ಉಗಾಂಡ ಮೂಲದ ವ್ಯಕ್ತಿಗೆ 12 ಪತ್ನಿಯರು, 102 ಮಕ್ಕಳು, 500ಕ್ಕೂ ಹೆಚ್ಚು ಮೊಮ್ಮಕ್ಕಳಿದ್ದಾರೆ. ಈತ ವಾಸಿಸುವ ಪ್ರದೇಶವನ್ನು ಜಿಲ್ಲೆ ಎಂದು ಘೋಷಣೆ ಮಾಡುವಂತೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಉಗಾಂಡ: ಹಿಂದಿನ ಕಾಲದಲ್ಲಿ ಕುಟುಂಬಗಳು ದೊಡ್ಡದಾಗಿರುತ್ತದೆ. ಒಂದೇ ಸೂರಿನಡಿಯೇ ಅಜ್ಜನಿಂದ ಹಿಡಿದು ಮೊಮ್ಮಕ್ಕಳು ವಾಸವಾಗಿರುತ್ತದೆ. ಇಂದು ಕಾಲ ಬದಲಾಗಿದ್ದು, ಒಂದೇ ಮಗು ಇರಲಿ ಎಂಬ ನಿಯಮಕ್ಕೆ ಯುವ ಸಮುದಾಯ ಬದ್ಧವಾಗುತ್ತಿದೆ. ಒಂದು ಅಥವಾ ಎರಡು ಮಗು ಇದ್ದರೆ ಅವರನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸೇರಿದಂತೆ ಅವರ ಎಲ್ಲಾ ಅವಶ್ಯಕತೆಗಳನ್ನು ಪೂರೈಸಬಹುದು ಎಂದು ಯಂಗ್ ಪೋಷಕರ ಮಾತು. ಇಂದು ನಾವು ಹೇಳುತ್ತಿರುವ ಕುಟುಂಬದಲ್ಲಿ ಬರೋಬ್ಬರಿ 700ಕ್ಕೂ ಅಧಿಕ ಜನರು ಜೊತೆಯಾಗಿ ವಾಸಿಸುತ್ತಿದ್ದಾರೆ. ನಮಗೆ ಮನೆ ಇಲ್ಲ, ನಮ್ಮದೇ ಜಿಲ್ಲೆಯನ್ನು ಘೋಷಿಸಿ ಎಂದು ಕುಟುಂಬದ ಕರ್ತಾ ಹೇಳುತ್ತಾನೆ.
700ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಕುಟುಂಬ ಉಗಾಂಡದಲ್ಲಿ ವಾಸವಾಗಿದೆ. @fearlessnomadiker ಹೆಸರಿನ ಭಾರತದ ಟ್ರಾವೆಲ್ಲರ್ ಈ ಕುಟುಂಬವನ್ನು ಸಂಪರ್ಕಿಸಿ ವಿಡಿಯೋ ಮಾಡಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಟ್ರಾವೆಲ್ಲರ್ ಹರ್ಷ, ಆಫ್ರಿಕಾದ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಒಂದು ಡಜನ್ ಪತ್ನಿಯರನ್ನು ಹೊಂದಿರುವ ವ್ಯಕ್ತಿಯನ್ನು ಭೇಟಿಯಾಗಿ ಸಂದರ್ಶನ ಮಾಡಿದ್ದಾರೆ. 67 ವರ್ಷದ ಮೂಸಾಹಾಸಿಯಾ ಕೆಸೆರೊಗೆ ಒಟ್ಟು 12 ಪತ್ನಿಯರಿದ್ದಾರೆ.
undefined
ಟ್ರಾವೆಲ್ ವ್ಲಾಗರ್ ಹರ್ಷ ಹೇಳುವ ಪ್ರಕಾರ, ಇದು ಪ್ರಪಂಚದ ಅತಿ ದೊಡ್ಡ ಕುಟುಂಬವಾಗಿದೆ. ಆದ್ರೆ ಬಿಬಿಸಿ ವರದಿ ಪ್ರಕಾರ, ಮಿಜೋರಾಂನಲ್ಲಿರುವ ಜಿಯೋನಾ ಚಾನಾ ವಿಶ್ವದ ಅತಿ ದೊಡ್ಡ ಕುಟುಂಬವಾಗಿದೆ. ಜಿಯೋನಾ ಚಾನಾ 2021ರಲ್ಲಿ ತಮ್ಮ 76ನೇ ವಯಸ್ಸಿನಲ್ಲಿ ನಿಧನ ಹೊಂದುತ್ತಾರೆ. ಜಿಯೋನಾ ಚಾನಾ ಅವರಿಗೆ 39 ಪತ್ನಿಯರು ಮತ್ತು 94 ಮಕ್ಕಳಿದ್ದರು ಹಾಗೂ ನೂರಾರು ಮೊಮ್ಮಕ್ಕಳಿದ್ದರು. ಆದ್ರೆ ಉಗಾಂಡದ ಮೂಸಾ ಅವರಿಗೆ 102 ಮಕ್ಕಳು, ಮೊಮ್ಮಕ್ಕಳು 570 ಜನರಿದ್ದಾರೆ. ವಿಡಿಯೋದಲ್ಲಿ ಒಂದೇ ಸ್ಥಳದಲ್ಲಿ ಸುಮಾರು 20-30 ಮನೆಗಳಿರೋದನ್ನು ಗಮನಿಸಬಹುದು.
ವಿಶ್ವದ ಅತಿದೊಡ್ಡ ನದಿ ಖಾಲಿ ಖಾಲಿ, ಭಾರತದ ವಿಸ್ತೀರ್ಣಕ್ಕಿಂತ ದೊಡ್ಡ ಅರಣ್ಯ ಹೊಂದಿದ ದೇಶದಲ್ಲಿ ಮಳೆ ಇಲ್ಲ
ಮೂಸಾ ಕುಟುಂಬದ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 55 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿರುವ ಈ ವಿಡಿಯೋ ನೋಡಿದ ನೆಟ್ಟಿಗರು, ಯಾಕೆ ಆತ ಇರೋ ಪ್ರದೇಶವನ್ನು ಒಂದು ಊರು ಎಂದು ಘೋಷಿಸಬಾರದು. ಊರು ಅಥವಾ ಗ್ರಾಮಕ್ಕೆ ನೀಡುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ರೆ ಒಂದೇ ಕುಟುಂಬದ ಹಳ್ಳಿ ನಿರ್ಮಾಣವಾಗುತ್ತದೆ. ಈ ಮೂಸಾಗೆ ತನ್ನ ಎಲ್ಲ ಮಕ್ಕಳ ಹೆಸರು ಮತ್ತು ಯಾವ ಪತ್ನಿಯ ಮಗ ಅಥವಾ ಮಗಳು ಎಂದು ಕಂಡು ಹಿಡಿಯುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವ್ಯಕ್ತಿ ತನ್ನದೇ ಸಾಮ್ರಾಜ್ಯ ನಿರ್ಮಾಣ ಮಾಡುತ್ತಿರಬೇಕು ಎಂದು ತಮಾಷೆಯ ಕಮೆಂಟ್ ಮಾಡಿದ್ದಾರೆ.