ಆಸ್ಪ್ರೇಲಿಯಾದ ಮೆಲ್ಬರ್ನ್‌ನಲ್ಲಿರುವ ಕಾಳಿ ದೇವಿಯ ದೇವಸ್ಥಾನದ ಅರ್ಚಕರಿಗೆ ಕರೆ ಮಾಡಿದ ಅನಾಮಿಕನೊಬ್ಬ ದೇವಸ್ಥಾನದಲ್ಲಿ ಭಜನೆಗಳನ್ನು ನಿಲ್ಲಿಸಿ. ಇಲ್ಲದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ಘಟನೆ ನಡೆದಿದೆ.
ಮೆಲ್ಬರ್ನ್: ಆಸ್ಪ್ರೇಲಿಯಾದ ಮೆಲ್ಬರ್ನ್‌ನಲ್ಲಿರುವ ಕಾಳಿ ದೇವಿಯ ದೇವಸ್ಥಾನದ ಅರ್ಚಕರಿಗೆ ಕರೆ ಮಾಡಿದ ಅನಾಮಿಕನೊಬ್ಬ ದೇವಸ್ಥಾನದಲ್ಲಿ ಭಜನೆಗಳನ್ನು ನಿಲ್ಲಿಸಿ. ಇಲ್ಲದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ಘಟನೆ ನಡೆದಿದೆ. ಇತ್ತೀಚೆಗೆ ಆಸ್ಪ್ರೇಲಿಯಾದಲ್ಲಿರುವ ಹಿಂದೂ ದೇವಾಲಯಗಳ ಮೇಲೆ ಖಲಿಸ್ತಾನಿ ಪರ ಘೋಷಣೆ ಹಾಗೂ ಭಾರತ ವಿರೋಧಿ ಬರಹಗಳನ್ನು ಗೀಚಿದ್ದ ಬೆನ್ನಲ್ಲೇ ಗುರುವಾರ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅರ್ಚಕ ಭವ್ನಾ, ಇದು ಮಹಾಕಾಳಿ ದೇವಸ್ಥಾನ (Mahakali temple). ಗುರು ಗೋವಿಂದ ಸಿಂಗ್‌ರು ಸಹ ಇಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಇಲ್ಲಿ ಯಾಕೆ ಯಾರೋ ಬಂದು ಜಗಳ ಮಾಡಬೇಕು ಎಂದು ತಾವು ಕರೆ ಮಾಡಿದ್ದವನಿಗೆ ಉತ್ತರಿಸಿದ್ದಾಗಿ ಹೇಳಿದ್ದಾರೆ.
ಕೆನಡಾದ ಹಿಂದೂ ದೇವಾಲಯದಲ್ಲಿ ಭಾರತ ವಿರೋಧಿ ಬರಹ
ಭಾರತ ವಿರೋಧಿ (Anti-India), ಹಿಂದೂ ವಿರೋಧಿ ಬರಹ ಇತ್ತೀಚೆಗೆ ವ್ಯಾಪಕವಾಗುತ್ತಿದೆ. ಇತ್ತೀಚೆಗೆ ಕೆನಡಾದ ಬ್ರಂಪ್ಟನ್‌ನಲ್ಲಿರುವ (Brampton) ಹಿಂದೂ ದೇವಾಲಯದ ಮೇಲೆ ಭಾರತ ವಿರೋಧಿ ಬರಹ ಬರೆದ ಘಟನೆ ನಡೆದಿದೆ. ಗೋಡೆಯ ಮೇಲೆ ಗೀಚುಬರಹಗಳನ್ನು ಬರೆಯುವ ಮೂಲಕ ಗೌರಿ ಶಂಕರ ದೇವಾಲಯವನ್ನು ವಿರೂಪ ಮಾಡಲಾಗಿತ್ತು. ಇದು ಕಳೆದ ಜುಲೈನಿಂದ ಕೆನಡಾದ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ 3ನೇ ವಿಧ್ವಂಸಕ ಕೃತ್ಯವಾಗಿತ್ತು. ಘಟನೆಯನ್ನು ಕೆನಡಾದ ಭಾರತೀಯ ಸಮುದಾಯದ ಜನರು ತೀವ್ರವಾಗಿ ಖಂಡಿಸಿದ್ದು ಕೃತ್ಯದ ಕುರಿತು ಅಲ್ಲಿನ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇಂತಹ ಜನಾಂಗೀಯ ಹಾಗೂ ಧಾರ್ಮಿಕ ದ್ವೇಷಪೂರಿತ ಘಟನೆಗಳು ಕೆನಡಾದಲ್ಲಿರುವ ಭಾರತೀಯ ಮೂಲದ ಜನರಲ್ಲಿ ಭಯವನ್ನು ಹುಟ್ಟುಹಾಕಿದೆ. ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿಗರಿಂದ ಭಾರತೀಯ ಸಮುದಾಯದ ಮೇಲೆ ದಾಳಿ ನಡೆಯುತ್ತಿರುವ ಬಗ್ಗೆ ಈ ಹಿಂದೆ ಭಾರತೀಯ ಅಧಿಕಾರಿಗಳು ಪ್ರಸ್ತಾಪಿಸಿದ್ದರು. ಈ ಹಿಂದೆ ಆಸ್ಪ್ರೇಲಿಯಾದ ಹಿಂದೂ ದೇವಾಲಯಗಳ ಮೇಲೂ ಖಲಿಸ್ತಾನಿಗಳು ಭಾರತ ವಿರೋಧಿ ಬರಹಗಳನ್ನು ಗೀಚಿದ್ದರು.
Britainನಲ್ಲಿ ಹಿಂದೂ ದೇವಾಲಯ ಧ್ವಂಸ; ಕೇಸರಿ ಧ್ವಜವನ್ನು ತೆಗೆದ ಪಾಕ್ ಮೂಲದವರು..!
ಇದಕ್ಕೂ ಮೊದಲು ಆಸ್ಪ್ರೇಲಿಯಾದಲ್ಲಿ (Australia) ಈ ತಿಂಗಳು ಮೂರನೇ ಬಾರಿ ಹಿಂದೂ ದೇವಾಲಯದ ಮೇಲೆ ಆಕ್ರಮಣ ನಡೆದಿತ್ತು. ಇಲ್ಲಿನ ವಿಕ್ಟೋರಿಯಾದ ಆಲ್ಬರ್ಚ್ ಪಾರ್ಕ್‌ನ ಇಸ್ಕಾನ್ ದೇವಾಲಯಕ್ಕೆ ಬಂದ ಖಲಿಸ್ತಾನಿ ಉಗ್ರರು, ದೇವಸ್ಥಾನದ ಗೋಡೆಯನ್ನು ವಿರೂಪಗೊಳಿಸಿ 'ಹಿಂದುಸ್ತಾನ್ ಮುರ್ದಾಬಾದ್ ಎಂಬ ಭಾರತ ವಿರೋಧಿ ಗೋಡೆ ಬರಹವನ್ನು ಬರೆದಿದ್ದರು. ಈ ಮೊದಲು ಜ.12ರಂದು ಮೆಲ್ಬರ್ನ್‌ನಿನ ಸ್ವಾಮಿನಾರಾಯಣ ದೇವಾಲಯ, ಜ.16ರಂದು ವಿಕ್ಟೋರಿಯಾದ ಕಾರಮ್‌ಡೌನ್ಸ್‌ನ ಶ್ರೀ ಶಿವ ವಿಷ್ಣು ದೇಗುಲದ ಮೇಲೆ ದಾಳಿ ನಡೆಸಿ ಖಲಿಸ್ತಾನಿ ಪರ ಹಾಗೂ ಭಾರತ ವಿರೋಧಿ ಘೋಷಣೆ ಬರೆಯಲಾಗಿತ್ತು.
ಬಾಂಗ್ಲಾ ಕಿಡಿಗೇಡಿಗಳಿಂದ 14 ದೇಗುಲಗಳು ಧ್ವಂಸ
ಢಾಕಾ: ಹಾಗೆಯೇ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ದೇಗುಲಗಳ ಮೇಲಿನ ದಾಳಿಗಳು ಮುಂದುವರೆದಿದ್ದು, ದುಷ್ಕರ್ಮಿಗಳ ಗುಂಪೊಂದು ಕಳೆದ ತಿಂಗಳು 3 ಗ್ರಾಮಗಳ ವ್ಯಾಪ್ತಿಯ 14 ದೇಗುಲಗಳನ್ನು ಧ್ವಂಸ ಮಾಡಿ ಪರಾರಿಯಾಗಿದ್ದವು. ವಾಯುವ್ಯ ಬಾಂಗ್ಲಾದೇಶದ ಠಾಕೂರ್‌ಗಾಂವ್‌ನಲ್ಲಿ ದುಷ್ಕರ್ಮಿಗಳ ಗುಂಪು ದೇಗುಲ ಮತ್ತು ದೇವರ ವಿಗ್ರಹಗಳನ್ನು ಧ್ವಂಸ ಮಾಡಿ ಕೆಲವನ್ನು ನೀರಿನಲ್ಲಿ ಎಸೆದು ಹೋಗಿದ್ದಾರೆ ಎಂದು ಸ್ಥಳೀಯ ಹಿಂದೂ ಮುಖಂಡ ಬೈದ್ಯನಾಥ್ ಬರ್ಮನ್ ತಿಳಿಸಿದ್ದಾರೆ.
Temple Demolition 300 ವರ್ಷ ಹಳೆಯ ಹಿಂದೂ ದೇಗುಲ ಧ್ವಂಸ, ರಾಜಸ್ಥಾನ ಸರ್ಕಾರ ವಿರುದ್ಧ ಆಕ್ರೋಶ!
ಈ ಪ್ರದೇಶ ಯಾವುದೇ ಹಿಂದೂ ಮುಸ್ಲಿಮರ ವೈಷಮ್ಯ ಇಲ್ಲದೇ ಶಾಂತವಾಗಿತ್ತು. ಈಗ ಅದಕ್ಕೆ ಧಕ್ಕೆಯಾಗಿದೆ ಎಂದು ಹಿಂದೂ ಸಂಘದ ಮುಖ್ಯಸ್ಥ ಸಮರ್ ಮುಖರ್ಜಿ ಹೇಳಿದ್ದಾರೆ.ಪ್ರಕರಣ ಕುರಿತು ತನಿಖೆ ಆರಂಭಿಸಿದ ಪೊಲೀಸರು, ಇದು ಅಕ್ಷಮ್ಯ ಅಪರಾಧ ಈ ದಾಳಿಯನ್ನು ಸಂಚು ರೂಪಿಸಿ ಮಾಡಲಾಗಿದೆ, ಆರೋಪಿಗಳಿಗೆ ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ.