ಚೀನಾಗೆ ಭಾರತದ ಡಿಜಿಟಲ್ ಏಟು| ಟಿಕ್‌ಟಾಕ್ ಸೇರಿ 59 App ಬ್ಯಾನ್| ಟಿಕ್‌ಟಾಕ್ ಬ್ಯಾನನ್ ಮಾಡಿರುವುದರಿಂದ ಚೀನಾಗಾಗುವ ನಷ್ಟವೆಷ್ಟು?
ಬೀಜಿಂಗ್(ಜೂ.30): ಗಡಿಯಲ್ಲಿ ಚೀನಾ ಹಾಗೂ ಭಾರತ ನಡುವಿನ ಸಂಗರ್ಷದ ಬೆನ್ನಲ್ಲೇ ದೇಶದಲ್ಲಿ ಚೀನಾ ನಿರ್ಮಿತ ವಸ್ತುಗಳಿಗೆ ಬಹಿಷ್ಕಾರ ಹೇರುವ ಕೂಗು ಎದ್ದಿತ್ತು. ಈಗಿರುವಾಗಲೇ ಕೇಂದ್ರ ಸರ್ಕಾರ ಚೀನಾದ 59 ಆ್ಯಪ್ ಬ್ಯಾನ್ ಮಾಡುವ ನಿರ್ಧಾರ ತೆಗೆದುಕೊಮಡಿದೆ. ಇದರಲ್ಲಿ ಟಿಕ್‌ಟಾಕ್, ಶೇರ್ ಇಟ್, ಹೆಲೋ ಸೇರಿ ಅನೇಕ ಜನಪ್ರಿಯ ಆ್ಯಪ್‌ಗಳಿವೆ. ಹಾಗಾದ್ರೆ ಈ ಟಿಕ್‌ಟಾಕ್ ಭಾರತದಲ್ಲೆಷ್ಟು ಫೇಮಸ್ ಆಗಿದೆ? ಬಳಕೆದಾರರೆಷ್ಟು? ಈ ಆ್ಯಪ್ ಮೂಲಕ ಚೀನಾಗೆ ಎಷ್ಟು ಲಾಭವಾಗುತ್ತಿತ್ತು? ಇಲ್ಲಿದೆ ಸಂಪೂರ್ಣ ವಿವರ.
ಭಾರತದಲ್ಲಿ ಟಿಕ್‌ಟಾಕ್ ಬಳಕೆದಾರರೆಷ್ಟು?
ಇಂದು ಟಿಕ್ ಟಾಕ್ ಬಗ್ಗೆ ಯಾರಿಗೆ ತಿಳಿದಿಲ್ಲ? ಪ್ರತಿಯೊಬ್ಬ ಯುವಜನತತೆಯನ್ನು ಈ ಆ್ಯಪ್ ತನ್ನ ತೆಕ್ಕೆಗೆ ಸೆಳೆಯುತ್ತಿದೆ. ಅನೆಕ ಮಂದಿ ಈ ಟಿಕ್‌ಟಾಕ್ ಆ್ಯಪ್‌ನಿಂದಲೇ ಸ್ಆರ್ ಕೂಡಾ ಆಗಿದ್ದಾರೆ. ಚೀನಾದ ಬೈಟ್ ಡಾನ್ಸ್(Bytedance) ಕಂಪನಿಯ ಈ ಉತ್ಪನ್ನವನ್ನು ಭಾರತದಲ್ಲಿ ಸುಮಾರು 11.9 ಕೋಟಿ ಮಂದಿ ಬಳಸುತ್ತಿದ್ದಾರೆ. ಇದೇ ಕಂಪನಿ ಭಾರತದಲ್ಲಿ ಹೆಲೋ(Helo) ಆ್ಯಪ್ ಕೂಡಾ ಲಾಂಚ್ ಮಾಡಿತ್ತು. ಇದನ್ನು ತಿಂಗಳಿಗೆ ಸುಮಾರು ಐದು ಕೋಟಿ ಮಂದಿ ಬಳಸುತ್ತಾರೆ. ಚಿನಾದ ಈ ಆ್ಯಪ್ ಭಾರತದ ಶೇರ್ ಚಾಟ್‌ಗೆ ಭಾರೀ ಟಕ್ಕರ್ ನೀಡುತ್ತದೆ.
ಟಿಕ್‌ಟಾಕ್‌ನಿಂದ ಚೀನಾ ಸಂಪಾದನೆ ಎಷ್ಟು?
ವರದಿಯೊಂದರ ಅನ್ವಯ ಟಿಕ್‌ಟಾಕ್ ಮಾಲಿಕ್ವ ಹೊಂದಿರುವ ಕಂಪನಿ ಬೈಟ್‌ಡಾನ್ಸ್ ಕಳೆದ ವರ್ಷ ಮೂರು ಬಿಲಿಯನ್ ಡಾಲರ್ ಅಂದರೆ 22,500 ಕೋಟಿ ರೂಪಾಯಿ ಲಾಭ ಗಳಿಸಿದೆ. ಇನ್ನು 2018ರಲ್ಲಿ ಇದು 7.8 ಬಿಲಿಯನ್ ಡಾಲರ್ ಆದಾಯ ಗಳಿಸಿತ್ತು. ಇದು 2019ರಲ್ಲಿ ಏರಿಕೆಯಾಗಿ 17 ಬಿಲಿಯನ್ ಡಾಲರ್‌ಗೇರಿತ್ತು. ಇದು ಕೇವಲ ಟಿಕ್‌ಟಾಕ್ ಮಾತ್ರವಲ್ಲ, ಹೆಲೋ ಸೇರಿ ಇತರ ಪ್ರಾಡಕ್ಟ್‌ಗಳದ್ದೂ ಆಗಿದೆ. ಕೇವಲ ಟಿಕ್ ಟಾಕ್ ಬಂದ್ ಆಗುವುದರಿಂದ ಚೀನಾಗೆ 720 ಕೋಟಿ ನಷ್ಟವಾಗಲಿದೆ.