
ದುಬೈ (ಏ.14): ಇಲ್ಲಿ ಪ್ರಶಸ್ತಿ ಸ್ವೀಕರಿಸಿದ ಒಬ್ಬೊಬ್ಬ ಸಾಧಕರನ್ನು ನೋಡಿದರೆ ನೀರಿನ ಹರಿವಿನ ವಿರುದ್ಧ ಈಜಿದವರದ್ದೇ ಜಗತ್ತು ಎನಿಸುತ್ತಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಪ್ರಶಂಸೆ ವ್ಯಕ್ತಪಡಿಸಿದರು. ದುಬೈನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಆಯೋಜಿಸಿದ್ದ ದುಬೈ ಇಂಡಿಯಾ ಇಂಟರ್‌ನ್ಯಾಷನಲ್ ಐಕಾನಿಕ್ ಅವಾರ್ಡ್ಸ್ ಎರಡನೇ ಅವತರಣಿಕೆಯಲ್ಲಿ ಅವರು ಮಾತನಾಡಿದರು. ಉತ್ತರ ಪ್ರದೇಶದಲ್ಲಿ ಐದನೇ ಕ್ಲಾಸ್ ಪಾಸಾಗಿದ್ದವರಿಗಾಗಿ 62 ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 50 ಸಾವಿರ ಪದವೀಧರರು, 28 ಸಾವಿರ ಡಬಲ್ ಡಿಗ್ರಿ ಮಾಡಿದವರು, 3700 ಮಂದಿ ಪಿಎಚ್ ಮಾಡಿರು ವವರು ಅರ್ಜಿ ಸಲ್ಲಿಸಿದ್ದಾರೆ.
ಆದರೆ ಇಂದು ಪ್ರಶಸ್ತಿ ಸ್ವೀಕರಿಸಿದವರ ಪೈಕಿ ಒಬ್ಬರು ಕಾನ್ಸಟೇಬಲ್ ವೃತ್ತಿ ತೊರೆದು ರೈತರಾಗಿದ್ದಾರೆ. ಮಾತ್ರವಲ್ಲ ತನ್ನ ಹೊಲದಲ್ಲಿ ದುಡಿಯೋ ಕೃಷಿ ಕಾರ್ಮಿಕರಿಗೆ ವಿಮಾನ ಪ್ರವಾಸ ಮಾಡಿಸಿದ್ದಾರೆ. ಮತ್ತೊಬ್ಬರು ದಿನಕ್ಕೆ 60 ರುಪಾಯಿ ಕೂಲಿಗಾಗಿ ಬೆಂಗ ಳೂರಿಗೆ ಬಂದವರೀಗ ಕಂಪನಿಗಳುಮಾಲೀಕರು. ಇವರನ್ನು ನೋಡಿದಾಗ ಅನಿಸಿದ್ದು ನೀರಿನ ಹರಿವಿನ ವಿರುದ್ಧ ಈಜಿದವರದ್ದೇ ಜಗತ್ತು ಅಂತ. ನಮ್ಮ ಸಮಾಜದಲ್ಲಿ ಪ್ರೇರಣೆಯ ಕೊರತೆ ಇದೆ. ಆ ಕೊರತೆಯನ್ನು ಇಲ್ಲಿರುವ ಪ್ರತಿ ಸಾಧಕರು ನಿವಾರಿಸಬಲ್ಲರು. ಇವರ ಪ್ರೇರಣಾದಾಯಕ ಕತೆಗಳನ್ನು ಸಮಾಜಕ್ಕೆ ತೋರಿಸುವ ಅವಕಾಶವನ್ನು, ಅದರ ಸಂತಸವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಅನುಭವಿಸುತ್ತಿದೆ. ನಿಮ್ಮ ಯಶಸ್ಸಿನ ಕತೆಗಳನ್ನು ಸಮಾಜ ನೋಡಿ ಪ್ರೇರಣೆ ಪಡೆದುಕೊಳ್ಳುತ್ತದೆ ಎಂದು ಅಜಿತ್ ಹೇಳಿದರು.
ಮುಂದೊಂದು ದಿನ ಕೇವಲ ರಾಜಕಾರಣಿಗಳಿಗಾಗಿ ಇಂತಹ ಅಂತಾರಾಷ್ಟ್ರೀಯ ಕಾರ್ಯಕ್ರಮ ಮಾಡುವ ಆಸೆ ಅಗುತ್ತಿದೆ. ನಮ್ಮ ರಾಜಕಾರಣಿಗಳನ್ನು ಕರೆತಂದು 1945ರಲ್ಲಿ ಸ್ವಾತಂತ್ರ್ಯ ಪಡೆದ ವಿಯೆಟ್ನಾಂ, 1948ರಲ್ಲಿ ಸ್ವಾತಂತ್ರ್ಯ ಪಡೆದ ಮಲೇಷ್ಯಾ ಹಾಗೂ 1971ರಲ್ಲಿ ಸ್ವಾತಂತ್ರ್ಯ ಪಡೆದ ಅರಬ್ ರಾಷ್ಟ್ರಗಳು ಹೇಗೆ ಬೆಳೆದಿವೆ ತೋರಿಸಬೇಕು. ಇಲ್ಲಿ ಸಾಧ್ಯ ಆಗಿರೋದು ನಮ್ಮಲ್ಲೇಕೆ ಸಾಧ್ಯ ಆಗುತ್ತಿಲ್ಲವೆಂದು ಪ್ರಶ್ನಿಸಬೇಕು ಎಂದರು. ನಿಮಗೆ ನಾವು ನೀಡಿರುವುದು ಪ್ರಶಸ್ತಿಗಳನ್ನು, ಜವಾಬ್ದಾರಿಯನ್ನು. ಈ ಪ್ರಶಸ್ತಿಯು ನಿಮ್ಮ ಮುಂದಿನ ಹಾದಿಯನ್ನು ನೆನಪಿಸಲಿ, ಸಮಾಜಕ್ಕೆ ಮತ್ತಷ್ಟು ಕೊಡುಗೆಗಳನ್ನು ನೀಡಲು ಶಕ್ತಿ ಸಿಗಲಿ. ನಿಮ್ಮ ಉತ್ಸಾಹ ಹೆಚ್ಚಾದರೆ ಅದೇ ನಾವು ಅನುಭವಿಸುವ ಸಾರ್ಥಕತೆ ಎಂದು ಅಜಿತ್ ಹೇಳಿದರು.
ಭೂಪಟದ ಆಚೆಗೂ ಕನ್ನಡ ವಿಸ್ತರಣೆ ನಮ್ಮ ಗುರಿ: ರವಿ ಹೆಗಡೆ
ನಮ್ಮ ಸಮಾಜದಲ್ಲಿ ಪ್ರೇರಣೆಯ ಕೊರತೆ ಇದೆ. ಆ ಕೊರತೆಯನ್ನು ಇಲ್ಲಿರುವ ಪ್ರತಿ ಸಾಧಕರು ನಿವಾರಿಸಬಲ್ಲರು. ಇವರ ಪ್ರೇರಣಾದಾಯಕ ಕತೆಗಳನ್ನು ಸಮಾಜಕ್ಕೆ ತೋರಿಸುವ ಅವಕಾಶವನ್ನು, ಅದರ ಸಂತಸವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಅನುಭವಿಸುತ್ತಿದೆ.
-ಅಜಿತ್ ಹನಮಕ್ಕನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ