ಅಂತರಿಕ್ಷ ಸಂಪತ್ತಿನ ರಕ್ಷಣೆಗೆ ಸ್ಟಾರ್‌ವಾರ್‌ ತಂತ್ರಜ್ಞಾನ!

By Suvarna News  |  First Published Feb 24, 2021, 12:48 PM IST

ಅಂತರಿಕ್ಷ ಸಂಪತ್ತಿನ ರಕ್ಷಣೆಗೆ ಸ್ಟಾರ್‌ವಾರ್‌ ತಂತ್ರಜ್ಞಾನ| ವಿಶ್ವದ ಕಂಪನಿಗಳಿಂದ ಸಲಹೆ ಆಹ್ವಾನಿಸಿದ ಡಿಎಸ್‌ಎ| ಚೀನಾಗೆ ಭಾರತದ ಉಪಗ್ರಹಗಳಿಗೆ ಬೆದರಿಕೆ ಹಿನ್ನೆಲೆ


ನವದೆಹಲಿ(ಫೆ.24): ನೆರೆಯ ಚೀನಾದಿಂದ ಭಾರತದ ಉಪಗ್ರಹಗಳಿಗೆ ಭೀತಿ ಇದೆ ಎಂಬ ಆತಂಕದ ನಡುವೆಯೇ, ಬಾಹ್ಯಾಕಾಶದಲ್ಲಿ ನಡೆಯಬಹುದಾದ ‘ಸ್ಟಾರ್‌ ವಾರ್‌’ಗೆ ಭಾರತ ಸಜ್ಜಾಗುತ್ತಿದೆ.

ಬಾಹ್ಯಾಕಾಶದ ನಮ್ಮ ಸಂಪತ್ತಿನ ರಕ್ಷಣೆಗೆಂದು 2019ರಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ‘ಅಂತರಿಕ್ಷ ರಕ್ಷಣಾ ಸಂಸ್ಥೆ’ (ಡಿಎಸ್‌ಎ) ಸ್ಥಾಪಿಸಿದೆ. ಇದರ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಡಿಎಸ್‌ಎ ಈಗ ವಿಶ್ವದ ವಿವಿಧ ಕಂಪನಿಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. ಬಾಹ್ಯಾಕಾಶ ಸಂಪತ್ತಿನ ರಕ್ಷಣೆಗೆ ಏನು ಕ್ರಮ ಕೈಗೊಳ್ಳಬಹುದು ಎಂಬ ಸಲಹೆಗಳನ್ನು ನೀಡುವಂತೆ ಅದು ಕಂಪನಿಗಳಿಗೆ ಕೋರಿದೆ. ‘ಜನವರಿಯಲ್ಲೇ ಪ್ರಸ್ತಾವನೆಗೆ ಕೋರಲಾಗಿದ್ದು, ಮಾಚ್‌ರ್‍ ಮೊದಲ ವಾರದೊಳಗೆ ಕಂಪನಿಗಳು ಇದಕ್ಕೆ ಉತ್ತರಿಸಬಹುದಾಗಿದೆ’ ಎಂದು ಮೂಲಗಳು ಹೇಳಿವೆ.

Latest Videos

undefined

2019ರಲ್ಲಿ ಭಾರತ ಆ್ಯಂಟಿ ಸ್ಯಾಟಲೈಟ್‌ ಟೆಕ್ನಾಲಜಿ ತಂತ್ರಜ್ಞಾನವನ್ನು ಭಾರತ ಅನಾವರಣಗೊಳಿಸಿತ್ತು. ಈ ತಂತ್ರಜ್ಞಾನದ ಮೂಲಕ ಕೆಳಕಕ್ಷೆಯಲ್ಲಿದ್ದ ವಸ್ತುವೊಂದನ್ನು ಹೊಡೆದುರುಳಿಸುವ ತಂತ್ರಜ್ಞಾನವನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿತ್ತು.

ಅಮೆರಿಕ ಸಂಸತ್ತು ಈ ಹಿಂದೆ ಸಿದ್ಧಪಡಿಸಿದ್ದ 200 ಪುಟಗಳ ವರದಿಯಲ್ಲಿ, ಬಾಹ್ಯಾಕಾಶದಲ್ಲಿ ಚೀನಾದಿಂದ ಬೆದರಿಕೆ ಇದೆ ಎಂದು ಎಚ್ಚರಿಸಿತ್ತು. ‘ಉಪಗ್ರಹ ಜಾಮರ್‌ಗಳು, ವೈರಿ ದೇಶಕ್ಕೆ ಮಾರಕವಾಗಬಲ್ಲ ಸೈಬರ್‌ ಘಟಕಗಳು, ನಿರ್ದೇಶಿತ ಶಸ್ತ್ರಗಳು ಇತ್ಯಾದಿಗಳನ್ನು ತಯಾರಿಸುತ್ತಿದೆ’ ಎಂದು ವರದಿಯಲ್ಲಿ ಅದು ಹೇಳಿತ್ತು.

click me!