ಪಾರ್ಲಿಮೆಂಟ್ ಅಧಿವೇಶನದ ಮಧ್ಯೆ ಪೋರ್ನ್ ವೀಕ್ಷಿಸಿದ ಸಂಸದ..!

Suvarna News   | Asianet News
Published : Sep 19, 2020, 07:04 PM ISTUpdated : Sep 19, 2020, 07:10 PM IST
ಪಾರ್ಲಿಮೆಂಟ್ ಅಧಿವೇಶನದ ಮಧ್ಯೆ ಪೋರ್ನ್ ವೀಕ್ಷಿಸಿದ ಸಂಸದ..!

ಸಾರಾಂಶ

ಪ್ರಜೆಗಳ ಅಭಿವೃದ್ಧಿ ಬಗ್ಗೆ ಕುಳಿತು ಚರ್ಚಿಸಬೇಕಾದ ಅಧಿವೇಶನದಲ್ಲಿ ಸಂಸದ ಕುಳಿತು ಪೋರ್ನ್ ನೋಡಿದ ಘಟನೆ ನಡೆದಿದೆ

ಸಂಸತ್ತಿನಲ್ಲಿ ಒಂದುಕಡೆ ಬಜೆಟ್ ಮಂಡನೆಯಾಗ್ತಿದ್ರೆ ಇತ್ತ ಸಂಸದ ಫೋನ್‌ನಲ್ಲಿ ಪೋರ್ನ್ ಎಂಜಾಯ್ ಮಾಡಿದ್ದಾನೆ. ಪ್ರಜೆಗಳ ಅಭಿವೃದ್ಧಿ ಬಗ್ಗೆ ಕುಳಿತು ಚರ್ಚಿಸಬೇಕಾದ ಅಧಿವೇಶನದಲ್ಲಿ ಸಂಸದ ಕುಳಿತು ಪೋರ್ನ್ ನೋಡಿದ ಘಟನೆ ನಡೆದಿದೆ

ಥಾಯ್‌ಲೆಂಡ್ ಸಂಸದ ಸ್ಮಾರ್ಟ್‌ಫೋನಲ್ಲಿ ಪೋರ್ನ್ ನೋಡುವಾಗ ಸಿಕ್ಕಿಬಿದ್ದಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ಬಜೆಟ್ ಓದಿ ಹೇಳುತ್ತಿದ್ದ ಸಂದರ್ಭ ಸಂಸದ ತಲ್ಲೀನರಾಗಿ ಪೋರ್ನ್ ನೋಡಿದ್ದಾರೆ.

ಕೌನ್ಸಿಲ್ ಮೀಟಿಂಗ್ ಮಧ್ಯೆ ದಂಪತಿಯ ಸೆಕ್ಸ್: ಕ್ಯಾಮೆರಾ ಆಫ್ ಮಾಡೋದೇ ಮರೆತ್ರು

ಆಡಳಿತ ಪಕ್ಷ ಪಲಂಗ್ ಪ್ರಚಾರತ್ ಪಕ್ಷ ಅಧಿಕಾರದಲ್ಲಿರುವ ಚೋನಾಬುರಿಯನ್ನು ಪ್ರತಿನಿಧಿಸುವ ಸಂಸದ ರೊನ್ನತೆಪ್ ಅನುವಟ್ ಪೋರ್ನ್ ನೋಡುವುದನ್ನು ಪತ್ರಕರ್ತರು ಸೆರೆ ಹಿಡಿದಿದ್ದಾರೆ.

ಸಂಸತ್ತಿನ ಗ್ಯಾಲರಿಯಲ್ಲಿ ಕುಳಿತ ಸಂಸದ ಮೊಬೈಲ್‌ನಲ್ಲಿ ಪೋರ್ನ್ ಸ್ಕ್ರಾಲ್ ಮಾಡುತ್ತಿದ್ದರು. ಸುಮಾರು 10 ನಿಮಿಷ ಪೋರ್ನ್ ನೋಡಿದ್ದೂ ಅಲ್ಲದೆ ಕ್ಲಾರಿಟಿಗಾಗಿ ಹತ್ತಿರದಿಂದ ನೋಡಲು ತಮ್ಮ ಮಾಸ್ಕ್ ತೆಗೆದಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಝೂಮ್‌ ಮೀಟಿಂಗ್‌ ವೇಳೆ ಕಾರ್ಯದರ್ಶಿಯೊಂದಿಗೆ ಸರ್ಕಾರಿ ಅಧಿಕಾರಿ ರಾಸಲೀಲೆ!

ಲೈನ್ ಮೆಸೇಜಿಂಗ್ ಎಪ್ಲಿಕೇಷನ್‌ನಲ್ಲಿ ಫೋಟೋಸ್ ಬಂದಿತ್ತು. ಮಹಿಳೆಯೊಬ್ಬರು ನೆರವು ಮತ್ತು ಹಣಕ್ಕಾಗಿ ಕೇಳುತ್ತಿದ್ದರು ಎಂದು ಸಂಸದ ಹೇಳಿದ್ದಾರೆ. ಗ್ಯಾಂಗ್‌ಸ್ಟರ್‌ಗಳಿಂದ ತೊಂದರೆಗೊಳಗಾದ ಮಹಿಳೆಗೆ ಅಪಾಯವೇನೂ ಆಗಿಲ್ಲ ಎಂಬುದನ್ನು ದೃಢೀಕರಿಸುವುದಕ್ಕೆ ಹತ್ತಿರದಿಂದ ನೋಡುತ್ತಿದ್ದೆ. ಆಕೆಯನ್ನು ಫೋಟೋ ತೆಗೆಯಲು ಬಲವಂತ ಮಾಡಲಾಗಿತ್ತು ಎಂದಿದ್ದಾರೆ. ಆಕೆಗೆ ಹಣ ಬೇಕು ಎಂದು ಗೊತ್ತಾಗುತ್ತಿದ್ದಂತೆ ಫೋಟೋ ಡಿಲೀಟ್ ಮಾಡಿದ್ದಾಗಿ ಸಂಸದ ಹೇಳಿದ್ದಾರೆ.

ಸರ್ಕಾರಿ ಅಧಿಕಾರಿಗಳು ಘಟನೆಗೆ ಸಂಬಂಧಿಸಿ ಸಂಸದರಿಂದ ಸ್ಪಷ್ಟನೆ ಕೇಳಿದ್ದಾರೆ. ಆದರೆ ಸಂಸತ್ತಿನಲ್ಲಿದ್ದ ಯಾರೊಬ್ಬರೂ ದೂರು ದಾಖಲಿಸದ ಹೊರತಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾದ್ಯವಿಲ್ಲ ಎನ್ನಲಾಗಿದೆ. ಸ್ಪೀಕರ್ ಚೌನ್ ಲೀಕ್‌ಪೈ ಈ ಬಗ್ಗೆ ಪ್ರತಿಕ್ರಿಯಿಸಿ, ಅದು ವೈಯಕ್ತಿಕ ವಿಚಾರ, ಅದನ್ನು ವ್ಯಕ್ತಿ ಮತ್ತು ಇತರ ಕರ್ತವ್ಯಗಳ ಜೊತೆ ಮಿಕ್ಸ್ ಅಪ್ ಮಾಡಬಾರದು ಎಂದಿದ್ದಾರೆ. 

ವಿಡಿಯೋ ಕಾನ್ಫರೆನ್ಸ್ ವೇಳೆ ಬಟ್ಟೆ ಬಿಚ್ಚಿದ ನಾಯಕಿ, ಸಚಿವರೆಲ್ಲಾ ಶಾಕ್!

ಈ ಹಿಂದೆ ಫಿಲಿಪ್ಪೈನ್ಸ್‌ನ ಅಧಿಕಾರಿಯೊಬ್ಬರು ತಮ್ಮ ಸೆಕ್ರೆಟರಿಯೊಂದಿಗೆ ಸೆಕ್ಸ್ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದರು. ಅಲ್ಲಿದ್ದ ಕ್ಯಾಮೆರಾ ಆನ್ ಆಗಿರುವ ಅರಿವಿಲ್ಲದೆ ಇದ್ದುದರಿಂದ ಘಟನೆ ಲೈವ್ ಲೀಕ್ ಆಗಿತ್ತು. ಮೀಟಿಂಗ್ ನಡೆಯುತ್ತಿದ್ದಾಗಲೇ ವ್ಯಕ್ತಿ ಸೆಕ್ರೆಟರಿ ಜೊತೆ ಕೋಣೆಯ ಮೂಲೆಯಲ್ಲಿ ಸೆಕ್ಸ್ ಮಾಡುತ್ತಿದ್ದ ದೃಶ್ಯ ಸೆರೆಯಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ