ಆ್ಯಪಲ್ ಸಿಇಒ ಹುದ್ದೆಯಿಂದ ಕೆಳಗಿಳಿದ ಟಿಮ್ ಕುಕ್, 381 ಲಕ್ಷ ಕೋಟಿ ಕಂಪನಿಯಾಗಿಸಿದ ಸಾಧಕನ ನಿರ್ಗಮನ

Published : Aug 30, 2026, 09:44 PM IST
Tim Cook

ಸಾರಾಂಶ

ಆ್ಯಪಲ್ ಕಂಪನಿ ಸಿಇಒ ಹುದ್ದೆಯಿಂದ ಟಿಮ್ ಕುಕ್ ಕೆಳಗಿಳಿದಿದ್ದಾರೆ. 33 ಲಕ್ಷ ಕೋಟಿಯಿಂದ 381 ಲಕ್ಷ ಕೋಟಿ ಕಂಪನಿಯನ್ನಾಗಿ ಮಾಡಿದ ಟಿಮ್ ಕುಕ್ ನಿರ್ಗಮಿಸಿದ್ದಾರೆ. 15 ವರ್ಷ ಆ್ಯಪಲ್ ನಡೆಸಿದ ಕುಕ್ ಇದೀಗ ರಾಜೀನಾಮೆ ನೀಡಿದ್ದಾರೆ.

ನ್ಯೂಯಾರ್ಕ್ (ಆ.30) ಐಫೋನ್, ಮ್ಯಾಕ್ ಸೇರಿದಂತೆ ಆ್ಯಪಲ್ ಉತ್ಪನ್ನಗಳಿಗೆ ಭಾರತ ಸೇರಿದಂತೆ ವಿಶ್ವೆದೆಲ್ಲೆಡೆ ಇದೆ. ಆ್ಯಪಲ್ ವಿಶ್ವದಲ್ಲೇ ಪ್ರತಿಷ್ಠಿತ ಹಾಗೂ ಅತೀ ದೊಡ್ಡ ಎಲೆಕ್ಟ್ರಾನಿಕ್ ಪ್ರಾಡಕ್ಟ್ ಕಂಪನಿಯಾಗಿ ಬೆಳೆದು ನಿಂತಿದೆ. ಕಳೆದ 15 ವರ್ಷ ಆ್ಯಪಲ್ ಕಂಪನಿಯನ್ನು ವಿಶ್ವದಲ್ಲೇ ಅತೀ ದೊಡ್ಡ ಉದ್ಯಮವಾಗಿ ಬೆಳೆಸಿದ ಕಂಪನಿ ಸಿಇಒ ಟಿಮ್ ಕುಕ್ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಸೆಪ್ಟೆಂಬರ್ 9 ರಂದು ಐಫೋನ್ 18 ಪ್ರೋ ಸೀರಿಸ್ ಬಿಡುಗಡೆಗೂ ಮೊದಲೇ ಟಿಮ್ ಕುಕ್ ಹುದ್ದೆಯಿಂದ ನಿರ್ಗಮಿಸಿದ್ದಾರೆ.

ಟಿಮ್ ಕುಕ್ ರಾಜೀನಾಮೆ ನೀಡಿದ್ದೇಕೆ?

ಕಳೆದ 15 ವರ್ಷಗಳಿಂದ ಆ್ಯಪಲ್ ಕಂಪನಿಯನ್ನು ಸಮರ್ಥವಾಗಿ ಮುನ್ನಡೆಸಿ ಬರೋಬ್ಬರಿ 4 ಟ್ರಿಲಿಯನ್ ಡಾಲರ್ ಕಂಪನಿಯನ್ನಾಗಿ ಮಾಡಿದ ಟಿಮ್ ಕುಕ್ ರಾಜೀನಾಮೆ ದಿಢೀರ್ ನಿರ್ಧಾರವಲ್ಲ. ಇದು ಪೂರ್ವನಿಯೋಜಿತ ನಾಯಕತ್ವ ವರ್ಗಾವಣೆಯಾಗಿದೆ. ಟಿಮ್ ಕುಕ್ ಆ್ಯಪಲ್ ಸಿಇಒ ಸ್ಥಾನವನ್ನು ಸೆಪ್ಟೆಂಬರ್ 1ರಿಂದ ಜಾನ್ ಟರ್ನಸ್‌ಗೆ ಹಸ್ತಾಂತರಿಸುತ್ತಿದ್ದಾರೆ. ಇತ್ತ ಸಿಇಒ ಹುದ್ದೆಯಿಂದ ಕೆಳಗಿಳಿದ ಟಿಮ್ ಕುಕ್ ಆ್ಯಪಲ್ ಕಾರ್ಯನಿರ್ವಾಹ ಮುಖ್ಯಸ್ಥರಾಗಿ (Executive Chairman) ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಸ್ಟೀವ್ ಜಾಬ್ಸ್ ಆರೋಗ್ಯದಿಂದ 2011ರಲ್ಲಿ ಸಿಇಒ ಆದ ಕುಕ್

ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಕಂಪನಿ ಸಿಇಒ ಆಗಿ ಭರ್ಜರಿ ಯಶಸ್ಸು ಸಾಧಿಸಿದ್ದರು. ಆದರೆ ಸ್ಟೀವ್ ಜಾಬ್ಸ್ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಸ್ಟೀವ್ ಜಾಬ್ಸ್ ಜವಾಬ್ದಾರಿಗಳಿಂದ ಮುಕ್ತರಾಗಿ ಚಿಕಿತ್ಸೆ ಹಾಗೂ ವಿಶ್ರಾಂತಿಗೆ ಜಾರಬೇಕಾಯಿತು. 2011ರಲ್ಲಿ ಸ್ಟೀವ್ ಜಾಬ್ಸ್ ಉತ್ತರಾಧಿಕಾರಿಯಾಗಿ ಟಿಮ್ ಕುಕ್ ಸಿಇಒ ಹುದ್ದೆ ಅಲಂಕರಿಸಿದ್ದರು. ಕುಕ್ ಮುಂದೆ ಹಲವು ಸವಾಲುಗಳು ಎದುರಾಗಿತ್ತು. ಸ್ಟೀವ್ ಜಾಬ್ಸ್ ರೀತಿ ಕುಕ್ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರಾ ಅನ್ನೋ ಪ್ರಶ್ನೆ ಹಲವು ಬಾರಿ ಎದುರಾಗಿತ್ತು.

2011ರಲ್ಲಿ 350 ಬಿಲಿಯನ್ ಡಾಲರ್ ಕಂಪನಿಯಾಗಿದ್ದ ಆ್ಯಪಲ್ ಟಿಮ್ ಕುಕ್ ನಾಯಕತ್ವದಲ್ಲಿ 4 ಟ್ರಿಲಿಯನ್ ಡಾಲರ್ ಕಂಪನಿಯಾಗಿ ಬೆಳೆದು ನಿಂತಿದೆ. ಐಫೋನ್ ಬೇಡಿಕೆ ಬಾರಿ ಹೆಚ್ಚಾಗಿದೆ. ಜಾಗತಿಕ ಮಾರುಕಟ್ಟೆ ವಿಸ್ತರಣೆಯಾಗಿದೆ. ಇದೀಗ ಆ್ಯಪಲ್ ಅತ್ಯಾಧುನಿಕ ತಂತ್ರಜ್ಞಾನದ ಕಂಪನಿಯಾಗಿ ವಿಸ್ತರಣೆಗೊಂಡಿದೆ. ಆ್ಯಪ್ ಸ್ಟೋರ್, ಆ್ಯಪಲ್ ಮ್ಯೂಸಿಕ್ ಮತ್ತು ಆ್ಯಪಲ್ ಪೇ ಸೇರಿದಂತೆ ಹಲವು ವಿಸ್ತರಣೆ ಪಡೆದುಕೊಂಡಿದೆ. ಚಿಪ್ ಪ್ರೊಸೆಸರ್, ಮ್ಯಾಕ್ ಕಂಪ್ಯೂಟರ್‌ಗೆ ಇಂಟೆಲ್ ಪ್ರೊಸೆಸರ್, ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್ ಅಭಿವೃದ್ಧಿಯಿಂದ ಸ್ವಾಲಂಬನೆ ಪಡೆದುಕೊಂಡಿತು. ಆ್ಯಪಲ್ ವಾಚ್ ಮತ್ತು ಏರ್‌ಪಾಡ್ಸ್‌ನಂತಹ ಹೊಸ ಉತ್ಪನ್ನಗಳು ಮಾರುಕಟ್ಟೆ ಪ್ರವೇಶ ಪಡೆಯಿತು. ಸೆಪ್ಟೆಂಬರ್ 1 ರಿಂದ ಜಾನ್ ಟರ್ನಸ್ ಆ್ಯಪಲ್ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಬ್ದಕ್ಕಿಂತ 8 ಪಟ್ಟು ಹೆಚ್ಚು ವೇಗ: ಮೈಕ್ರೋಸೆಕೆಂಡ್‌ಗಳಲ್ಲಿ ಗ್ರ್ಯಾಫೈಟ್ ಆಗಿ ಬದಲಾಗುವ ವಜ್ರ!
ಮದ್ವೆಗೆ ಒಪ್ಪದ GEN Z! ನೈಟ್​ಕ್ಲಬ್​ನಲ್ಲೂ ನೋಂದಣಿ ಕೇಂದ್ರ- ಮೆಟ್ರೋನಲ್ಲೂ ಮದ್ವೆಗೆ ಅವಕಾಶ; ಎಲ್ಲಿದು