ಐಸ್‌ಕ್ರೀಂ ಕವರ್ ತೆಗೆದು ಬಾಯಿಗಿಡಲು ಹೊರಟವನಿಗೆ ಶಾಕ್: ಒಳಗಿದ್ದಿದ್ದೇನು ನೋಡಿ

Published : Mar 09, 2025, 01:06 PM ISTUpdated : Mar 10, 2025, 11:42 AM IST
ಐಸ್‌ಕ್ರೀಂ ಕವರ್ ತೆಗೆದು ಬಾಯಿಗಿಡಲು ಹೊರಟವನಿಗೆ ಶಾಕ್: ಒಳಗಿದ್ದಿದ್ದೇನು ನೋಡಿ

ಸಾರಾಂಶ

ಥೈಲ್ಯಾಂಡ್‌ನಲ್ಲಿ ವ್ಯಕ್ತಿಯೊಬ್ಬರು ತಿಂದ ಐಸ್‌ಕ್ರೀಂನಲ್ಲಿ ಹೆಪ್ಪುಗಟ್ಟಿದ ಹಾವು ಪತ್ತೆಯಾಗಿದೆ. ಕಪ್ಪು ಬೀನ್ ಐಸ್‌ಕ್ರೀಂ ಬಾರ್‌ನಲ್ಲಿ ಹಾವು ಕಂಡುಬಂದಿದ್ದು, ಗ್ರಾಹಕ ಆಘಾತಕ್ಕೊಳಗಾಗಿದ್ದಾರೆ.

ಇಷ್ಟು ದಿನ ನೀವು ಆಹಾರಗಳಲ್ಲಿ ಸತ್ತ ಇಲಿ, ಜಿರಳೆ, ಹಲ್ಲಿ, ಚೇಳು ಮುಂತಾದವುಗಳು ಸಿಕ್ಕಿರುವುದರ ಬಗ್ಗೆ ವೀಡಿಯೋ ಹಾಗೂ ಸುದ್ದಿಗಳನ್ನು ನೋಡಿರುತ್ತೀರಿ. ಆದರೆ ಈಗ ಇಲ್ಲೊಂದು ಕಡೆ ವ್ಯಕ್ತಿಯೊಬ್ಬರಿಗೆ ಜಿರಳೆ ಹಲ್ಲಿ ಅಲ್ಲ,  ಐಸ್‌ಕ್ರೀಂನಲ್ಲಿ ಗಟ್ಟಿಯಾದ ರೂಪದಲ್ಲಿ ಹಾವೊಂದು ಪತ್ತೆಯಾಗಿದ್ದು, ನೋಡುಗರಲ್ಲಿ ಭಯ ಹುಟ್ಟಿಸಿದೆ. ಚಾಕೋಬಾರ್‌ನಂತಹ ಐಸ್‌ಕ್ರೀಂ ಬಾರ್‌ನಲ್ಲಿ ಹಾವು ಗಟ್ಟಿಯಾದ ರೂಪದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ನೋಡಿ ಆ ಗ್ರಾಹಕ ಆಘಾತಕ್ಕೊಳಗಾಗಿದ್ದು, ಘಟನೆಯ ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಘಟನೆ ನಡೆದಿದ್ದೆಲ್ಲಿ?

ಅಂದಹಾಗೆ ಈ ಘಟನೆ ನಡೆದಿರುವುದು ಥೈಲ್ಯಾಂಡ್‌ನಲ್ಲಿ. ಥೈಲ್ಯಾಂಡ್‌ನ ಮುವಾಂಗ್ ರಚ್ಚಬುರಿ ಪ್ರದೇಶದ ರೇಬನ್ ನಕ್ಲೆಂಗ್‌ಬೂನ್ ಎಂಬ ವ್ಯಕ್ತಿ ಅಂಗಡಿಯಲ್ಲಿ ತಮಗಾಗಿ ಕಪ್ಪು ಬೀನ್ ಐಸ್ ಕ್ರೀಮ್ ಬಾರ್ ( Black bean ice cream bar)ತಂದಿದ್ದರು. ಆದರೆ ಇದರ ಕವರ್‌ ತೆರೆದು ತಿನ್ನಲು ಹೋದ ಅವರಿಗೆ ಆಘಾತದ ಜೊತೆ ಅಸಹ್ಯವೂ ಆಗಿತ್ತು. ಕಾರಣ ಅದರಲ್ಲಿ ಹೆಪ್ಪುಗಟ್ಟಿದ ಹಾವಿತ್ತು. 'ಇದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅವರು ಹೀಗೆ ಬರೆದಿದ್ದಾರೆ. 'ನಿಮ್ಮ ಕಣ್ಣುಗಳು ತುಂಬಾ ಮುದ್ದಾಗಿವೆ.  ನೀನು ಹೀಗೆ ಹೇಗೆ ಸಾಯಲು ಸಾಧ್ಯ? ಕಪ್ಪು ಬೀನ್ಸ್, ಬೀದಿ ಆಹಾರ. ನಾನೇ ಅದನ್ನು ಖರೀದಿಸಿದ್ದರಿಂದ ನಿಜವಾದ ಚಿತ್ರ' ಎಂದು ಬರೆದಿದ್ದಾರೆ. 

ಫೇಸ್‌ಬುಕ್‌ನಲ್ಲಿ ಫೋಟೋ ಶೇರ್‌

ಅವರು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ ಫೋಟೋಗಳಲ್ಲಿ ಪಟ್ಟೆಪಟ್ಟೆಯ ಹಾವು ಕಾಣಿಸುತ್ತಿದ್ದು, ಹಾವು ಹೆಪ್ಪುಗಟ್ಟಿದ್ದರೂ ಅದರ ಕಣ್ಣುಗಳು ಎದ್ದುಕಾಣುತ್ತಿವೆ. ಈ ಐಸ್‌ಕ್ರೀಂ ಬಾರನ್ನು ಎಸೆಯುವ ಮೊದಲು ಅವರು ಫೋಟೋ ತೆಗೆದು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಇದೊಂದು ವಿಷಕಾರಿ ಹಾವಾಗಿದ್ದು, ಇದು ಹೇಗೆ ಐಸ್‌ಕ್ರೀಂನೊಳಗೆ ಸೇರಿಕೊಂಡಿತ್ತು ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಹಾವನ್ನು ಅವರು ಗೋಲ್ಡನ್ ಟ್ರೀ ತಳಿಯ ಪುಟ್ಟ ಹಾವು ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. 

ಜೆಪ್ಟೊದಲ್ಲಿ ಐಸ್‌ಕ್ರೀಂ ಆರ್ಡರ್ ಮಾಡಿದ ಮುಂಬೈ ವೈದ್ಯನಿಗೆ ಶಾಕ್: ಕೋನ್ ಐಸ್‌ಕ್ರೀಂನಲ್ಲಿತ್ತು ಮಾನವ ಬೆರಳು

ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ

ಈ ಪೋಸ್ಟ್ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ.  ಬಡಪಾಯಿ ಹಾವು ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ನೀವು ಅದೃಷ್ಟವಂತರು ಇದರಲ್ಲಿ ಪ್ರೊಟೀನ್ ಹೆಚ್ಚಿರುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕಳೆದ ವರ್ಷ ಮುಂಬೈನಲ್ಲಿ ವ್ಯಕ್ತಿಯೊಬ್ಬರಿಗೆ ಐಸ್‌ಕ್ರೀಂನಲ್ಲಿ ಮನುಷ್ಯನ ಬೆರಳೊಂದು ಸಿಕ್ಕಿದ್ದಂತಹ ಘಟನೆಯನ್ನು ಇಲ್ಲಿ ನೆನೆಸಿಕೊಳ್ಳುಬಹುದಾಗಿದೆ. ಇದು ನಂತರ ದೊಡ್ಡ ವಿವಾದವಾಗಿ ಬಳಿಕ ಅದು ಐಸ್‌ಕ್ರೀಂ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನದ್ದು ಎಂದು ತನಿಖೆ ವೇಳೆ ತಿಳಿದು ಬಂದಿತ್ತು.

ವಿಶ್ವದ ಟಾಪ್ 100 ಐಸ್ ಕ್ರೀಂಗಳ ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದ 5 ಐಸ್‌ಕ್ರೀಂಗಳು! ಇಲ್ಲಿದೆ ನೋಡಿ

ಥೈಲ್ಯಾಂಡ್ ವ್ಯಕ್ತಿಯ ಎಫ್‌ಬಿ ಪೋಸ್ಟ್ ಇಲ್ಲಿದೆ ನೋಡಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!