ಪತ್ರಿಕಾಗೋಷ್ಠಿ ಮಾಡೋಕೆ ತೆಂಗಿನ ಮರ ಹತ್ತಿದ ಸಚಿವ..!

By Suvarna NewsFirst Published Sep 19, 2020, 4:59 PM IST
Highlights

ಸಚಿವರೊಬ್ಬರು ಸ್ವತಃ ತೆಂಗಿನ ಮರ ಹತ್ತಿದ್ದಾರೆ. ಅದೂ ಪತ್ರಿಕಾಗೋಷ್ಠಿ ನಡೆಸೋದಕ್ಕೆ. ಏನಪ್ಪಾ ಒಂದು ಕೊಠಡಿಯಲ್ಲಿ ಪತ್ರಿಕಾಗೋಷ್ಠಿ ಮಾಡಿದ್ರೆ ಸಾಕಿತ್ತು, ಮರ ಹತ್ತಿದ್ದೇಕೆ ಅಂತೀರಾ..? ಇಲ್ಲಿ ಓದಿ.

ಅಧಿಕಾರದಲ್ಲಿರುವವರಿಗೆ ಮಾಧ್ಯ, ಜನರೊಂದಿಗೆ ಬೆರೆಯಲು ಸುಲಭ ದಾರಿ. ಹಾಗಾಗಿಯೇ ಸಚಿವರೂ, ಮಂತ್ರಿಗಳೂ ಪತ್ರಿಕಾಗೋಷ್ಠಿ ನಡೆಸುತ್ತಲೇ ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾಗೋಷ್ಠಿ, ಪತ್ರಿಕಾ ಹೇಳಿಕೆಗಳೆಲ್ಲ ಸಹಜವಾದದ್ದು. ಪ್ರಜಾಪ್ರಭುತ್ವದಲ್ಲಿ ಪತ್ರಿಕಾಗೋಷ್ಠಿಯನ್ನು ಅಕ್ಷರಶಃ ಇನ್ನಷ್ಟು ಎತ್ತಕ್ಕೆ ಒಯ್ದಿದ್ದಾರೆ ಈ ಸಚಿವ.

ಶ್ರೀಲಂಕಾದಲ್ಲಿ ಸಚಿವರೊಬ್ಬರು ಸ್ವತಃ ತೆಂಗಿನ ಮರ ಹತ್ತಿದ್ದಾರೆ. ಅದೂ ಪತ್ರಿಕಾಗೋಷ್ಠಿ ನಡೆಸೋದಕ್ಕೆ. ಏನಪ್ಪಾ ಒಂದು ಕೊಠಡಿಯಲ್ಲಿ ಪತ್ರಿಕಾಗೋಷ್ಠಿ ಮಾಡಿದ್ರೆ ಸಾಕಿತ್ತು, ಮರ ಹತ್ತಿದ್ದೇಕೆ ಅಂತೀರಾ..? ಇಲ್ಲಿ ಓದಿ.

ತಂಟೆಗೆ ಬಂದ್ರೆ ಹುಷಾರ್, ಚೀನಾಕ್ಕೆ ಗಡಿಯಲ್ಲಿ ಭಾರತದ 'ಡಬಲ್' ಶಾಕ್

ತೆಂಗಿನಕಾಯಿ, ಫಿಶ್‌ಟೇಲ್ ಪಾಮ್, ಪಾಮಿರಾ ಮತ್ತು ರಬ್ಬರ್ ಉತ್ಪನ್ನ ಸಚಿವ ಅರುಂಧಿಕಾ ಫರ್ನಾಂಡೋ ಮಾಧ್ಯಮಗಳ ಜೊತೆ ಮಾತನಾಡಲು ತೆಂಗಿನಮರ ಹತ್ತಿದ್ದಾರೆ. 
ಶ್ರೀಲಂಕಾ ಮತ್ತು ಎಲ್ಲೆಡೆ ತೆಂಗಿನಕಾಯಿ ಬೆಲೆ ಹೆಚ್ಚಳದ ಬಗ್ಗೆ ಮಾತನಾಡಿದ ಸಚಿವ, ಜಾಗತಿಕವಾಗಿ ತೆಂಗಿನಕಾಯಿಗಿರುವ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ತೆಂಗಿನಕಾಯಿ ಬೆಲೆ ಏರಿಕೆಯಾಗಿದೆ ಎಂದಿದ್ದಾರೆ.

ಡಾಂಕೋಟುವಾದಲ್ಲಿ ತನ್ನ ಮನೆಯ ಹಿತ್ತಿಲಿನಲ್ಲಿ ಸಚಿವ ತೆಂಗಿನ ಮರ ಹತ್ತಿದ್ದಾರೆ. ಮರ ಹತ್ತು ಯಂತ್ರದ ನೆರವಿನಿಂದ ಮರ ಹತ್ತಿದ್ದಾರೆ ಎನ್ನಲಾಗಿದೆ. ವರಾಕಪೋಲದ ಒಬ್ಬ ವ್ಯಕ್ತಿ ಮರ ಹತ್ತುವ ಯಂತ್ರ ನಿರ್ಮಿಸಿದ್ದು, ಇದನ್ನು ಸಚಿವರು ಪರೀಕ್ಷಿಸಿದ್ದಾರೆ. ಮುಂದಿನ ತಿಂಗಳಲ್ಲಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಈ ಯಂತ್ರವನ್ನು ಬಿಡುಗಡೆ ಮಾಡುವುದಾಗಿ ಫರ್ನಾಂಡೋ ತಿಳಿಸಿದ್ದಾರೆ.

ಪತ್ನಿಯ ವಿರುದ್ಧ ನಕಲಿ ದೂರು: ಐಪಿಎಸ್‌ ಅಧಿಕಾರಿ ವಿರುದ್ಧ ಗಂಭೀರ ಆರೋಪ!

ತಮರ ಹತ್ತಿ ತೆಂಗಿನ ಕಾಯಿ ಕೊಯ್ದ ಸಚಿವ, ಕಾರ್ಮಿಕರು ತಮ್ಮ ಕೆಲಸಕ್ಕೆ 100 ರೂಪಾಯಿ ಆದಾಯ ಪಡೆಯಬೇಕೆಂದು ಹೇಳಿದ್ದಾರೆ. ಜನರಿಗೆ ಕಡಿಮೆ ಬೆಲೆಗೆ ತೆಂಗಿನ ಕಾಯಿ ಒದಗಿಸುವ ನಿಟ್ಟಿನಲ್ಲಿ ಯೋಜನೆ ತಯಾಸಿದ್ದು ಮುಂದಿನ ದಿನಗಳಲ್ಲಿ ರಿಲೀಸ್ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.

ತೆಂಗಿನಕಾಯಿ ಹೆಕ್ಕಲು ಮತ್ತು ಶೇಂದಿ ತಯಾರಿಸಲು ಕಾರ್ಮಿಕರ ಕೊರತೆ ಇರುವ ಬಗ್ಗೆ ಮಾತನಾಡಿ, ಬೆಲೆ ಹೆಚ್ಚಾಗಿರುವುದರಿಂದ ತೆಂಗಿನಕಾಯಿ ಆಮದು ಮಾಡುವುದಿಲ್ಲ ಎಂದಿದ್ದಾರೆ.

ರಷ್ಯಾದ ಲಸಿಕೆಯಿಂದ ಅಡ್ಡ ಪರಿಣಾಮ, 7ರಲ್ಲಿ ಒಬ್ಬರಿಗೆ ಜ್ವರ!

ಶ್ರೀಲಂಕಾದ ತೆಂಗಿನಕಾಯಿ ಉದ್ಯಮಕ್ಕೆ ಹೊಡೆತ ಬಿದ್ದಿದ್ದು, 2020ರ ಸೆಪ್ಟೆಂಬರ್ 2ನೇ ಹರಾಜಿನಲ್ಲಿ 1000 ತೆಂಗಿನಕಾಯಿಗೆ 52,794 ರೂಪಾಯಿ ಅಂದರೆ ಶೇ1.54 ರಷ್ಟು ಬೆಲೆ ಕುಸಿದಿದೆ.

click me!