
ಬೀಜಿಂಗ್(ಜೂ.30): ಕೊರೋನಾ ವೈರಸ್ ಮಹಾಮಾರಿ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಅಪಾರ ಸಾವು ನೋವು ಉಂಟು ಮಾಡಿರುಉವ ಈ ವೈರಸ್‌ನಿಂದ ಜಗತ್ತು ಇನ್ನೂ ಸುಧಾರಿಸಿಕೊಂಡಿಲ್ಲ, ಅಷ್ಟರಲ್ಲೇ ಮತ್ತೊಂದು ಡೆಡ್ಲಿ ವೈರಸ್ ಜನರನ್ನು ಕಂಗಾಲುಗೊಳಿಸಿದೆ. ಈ ಹೊಸ ವೈರಸ್‌ನಿಂದ ಮಹಾಮಾರಿ ಮತ್ತಷ್ಟು ಹಬ್ಬಿಕೊಳ್ಳುವ ಸಾದ್ಯತೆ ಹೆಚ್ಚು ಇದೆ ಎಂಬುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಸದ್ಯ ಫ್ಲೂಗಿರುವ ಲಸಿಕೆ ಈ ವೈರಸ್ ವಿರುದ್ಧ ಹೋರಾಡುವಷ್ಟು ಕ್ಷಮತೆ ಹೊಂದಿಲ್ಲ. ಹಂದಿಗಳಲ್ಲಿ ಸಿಕ್ಕ ಈ ವೈರಸ್ ಮನುಷ್ಯರನ್ನು ಬಾಧಿಸುವ ಕ್ಷಮತೆ ಹೊಂದಿದೆ. ಹಾಗಾದ್ರೆ ಈ ವೈರಸ್ ಎಷ್ಟು ಅಪಾಯಕಾರಿ? ಇಲ್ಲಿದೆ ವಿವರ
ಚೀನಾದ ಲ್ಯಾಬ್‌ನಿಂದ ಕೊರೋನಾ ಪರಾರಿ ಬಗ್ಗೆ ತನಿಖೆ ಆರಂಭ!
ವೈರಸ್ ಹೆಸರೇನು?
ಈ ವೈರಸ್‌ಗೆ G4 EA H1N1 ಎಂದು ಹೆಸರಿಡಲಾಗಿದೆ. ಈ ವೈರಸ್ ಸುಲಭವಾಗಿ ಮಾನವರಿಂದ ಮಾತನವರಿಗೆ ಹಬ್ಬಬಹುದೆಂಭ ಭಯ ಸಂಶೋಧಕರಲಲ್ಲಿ ಮನೆ ಮಾಡಿದೆ. ಚಿಂತೆಗಡು ಮಾಡುವ ವಿಚಾರವೆಂದರೆ ಇದು ಸಾಂಕ್ರಾಮಿಕವಾಗಿ ಹಬ್ಬುವ ವೈರಸ್ ಆಗಿದ್ದು, ಕೊರೋನಾ ಮಹಾಮಾರಿ ಆತಂಕ ಸೃಷ್ಟಿಸಿರುವ ಸಮಯದಲ್ಲೇ ಇದು ಹುಟ್ಟಿಕೊಂಡಿದೆ.
ಎಷ್ಟು ಅಪಾಯಕಾರಿ?
G4 EA H1N1 ವೈರಸ್ ಇಡೀ ವಿಶ್ವಕ್ಕೆ ಹಬ್ಬುವಷ್ಟು ಸಾಮರ್ಥ್ಯ ಹೊಂದಿದ್ದು, ಅಪಾಯಕ್ಕೀಡು ಮಾಡಬಹುದು. ಅಲ್ಲದೇ ಈ ವೈರಸ್‌ನಲ್ಲಿ ಮನುಷ್ಯರನ್ನು ಬಾಧಿಸಬ್ಲ ಎಲ್ಲಾ ಲಕ್ಷಣಗಳು ಇವೆ ಎಂಬುವುದು ಚಿನಾ ವಿಜ್ಞಾನಿಗಳ ಮಾತಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ ಎಂದಿದ್ದಾರೆ.
ವಿಶ್ವದಲ್ಲಿ ಮತ್ತೊಂದು ಮಹಾಮಾರಿ ಹಬ್ಬುವ ಆತಂಕವಿದೆಯಾ?
ಕೊರೋನಾ ವೈರಸ್‌ಗೂ ಮುನ್ನ ವಿಶ್ವಾದ್ಯಂತ ಕೊನೆಯ ಬಾರಿ 2009ರಲ್ಲಿ ಫ್ಲೂ ಕಾಣಿಸಿಕೊಂಡಿದ್ದು, ಆಗ ಅದನ್ನು ಸ್ವಾಯ್ನ್ ಫ್ಲೂ ಅಥವಾ ಹಂದಿ ಜ್ವರ ಎನ್ನಲಾಗಿತ್ತು. ಮೆಕ್ಸಿಕೋದಲ್ಲಿ ಆರಂಭವಾದ ಈ ಜ್ವರ ಅಂದಾಜಿನಷ್ಟು ಅಪಾಯಕಾರಿಯಾಗಿರಲಿಲ್ಲ. ಆದರೀಗ ಕೊರೋನಾದಿಂದ ಒಂದು ಕೋಟಿಗೂ ಅಧಿಕ ಮಂದಿ ಸೋಂಕಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಹೊಸ ವೈರಸ್ ಹಬ್ಬಿಕೊಂಡರೆ ಇದನ್ನು ನಿಯಂತ್ರಿಸುವುದು ಅಸಾಧ್ಯ ಎನ್ನಲಾಗಿದೆ.
ಸದ್ಯಕ್ಕಿರುವ ಲಸಿಕೆ ಎಷ್ಟು ಪರಿಣಾಮಕಾರಿ?
ಈ G4 EA H1N1 ವೈರಸ್‌ನಲ್ಲಿ ತನ್ನ ಜೀವಕೋಶಗಳನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವ ಸಾಮರ್ಥ್ಯವಿದೆ. ಅಲ್ಲದೇ ಸದ್ಯಕ್ಕಿರುವ ಹಂದಿ ಜ್ವರದ ಲಸಿಕೆ ಈ ವೈರಸ್ ವಿರುದ್ಧ ಹೋರಾಡುವಷ್ಟು ಪರಿಣಾಮಕಾರಿಯಾಗಿಲ್ಲ. ಈ ಸಂಂಧ ಪ್ರತಿಕ್ರಿಯಿಸಿರುವ ಚೀನಾದ ಪ್ರೊಫೆಸರ್ ಕಿನ್ ಚೋ ಚಾಂಗ್ ನಾವು ಸದ್ಯ ಕೊರೋನಾದಿಂದ ಆವರಿಸಿಕೊಂಡಿದ್ದೇವೆ. ಹೀಗಿದ್ದರೂ ಮುಂದೆ ದಾಳಿ ಇಡುವ ವೈರಸ್‌ಗಳ ಮೇಲೂ ನಮ್ಮ ಗಮನವಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ