ಇಮ್ರಾನ್‌ ಖಾನ್‌ ಭಾಷ​ಣಕ್ಕೆಲಂಕಾ ಕೊಕ್!

Published : Feb 23, 2021, 01:58 PM ISTUpdated : Feb 23, 2021, 02:59 PM IST
ಇಮ್ರಾನ್‌ ಖಾನ್‌ ಭಾಷ​ಣಕ್ಕೆಲಂಕಾ ಕೊಕ್!

ಸಾರಾಂಶ

ಮಂಗಳವಾರ ಶ್ರೀಲಂಕಾ ಪ್ರವಾ​ಸ​ ಕೈಗೊಳ್ಳಲಿ​ರುವ ಪಾಕಿ​ಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌| ಇಮ್ರಾನ್‌ ಖಾನ್‌ ಭಾಷ​ಣಕ್ಕೆಲಂಕಾ ಕೊಕ್!

ಕೊಲಂಬೋ(ಫೆ.23): ಮಂಗಳವಾರ ಶ್ರೀಲಂಕಾ ಪ್ರವಾ​ಸ​ ಕೈಗೊಳ್ಳಲಿ​ರುವ ಪಾಕಿ​ಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು, ಲಂಕಾ ಸಂಸ​ತ್ತನ್ನು ಉದ್ದೇ​ಶಿಸಿ ಮಾಡ​ಬೇ​ಕಿದ್ದ ಭಾಷ​ಣ​ವನ್ನು ಇಲ್ಲಿನ ಸರ್ಕಾರ ರದ್ದು​ಗೊ​ಳಿ​ಸಿದೆ. ಇಮ್ರಾನ್‌ ಭಾಷ​ಣಕ್ಕೆ ಲಂಕಾ ತಡೆ ಹೇರಿದ ಹಿಂದಿನ ಅಸಲಿ ಕಾರಣ ಇದೀಗ ಬೆಳ​ಕಿಗೆ ಬಂದಿದೆ.

ಕೊರೋನಾ ವೈರ​ಸ್‌​ನಿಂದ ನರ​ಳು​ತ್ತಿ​ರುವ ಶ್ರೀಲಂಕಾಗೆ 5 ಲಕ್ಷ ಡೋಸ್‌ ಕೋವಿ​ಶೀಲ್ಡ್‌ ಲಸಿ​ಕೆ​ಯನ್ನು ಶ್ರೀಲಂಕಾಗೆ ಭಾರತ ನೀಡಿದೆ. ಜೊತೆಗೆ ಚೀನಾದ ಸಾಲದ ಸುಳಿ​ಯಲ್ಲಿ ಸಿಲು​ಕುವ ಬದ​ಲಿಗೆ ಭಾರ​ತದ ಜೊತೆ​ಗಿ​ರು​ವುದೇ ಉತ್ತಮ ಎಂಬುದು ಲಂಕಾಕ್ಕೂ ಗೊತ್ತಾ​ಗಿದೆ. ಇದೇ ಕಾರ​ಣಕ್ಕೆ ಇಮ್ರಾನ್‌ ಖಾನ್‌ ಅವರ ಸಂಸತ್ತು ಭಾಷ​ಣ​ವನ್ನು ರದ್ದು​ಗೊ​ಳಿ​ಸಿದೆ ಎಂದು ಕೊಲಂಬೋ ಗೆಜೆಟ್‌ ಎಂಬ ಪತ್ರಿಕೆ ಉಲ್ಲೇಖಿ​ಸಿದೆ.

ಅಲ್ಲದೆ ಒಂದು ವೇಳೆ ಶ್ರೀಲಂಕಾ ಸಂಸ​ತ್ತಿ​ನಲ್ಲಿ ಪಾಕಿ​ಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವ​ರಿಗೆ ಭಾಷಣ ಮಾಡಲು ಅವ​ಕಾಶ ಕೊಟ್ಟರೆ, ಅವ​ರು ಮುಸ್ಲಿ​ಮರ ಪರ​ವಾಗಿ ಮಾತ​ನಾ​ಡು​ತ್ತಾರೆ. ಇದ​ರಿಂದ ಲಂಕಾದ ಬಹು​ಸಂಖ್ಯಾ​ತ​ರಾದ ಬೌದ್ಧ ಧರ್ಮೀ​ಯರ ಭಾವ​ನೆ​ಗ​ಳಿಗೆ ಧಕ್ಕೆ​ಯಾ​ಗು​ತ್ತದೆ ಎಂಬುದು ಲಂಕಾ ಸರ್ಕಾರ ಗೊತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರಂಪ್‌ಗೆ ಭಾರೀ ಮುಖಭಂಗ ಬೆನ್ನಲ್ಲೇ ಇರಾನ್‌ನಿಂದ ಟ್ರೋಲ್‌, ಅಧಿಕೃತವಾಗಿಯೇ ಏನೆಲ್ಲಾ ಹಾಕ್ತಿದೆ ನೋಡಿ
ಶೆಹಬಾಜ್ ಷರೀಫ್ 'ಕಾಪಿ-ಪೇಸ್ಟ್' ಎಡವಟ್ಟು: ಇರಾನ್ ಬಿಕ್ಕಟ್ಟಿನ ನಡುವೆ ಪಾಕ್ ಪ್ರಧಾನಿ ಪೋಸ್ಟ್ ನೋಡಿ ನಕ್ಕ ನೆಟ್ಟಿಗರು!