀಡಿದ ಪರಿಣಾಮ, ಅಮೆರಿಕದ ಮಾರುಕಟ್ಟೆ ಪ್ರವೇಶಿಸುವ ವಸ್ತುಗಳ ಮೇಲಿನ ತೆರಿಗೆ ತಗ್ಗಿತು. ಇದರಿಂದ ಚೀನಾದಲ್ಲಿ ಉತ್ಪಾದನಾ ಹೂಡಿಕೆ ಹೆಚ್ಚಿತು

-2001ರಲ್ಲಿ ವಿಶ್ವ ವ್ಯಾಪಾರ ಸಂಸ್ಥೆಗೆ(ಡಬ್ಲ್ಯುಟಿಒ) ಸೇರಲು ಚೀನಾಗೆ ಅಮೆರಿಕ ನೆರವು ನೀಡಿತ್ತು. ಈ ಕ್ರಮವು ಚೀನಾದ ಪಾಲಿಗೆ ವಿಶ್ವದ ಮಾರುಕಟ್ಟೆಯನ್ನು ತೆರೆದಿಟ್ಟು, ರಫ್ತು ಹೆಚ್ಚಳಕ್ಕೆ ಕಾರಣವಾಯಿತು

-ಈ ಎಲ್ಲಾ ಅನುಕೂಲಗಳಿಂದಾಗಿ ಅಮೆರಿಕದ ದೊಡ್ಡದೊಡ್ಡ ಕಂಪನಿಗಳು, ಉತ್ಪಾದನಾ ಸ್ನೇಹಿ ಚೈನಾಗೆ ವಲಸೆ ಹೋದವು. ಪರಿಣಾಮ ಚೀನಾ ಅತಿದೊಡ್ಡ ಉತ್ಪಾದಕನಾದರೆ, ಅದರ ಉತ್ಪನ್ನಗಳಿಗೆ ಅಮೆರಿಕ ಮಾರುಕಟ್ಟೆ ಆಗಬೇಕಾಯಿತು.

-ಬೌದ್ಧಿಕ ಆಸ್ತಿ ಕಳ್ಳತನ ಮತ್ತು ವಿದೇಶಿ ಸಂಸ್ಥೆಗಳಿಗೆ ಮಾರುಕಟ್ಟೆ ಪ್ರವೇಶಕ್ಕೆ ನಿರ್ಬಂಧ

ಇದನ್ನೂ ಓದಿ:  ಇರಾನ್‌ ಮೇಲೆ ಮತ್ತೊಂದು ಬೃಹತ್‌ ದಾಳಿಗೆ ಟ್ರಂಪ್ ಸಿದ್ಧತೆ? ಅಮೆರಿಕ ವಿರುದ್ಧ ದಾಳಿಗೆ ರಷ್ಯಾ ಗುಪ್ತಚರ ನೆರವು

ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಗ್ರೀನ್ ಸಿಗ್ನಲ್ ನೀಡಿದ ಅಮೆರಿಕ; 30 ದಿನ ಮಾತ್ರ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್‌ ಮೇಲೆ ಮತ್ತೊಂದು ಬೃಹತ್‌ ದಾಳಿಗೆ ಟ್ರಂಪ್ ಸಿದ್ಧತೆ? ಅಮೆರಿಕ ವಿರುದ್ಧ ದಾಳಿಗೆ ರಷ್ಯಾ ಗುಪ್ತಚರ ನೆರವು
Donald Trump: ಇರಾನ್ ಬೇಷರತ್ ಶರಣಾಗಬೇಕು, ಇಲ್ಲದಿದ್ದರೆ ಬೇರೆ ದಾರಿಯಿಲ್ಲ ಎಂದ ಟ್ರಂಪ್