ಶಿಕ್ಷಕನ ತಕ್ಷಣದ ನಿರ್ಧಾರದಿಂದ ಬದುಕುಳಿದ 1643 ವಿದ್ಯಾರ್ಥಿಗಳು, ಸೆಕೆಂಡ್ ಅಂತರದಲ್ಲಿ ಮಾಡಿದ್ದೇನು?

Published : Aug 30, 2026, 04:53 PM IST
Nepal Teacher Quick Thinking Saves students

ಸಾರಾಂಶ

ನೇಪಾಳ ಪ್ರವಾಹ ನೀರು ಎಲ್ಲವನ್ನು ಕೊಚ್ಚಿಕೊಂಡು ಹೋಗಿತ್ತು. ಆದರೆ ಶಿಕ್ಷಕ ತೆಗೆದುಕೊಂಡು ನಿರ್ಧಾರದಿಂದ ಶಾಲೆಯಲ್ಲಿದ್ದ 1643 ವಿದ್ಯಾರ್ಥಿಗಳು ಬದುಕುಳಿದಿದ್ದಾರೆ. ಇದೀಗ ಶಾಲೆ ಎಲ್ಲಿತ್ತು ಅನ್ನೋ ಕುರುಹೂ ಕೂಡ ಇಲ್ಲ

ಕಾಠ್ಮಂಡು (ಆ.30) ನೇಪಾಳ ಪ್ರವಾಹದ ದುರಂತ ಕತೆಗಳು ಒಂದೊಂದಾಗಿ ಹೊರಬರುತ್ತಿದೆ. ಇದೇ ವೇಳೆ ಹಲವರು ಪ್ರಾಣ ಉಳಿಸಿದ ಹಿರೋಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗೆ ನೇಪಾಳ ಮಹಾ ಪ್ರವಾಹದಲ್ಲಿ ಮೂರು ಅಂತಸ್ತಿನ ದೊಡ್ಡ ಶಾಲೆಯೊಂದು ಕೊಚ್ಚಿ ಹೋಗಿದೆ. ಆದರೆ ಈ ಶಾಲೆಯಲ್ಲಿದ್ದ 1643 ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ. ಇದಕ್ಕೆ ಕಾರಣ ಇಂಗ್ಲೀಷ್ ಶಿಕ್ಷಕ. ಸೆಕೆಂಡ್‌ಗಳ ಅಂತರದಲ್ಲಿ ತೆಗೆದುಕೊಂಡು ನಿರ್ಧಾರ ವಿದ್ಯಾರ್ಥಿಗಳ ಜೀವ ಉಳಿಸಿದೆ.

47 ವರ್ಷದ ಶಿಕ್ಷಕ ರಾಜೇಂದ್ರ ದವಾಡಿ ರಿಯಲ್ ಹೀರೋ

ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ಕಣವೆಯಲ್ಲಿನ ಮೂರು ಅಂತಸ್ತಿನ ದೊಡ್ಡ ಶಾಲೆ. ಪ್ರವಾಹದ ಸಂದರ್ಭದಲ್ಲಿ ಈ ಶಾಲೆಯಲ್ಲಿ 1643 ವಿದ್ಯಾರ್ಥಿಗಳಿದ್ದರು. 9.20ಕ್ಕೆ ದವಾಡಿ ಸ್ನೇಹಿತ ಕರೆ ಮಾಡಿದ್ದ. ಆತಂಕದಲ್ಲೇ ನಮ್ಮ ಗ್ರಾಮ ಕೊಚ್ಚಿ ಹೋಗಿದೆ. ಕಂಡು ಕೇಳರಿಯದ ಪ್ರವಾಹ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾಗಲು ದಾವಾಡಿಗೆ ಹೇಳಿದ್ದ. ನದಿಯಿಂದ ಕೆಲ ದೂರಗಳಲ್ಲಿ ಶಾಲೆ ಇತ್ತು. ಇಷ್ಟೇ ಅಲ್ಲ ನದಿಯಿಂದ 60 ಮೀಟರ್ ಎತ್ತರದಲ್ಲಿ ಶಾಲೆ ಇದೆ. ಇನ್ನು ಕಾಂಕ್ರೀಟ್‌ನಿಂದ ಕಟ್ಟಿದ ಗಟ್ಟಿಮುಟ್ಟಾದ ಶಾಲೆ ಇದು. ಹೀಗಾಗಿ ಅಪಾಯ ಬರದು ಎಂದು ರಾಜೇಂದ್ರ ಭಾವಿಸಿದ್ದರು. ಕರೆ ಕಟ್ ಮಾಡಿ ಕೆಲ ನಿಮಿಷಗಳಲ್ಲೇ ಪೋಷಕರೊಬ್ಬರು ಶಾಲೆಗೆ ಓಡೋಡಿ ಬಂದಿದ್ದರು. ಪ್ರವಾಹ ತೀವ್ರವಾಗಿದೆ ಎಂದು ಸಂಬಂಧಿಕರು ಹೇಳಿದ್ದಾರೆ. ಹಲವರು ಕೊಚ್ಚಿ ಹೋಗಿದ್ದಾರೆ ಎಂದಿದ್ದಾರೆ. ಅಷ್ಟರಲ್ಲೇ ರಾಜೇಂದ್ರ ಅವರಿಗೆ ಪರಿಸ್ಥಿತಿ ಅರಿವಾಗಿದೆ. ಸಮಯವೂ ಮೀರಿದೆ.

ಶಾಲೆಯ ಬೆಲ್ ಹೊಡೆಯಲು ಸೂಚಿಸಿದ ಶಿಕ್ಷಕ

ಪರಿಸ್ಥಿತಿ ಅರಿವಾಗುತ್ತಿದ್ದಂತೆ ಸಮಯವೂ ಮಿಂಚಿತ್ತು. ಪ್ರವಾಹದ ನೀರು 75 ಕಿಲೋಮೀಟರ್ ವೇಗದಲ್ಲಿ ಬರುತ್ತಿತ್ತು. ಶಾಲೆಯ ಬೆಲ್ ಬಾರಿಸಲು ಸೂಚಿಸಿದ್ದು ಮಾತ್ರವಲ್ಲ, ಶಿಕ್ಷಕರಿಗೆ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ. ಎಲ್ಲಾ ಕೊಠಡಿಗಳಿಂದ ಮಕ್ಕಳನ್ನು ಶಾಲೆಯಿಂದ ಹೊರಕಳುಹಿಸಲು ಸೂಚಿಸಿದ್ದಾರೆ. ಪ್ರವಾಹ ಬರುತ್ತಿದೆ. ಹೀಗಾಗಿ ರಾಜೇಂದ್ರ ಸರ್ ದ್ವಾರದ ಬಳಿ ನಿಂತಿದ್ದಾರೆ. ನೂಗು ನುಗ್ಗಲು ಮಾಡದೇ ಸೂಚನೆ ಪಾಲಿಸಿ ಎಂದು ಶಾಲಾ ಕೊಠಡಿಗಳಲ್ಲಿ ಶಿಕ್ಷಕರು ಸೂಚಿಸಿದ್ದಾರೆ. ಇತ್ತ ಮಕ್ಕಳು ಬರುತ್ತಿದ್ದಂತೆ ಕಾಲ್ನಡಿಗೆಯಲ್ಲಿ ಶಾಲೆಯಿಂದ ಕೆಲ ದೂರ ಓಡಲು ಆರಂಭಿಸಿದ್ದಾರೆ. ಶಿಕ್ಷಕ ರಾಜೇಂದ್ರ, ವಿದ್ಯಾರ್ಥಿಗಳು ಹಾಗೂ ಇತರ ಸಿಬ್ಬಂದಿಗಳು ಹಿಂಬಾಲಿಸಿದ್ದಾರೆ. ಇದರ ನಡುವೆ ಆಘಾತ ಮಾಹಿತಿ ಕೇಳಿ ವಿದ್ಯಾರ್ಥಿಯೊಬ್ಬಳು ಅಸ್ವಸ್ಥಳಾಗಿದ್ದಾಳೆ. ಈಕೆಯನ್ನು ಬೈಕ್‌ನಲ್ಲಿ ಎತ್ತರ ಪ್ರದೇಶಕ್ಕೆ ಕರೆಯದೊಯ್ಯಲಾಯಿತು.

ಇತ್ತ ವಿದ್ಯಾರ್ಥಿಗಳು ಸೇರಿದಂತೆ ಇಡೀ ಶಾಲೆಯ ಸಿಬ್ಬಂದಿಗಳು ನದಿ ಎಷ್ಟೇ ತುಂಬಿ ಹರಿದರೂ ಯಾವುದೇ ಸಮಸ್ಯೆಯಾಗದಂತೆ ಪಕ್ಕದ ಎತ್ತರದ ಪ್ರದೇಶ ಹತ್ತಿದ್ದಾರೆ. ಅಷ್ಟರಲ್ಲೇ ಪ್ರವಾಹದಿಂದ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಕೆಲವೇ ಕ್ಷಣದಲ್ಲಿ ಶಾಲೆ ಮೇಲಿನಿಂದ ನೀರು ಹರಿದಿದೆ. ಶಾಲೆ ಕಟ್ಟಡ ಕೊಚ್ಚಿ ಹೋಗಿದೆ. ಶಿಕ್ಷನ ತಕ್ಷಣದ ನಿರ್ಧಾರದಿಂದ 1643 ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಾವು ಗೆದ್ದು ಬಂದ ಕಂದಮ್ಮ: ಪ್ರವಾಹದ ಅವಶೇಷಗಳಡಿ 3 ದಿನಗಳ ಬಳಿಕ 6 ವರ್ಷದ ಬಾಲಕಿ ಜೀವಂತ ಪತ್ತೆ
ಯುಕೆ ಪ್ರವಾಸದಲ್ಲಿ ಭಾರತೀಯ ಮಹಿಳೆಗೆ ಹದಿಹರೆಯದ ಮಕ್ಕಳಿಂದ ಜನಾಂಗೀಯ ನಿಂದನೆ, ಕಹಿ ಅನುಭವ ಹಂಚಿಕೊಂಡ ಯೂಟ್ಯೂಬರ್!