ಸಿಕ್ಸ್‌ಪ್ಯಾಕ್ ಎಂಬುದು ಅನೇಕ ಯುವಕರ ಕನಸು. ಅದಕ್ಕಾಗಿ ಅನೇಕ ಯುವಕರು ಜಿಮ್‌ನಲ್ಲಿ (GYM) ಗಂಟೆಗಟ್ಟಲೇ ತಿಂಗಳುಗಟ್ಟಲೇ ಬೆವರು ಸುರಿಸುತ್ತಾರೆ. ಆದರೂ ಎಲ್ಲರಿಗೂ ಸಿಕ್ಸ್‌ಪ್ಯಾಕ್ ಹೊಂದುವ ಯೋಗ ಇರುವುದಿಲ್ಲ. ಏಕೆಂದರೆ ಇದಕ್ಕೆ ಕಠಿಣ ಶ್ರಮ ಪಡಬೇಕು. ಹಾಗೆಯೇ ವ್ಯಕ್ತಿಯೊಬ್ಬ ಸಿಕ್ಸ್‌ಪ್ಯಾಕ್‌ಗಾಗಿ ಸಾಕಷ್ಟು ಶ್ರಮಪಟ್ಟಿದ್ದಾನೆ. ಆದರೆ ಪ್ರಯೋಜನ ಮಾತ್ರ ಆಗಿಲ್ಲ. ಇದರಿಂದ ಬೇಸತ್ತ ಆ ಯುವಕ ಏನ್ ಮಾಡಿದ ಗೊತ್ತಾ. ಸೀದಾ ಟ್ಯಾಟು ಹಾಕುವವರ ಬಳಿ ತೆರಳಿದ್ದಾನೆ. ಸಿಕ್ಸ್‌ಪ್ಯಾಕ್ ರೀತಿಯೇ ಟ್ಯಾಟು ಹಾಕಿಸಿಕೊಂಡಿದ್ದಾನೆ.
ಡೀನ್ ಗುಂಥರ್ (Gunther) ಎಂಬ ಟ್ಯಾಟೂ (Tatoo) ಹಾಕುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. 2 ದಿನಗಳಲ್ಲಿ 6 ಪ್ಯಾಕ್ ಅನ್ನು ಹೇಗೆ ಪಡೆಯುವುದು. ನೀವು ಅದನ್ನು ಹಚ್ಚೆ ಹಾಕುತ್ತೀರಿ, ನನ್ನ ಸಹೋದರನು ಜಿಮ್‌ನಲ್ಲಿ ಗಂಟೆಗಟ್ಟಲೆ ಕಳೆದು ಬೇಸತ್ತಿದ್ದನು ಹಾಗಾಗಿ ನಾನು ಅವನಿಗೆ ಸಿಕ್ಸ್ ಪ್ಯಾಕ್ ಟ್ಯಾಟೂವನ್ನು ನೀಡಿದ್ದೇನೆ, ಬೇಸಿಗೆಯಲ್ಲಿ ಸಿದ್ಧವಾಗಿದೆ. ಆನಂದಿಸಿ, ಎಂದು ಬರೆದು ಗುಂಥರ್ ವೀಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದಾರೆ. ಗುಂಥರ್ ಪ್ರಸ್ತುತ ಮ್ಯಾಂಚೆಸ್ಟರ್‌ನಲ್ಲಿ (Manchester) ವಾಸಿಸುತ್ತಿರುವ ದಕ್ಷಿಣ ಆಫ್ರಿಕಾದ ಪ್ರವಾಸಿ ಟ್ಯಾಟೂ ಕಲಾವಿದರಾಗಿದ್ದಾರೆ. ಅವರು ವ್ಯಕ್ತಿಯ ಹೊಟ್ಟೆಯ ಮೇಲೆ ಪ್ರಭಾವಶಾಲಿಯಾಗಿ ಕಾಣುವ ಎಬ್ಸ್‌ಗಳ ಸರಣಿಯನ್ನು ಬಿಡಿಸಿದ್ದಾರೆ.
ನಾನು ಮೊದಲು ನಿಜವಾಗಿಯೂ ಈ ಹಿಂದೆ ಕೆಟ್ಟ ಪ್ರಯತ್ನಗಳನ್ನು ಮಾಡಿದ್ದೆ. ನಂತರ ಬಣ್ಣದ ವಾಸ್ತವತೆಯಲ್ಲಿ ಪರಿಣತಿ ಹೊಂದಿದ್ದರಿಂದ ನಾನು ಈ ಸಿಕ್ಸ್ ಪ್ಯಾಕ್ ಬಿಡಿಸಿದೆ. ಇದು ತಮಾಷೆಯಾಗಿದೆ ಎಂದು ನಾನು ಭಾವಿಸಿದೆ. ನನ್ನ ಗ್ರಾಹಕರು (Customer) ಒಂದು ಗಂಟೆ ಕಾಲ ಇದಕ್ಕಾಗಿ ನನ್ನೊಂದಿಗೆ ಇದ್ದರು ಎಂದು ಗುಂಥರ್ ದಿ ಸನ್ ಹೇಳಿದ್ದಾರೆ. ಈ ಟ್ಯಾಟೂಗೆ ಗುಂಥರ್ ಅವರು ಗ್ರಾಹಕನಿಗೆ ಶುಲ್ಕ ವಿಧಿಸಲಿಲ್ಲವಂತೆ ಏಕೆಂದರೆ ಇದು ಅವರಿಗೆ ಹೆಚ್ಚು ಆಸಕ್ತಿಕರ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ. ಇನ್ನು ಈ ಹಚ್ಚೆಗೆ ನೋಡುಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Bengaluru: ಜಿಮ್‌ನಲ್ಲಿ ದಿಢೀರ್ ಕುಸಿದು ಮಹಿಳೆ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಜಿಮ್‌ಗೆ ಹೋಗದೆಯೂ ಫಿಟ್ ಆಗಿರ್ಬೋದಾ ?
ಕೊರೋನಾ (Corona) ಸೋಂಕು ಹರಡಲು ಆರಂಭವಾದಾಗಿನಿಂದಲೂ ಜನಜೀವನ ಬದಲಾವಣೆಯಾಗುತ್ತಾ ಬಂದಿದೆ. ಆರೋಗ್ಯದ ಕುರಿತಾಗಿರುವ ಮನಸ್ಥಿತಿ, ಕಾಳಜಿ ಎಲ್ಲವೂ ಬದಲಾಗಿದೆ. ಕರ್ಫ್ಯೂ, ಲಾಕ್‌ಡೌನ್ (Lockdown) ಮೊದಲಾದ ನಿರ್ಬಂಧಗಳಿಂದ ಜನರು ಹೆಚ್ಚಾಗಿ ಒಳಾಂಗಣ ಚಟುವಟಿಕೆಗಳು ಪಾಲ್ಗೊಳ್ಳುತ್ತಿದ್ದಾರೆ. ಮೊದೆಲ್ಲೆಲ್ಲಾ ಬ್ಯೂಟಿಪಾರ್ಲರ್, ಜಿಮ್ (Gym) ಎಂದು ಓಡಾಡುತ್ತಿದ್ದವರೂ ಈಗೆಲ್ಲಾ ಮನೆಯಲ್ಲೇ ಪರ್ಯಾಯ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಫಿಟ್ ಆಗಿರಲು ಆರೋಗ್ಯಕರ ಆಯ್ಕೆಗಳ ಬಗ್ಗೆ ಕೆಲವರಿಗೆ ತಿಳಿದಿದೆ. ಕೆಲವರು ಸಮಯ ಮತ್ತು ಹಣವನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ ಅಥವಾ ಮನೆಯಲ್ಲಿ ತಮ್ಮ ಫಿಟ್‌ನೆಸ್ ಮಟ್ಟವನ್ನು ಹೆಚ್ಚಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹಾಗಿದ್ರೆ ಜಿಮ್ಗೆ ಹೋಗದೆಯೇ ಫಿಟ್ ಆಂಡ್ ಫೈನ್ ಆಗಿರುವುದು ಹೇಗೆ ?
Bengaluru: ಜಿಮ್‌ನಲ್ಲಿ ಮಹಿಳೆ ದಿಢೀರ್ ಸಾವಿಗೆ ಮಿದುಳಿನಲ್ಲಿ ರಕ್ತಸ್ರಾವ ಕಾರಣ!
ಬೆಳಗ್ಗೆದ್ದು ಯೋಗ (Yoga) ಮಾಡುವುದು ಮನಸ್ಸಿನ ಹಾಗೂ ದೇಹದ ಆರೋಗ್ಯಕ್ಕೆ ಅತ್ಯುತ್ತಮ. ಯೋಗ ಮಾಡುವುದು ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಉದ್ವೇಗ, ಖಿನ್ನತೆ ಮೊದಲಾದ ಸಮಸ್ಯೆ ದೂರವಾಗುತ್ತದೆ. ಯೋಗ ಮಾಡಲು ಪ್ರತ್ಯೇಕವಾಗಿ ಕ್ಲಾಸ್‌ಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಯೂಟ್ಯೂಬ್ ನೋಡಿ ಸರಳವಾಗಿ ಯೋಗಾಸನಗಳನ್ನು ಕಲಿತುಕೊಳ್ಳಬಹುದು.