
ನವದೆಹಲಿ (ಮೇ.10): ಥಾಯ್ಲೆಂಡ್ ನ ಪೊಲೀಸರು (Thai police) ಸ್ವಯಂ ಘೋಷಿತ ಪವಿತ್ರ ವ್ಯಕ್ತಿ ( self-proclaimed 'holy man' ), 75 ವರ್ಷದ ಥಾವೀ ನಾನ್ರಾ ಅವರನ್ನು ಬಂಧಿಸಿದ್ದಾರೆ. ಅವರ ಅನುಯಾಯಿಗಳ ಗುಂಪು, ಅನಾರೋಗ್ಯದ (illnesses) ಚಿಕಿತ್ಸೆಗಾಗಿ ಥಾವೀ ನಾನ್ರಾ (Thawee Nanra) ಅವರ ಮೂತ್ರವನ್ನು ಕುಡಿಯುತ್ತಿದ್ದರು ಹಾಗೂ ಮಲವನ್ನು ಸೇವಿಸುತ್ತಿದ್ದರು ಎಂದು ಹೇಳಲಾಗಿದೆ.
ಸುದ್ದಿಸಂಸ್ಥೆಯ ವರದಿಯ ಪ್ರಕಾರ ಥಾವೀ ನನ್ರಾ ಅವರನ್ನು ಈಶಾನ್ಯ ಥೈಲ್ಯಾಂಡ್‌ನ (northeastern Thailand) ಚೈಯಾಫಮ್‌ನಲ್ಲಿರುವ (Chaiyaphum) ದಟ್ಟ ಕಾಡಿನಲ್ಲಿ ಭಾನುವಾರ ಬಂಧನ ಮಾಡಲಾಗಿದೆ. ವೀಡಿಯೋದಲ್ಲಿ ಪೊಲೀಸರು ಶರ್ಟ್ ರಹಿತ ಮತ್ತು ಗಡ್ಡಧಾರಿ ಥಾವಿಯನ್ನು ವಾಹನದಲ್ಲಿ ಇರಿಸುತ್ತಿದ್ದರೆ, ಅವರ ಬೆಂಬಲಿಗರು ಇತರ ಅಧಿಕಾರಿಗಳೊಂದಿಗೆ ಜಗಳವಾಡುತ್ತಿರುವುದು ದಾಖಲಾಗಿದೆ.
ಕ್ಯಾಂಪ್‌ಸೈಟ್‌ನಲ್ಲಿ ಥಾವೀ ಅವರ ಅನುಯಾಯಿಗಳು ಎಂದು ನಂಬಲಾದ ಸುಮಾರು 11 ಶವಗಳನ್ನು ಅವರು ಪತ್ತೆ ಮಾಡಲಾಗಿದೆ ಎಂದು ಥಾಯ್ ಪೊಲೀಸರು ಹೇಳಿದ್ದಾರೆ. ಶವಗಳು ಪತ್ತೆಯಾಗುವ ಮೊದಲು ಸ್ಥಳೀಯ ಭೂ ಅತಿಕ್ರಮಣ ಆರೋಪಗಳು ಮತ್ತು ಕೋವಿಡ್-19 ಉಲ್ಲಂಘನೆಗಳ ಮೇಲೆ ಥಾವೀ ಅವರ ಕ್ಯಾಂಪ್‌ಸೈಟ್ ಮೇಲೆ ದಾಳಿ ನಡೆಸಲಾಗಿದೆ ಎಂದು ಥಾಯ್ ಎನ್‌ಕ್ವೈರರ್ ಪತ್ರಿಕೆ ವರದಿ ಮಾಡಿದೆ. ಬ್ಯಾಂಕಾಕ್ ಪೋಸ್ಟ್‌ನ ವರದಿಯ ಪ್ರಕಾರ, ಶವಗಳನ್ನು ಶವಪೆಟ್ಟಿಗೆಯಲ್ಲಿ ಇರಿಸಲಾಗಿತ್ತು ಆದರೆ ಮರಣ ಪ್ರಮಾಣಪತ್ರಗಳು ಕೇವಲ ಐದು ದೇಹಗಳಿಗೆ ಮಾತ್ರ ಕಂಡುಬಂದಿವೆ.
ಈ ಕುರಿತಾಗಿ ಮಾತನಾಡಿರುವ ಪ್ರಾಂತೀಯ ಗವರ್ನರ್ ಕ್ರೈಸೋರ್ನ್ ಕೊಂಗ್‌ಚಾಲಾದ್, ದಾಳಿ ನಡೆಸಿದಾಗ ಸುಮಾರು ಒಂದು ಡಜನ್ ಜನರು ಥಾವಿಯೊಂದಿಗೆ ವಾಸಿಸುತ್ತಿರುವುದು ಕಂಡುಬಂದಿದೆ ಎಂದು ಹೇಳಿದರು. "ಇಂತಹ ಮೂಢನಂಬಿಕೆಗಳನ್ನು ನಂಬುವ ಜನರಿದ್ದಾರೆ ಎಂದು ನೋಡಲು ಸಾಕಷ್ಟು ಮುಜುಗರವಾಗುತ್ತದೆ. ಆದರೆ ಇದು ಇನ್ನು ಮುಂದೆ ವೈಯಕ್ತಿಕ ನಂಬಿಕೆಯ ಬಗ್ಗೆ ಮಾತ್ರವಲ್ಲ. ನಮ್ಮ ಬಳಿ ಮೃತದೇಹಗಳಿವೆ, ಮತ್ತು ಈ ವ್ಯಕ್ತಿಗಳ ಸುತ್ತಲಿನ ಸತ್ಯಗಳನ್ನು ಸ್ಥಾಪಿಸಲು ನಾವು ಎಲ್ಲಾ ಏಜೆನ್ಸಿಗಳೊಂದಿಗೆ ಕೆಲಸ ಮಾಡಬೇಕಾಗುತ್ತದೆ," ಕ್ರೈಸರ್ನ್ ತಿಳಿಸಿದ್ದಾರೆ.
ಥಾವೀ " ತಾನು ಎಲ್ಲಾ ಧರ್ಮಗಳ ಪಿತಾಮಹ" ಎಂದು ಹೇಳಿಕೊಂಡಿದ್ದಾನೆ ಎಂದು ಥಾಯ್ ಸುದ್ದಿ ಸೈಟ್ ದಿ ನೇಷನ್ ವರದಿ ಮಾಡಿದೆ. ಔಟ್‌ಲೆಟ್ ಪ್ರಕಾರ, ಮೋರ್ ಪ್ಲಾ ಎಂಬ ಸ್ಥಳೀಯ ಪ್ರಸಿದ್ಧ ಶಾಮನ್ ಅನ್ನು ಕ್ಯಾಂಪ್‌ಸೈಟ್‌ಗೆ ಕರೆತರಲಾಗಿತ್ತು. ಥಾವೀ ಬಳಿ ತೆರಳಿದ್ದ 80 ವರ್ಷದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದ ಹಿನ್ನಲೆಯಲ್ಲಿ ಅವರನ್ನು ಪತ್ತೆ ಹಚ್ಚುವ ಕ್ರಮವಾಗಿ ಇದನ್ನು ನಡೆಸಲಾಗಿತ್ತು. 80 ವರ್ಷ ಮಹಿಳೆಯ ಪುತ್ರಿ ಜೆಂಜಿರಾ ಈ ಕುರಿತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಥಾವೀ ನಾನ್ರಾ ಅನುಯಾಯಿಗಳಿಗೆ ಅನಾರೋಗ್ಯದಿಂದ ಗುಣಮುಖರಾಗಲು ತನ್ನ ಮಲ, ಎಂಜಲನ್ನು ಸೇವಿಸುವಂತೆ ಹೇಳುತ್ತಿದ್ದನಲ್ಲದೆ, ಮೂತ್ರವನ್ನು ಕುಡಿಯುವಂತೆ ಹೇಳುತ್ತಿದ್ದ. ಅದನ್ನು ಆತನ ಅನುಯಾಯಿಗಳು ಮಾಡುತ್ತಿದ್ದರು ಎಂದಿದ್ದಾರೆ.
ಎಷ್ಟು ಜಿಮ್ ಮಾಡಿದ್ರು ಸಿಕ್ಸ್‌ಪ್ಯಾಕ್ ಆಗ್ತಿಲ್ವಾ: ಹಾಗಿದ್ರೆ ಇದ್ನ ನೀವು ಓದ್ಲೇಬೇಕು
ದಿ ನೇಷನ್ ಪ್ರಕಾರ, ಥಾವಿಯ ಅನುಯಾಯಿಗಳು ಆತನ ಬಂಧನದ ಸಮಯದಲ್ಲಿ ಅಧಿಕಾರಿಗಳಿಗೆ ಅವರು "ತಂದೆ" ಮತ್ತು "ದೇವರು" ಎಂದು ಹೇಳಿದ್ದಲ್ಲದೆ, ಪೊಲೀಸರ ಮುಂದೆ ಅವರ ಮೂತ್ರ ಮತ್ತು ಮಲವನ್ನು ಸೇವಿಸಿದರು ಎಂದೂ ಹೇಳಿದ್ದಾರೆ.
ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ 49 ವರ್ಷದ ಸಚಿವನ 18ರ ಹರೆಯದ ಪತ್ನಿ
ಈ ಅನುಯಾಯಿಗಳ ಗುಂಪಿನ ಕುರಿತಾಗಿ ಟಿವಿ ವರದಿಯ ಮಾಹಿತಿಯನ್ನೂ ಕೂಡ ಈ ವೇಳೆ ತೋರಿಸಲಾಗಿದೆ. ಅದರಲ್ಲಿ ಥಾವೀ ಅವರ ಅನುಯಾಯಿಯೊಬ್ಬರು, ಥಾವೀ ಅವರ ಮಲ ಯಾವುದೇ ವಾಸನೆಯನ್ನು ಹೊಂದಿಲ್ಲ."ಕಲುಷಿತ ಮನಸ್ಸಿನವರು ಮಾತ್ರ" ಕೆಟ್ಟ ವಾಸನೆಯನ್ನು ಅನುಭವಿಸುತ್ತಾರೆ" ಎಂದು ಹೇಳಿದ್ದಾರೆ. ಥಾವೀಯನ್ನು ಪ್ರಸ್ತುತ ಸ್ಥಳೀಯ ಖೋನ್ ಸಾನ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ