
ನವದೆಹಲಿ (ಜು.24) ಐತಿಹಾಸಿಕ, ಪೌರಾಣಿಕ ಹಿಂದೂ ಶಿವನ ದೇವಸ್ಥಾನಕ್ಕಾಗಿ ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ಯುದ್ಧ ಆರಂಭಿಸಿದೆ. ಥಾಯ್ಲೆಂಡ್ ಪ್ರಾಂತ್ಯದ ವಿವಾದಿತ ಗಡಿಯಲ್ಲಿರುವ ಈ ದೇವಸ್ಥಾನ ಕೈವಶ ಮಾಡಲು ಕಾಂಬೋಡಿಯಾ ರಾಕೆಟ್ ದಾಳಿ ನಡೆಸಿದ್ದರೆ, ಇತ್ತ ಥಾಯ್ಲೆಂಡ್ ಕೂಡ ಪ್ರತಿದಾಳಿ ನಡೆಸಿದೆ. ದಾಳಿ ನಿಲ್ಲದೆ ಯಾವುದೇ ಮಾತುಕತೆ ಇಲ್ಲ ಎಂದು ಎರಡೂ ದೇಶಗಳು ಭಾರಿ ಪ್ರಮಾಣದಲ್ಲಿ ರಾಕೆಟ್ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ.ಈ ಪೈಕಿ ಬಹುತೇಕರು ನಾಗರೀಕರು.
ಯುದ್ಧ ಆರಂಭಿಸಿದ್ದು ಯಾರು?
ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ನಡುವೆ ಗಡಿ ವಿವಾದ ಇಂದು ನಿನ್ನೆಯದ್ದಲ್ಲ. ವಿವಾದಿತ ಗಡಿ ಭಾಗದಲ್ಲಿ ಕಾಂಬೋಡಿಯಾ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಜ್ಜುಗೊಳಿಸುತ್ತಿದೆ. ವಿವಾದಿತ ಗಡಿಯಲ್ಲಿ ಕಾಂಬೋಡಿಯಾ ಸೈನ್ಯ ಪಾರುಪತ್ಯ ಸಾಧಿಸಲು ಆರಂಭಿಸಿದೆ ಎಂದು ಥಾಯ್ಲೆಂಡ್ ಸೇನೆ ಭಾರಿ ವಿರೋಧ ವ್ಯಕ್ತಪಡಿಸಿದೆ. ಈ ವಿವಾದ ತಾರಕ್ಕೇರುತ್ತಿದ್ದಂತೆ, ಕಾಂಬೋಡಿಯಾ ರಾಕೆಟ್ ಹಾಗೂ ಆರ್ಟಲರಿ ಮೂಲಕ ಥಾಯ್ಲೆಂಡ್ ಮೇಲೆ ದಾಳಿ ನಡೆಸಿದೆ. ಕಾಂಬೋಡಿಯಾ ನಡೆಸಿದ ಮೊದಲ ರಾಕೆಟ್ ದಾಳಿಯಲ್ಲಿ ಓರ್ವ ನಾಗರೀಕ ಮೃತಪಟ್ಟರೆ, ಕಟುಂಬದ ಮೂೂವರು ಸದಸ್ಯರು, 5 ವರ್ಷದ ಬಾಲಕ ಸೇರಿ ಗಂಭೀರವಾಗಿ ಗಾಯಗೊಂಡಿದ್ದರು.
ಥಾಯ್ ಎಫ್ 16 ಮೂಲಕ ಪ್ರತಿದಾಳಿ
ಕಾಂಬೋಡಿಯಾ ರಾಕೆಟ್ ಹಾಗೂ ಆರ್ಟಿಲರಿ ದಾಳಿ ನಡೆಸುತ್ತಿದ್ದಂತೆ ಥಾಯ್ಲೆಂಡ್ ಸೇನೆ ಎಫ್ 15 ಫೈಟರ್ ಜೆಟ್ ಮೂಲಕ ಪ್ರತಿದಾಳಿ ನಡೆಸಿದೆ. ಎರಡು ಕಾಂಬೋಡಿಯಾ ಮಿಲಿಟರಿ ಕೇಂದ್ರಗಳ ಮೇಲೆ ಥಾಯ್ಲೆಂಡ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಕಾಂಬೋಡಿಯಾ ಯೋಧ ಮೃತಪಟ್ಟಿದ್ದಾನೆ. ಥಾಯ್ಲೆಂಡ್ ಪ್ರತಿ ದಾಳಿ ಹಾಗೂ ಕಾಂಬೋಡಿಯಾ ರಾಕೆಟ್ ದಾಳಿ ತೀವ್ರಗೊಂಡಿದೆ. ಹೀಗಾಗಿ ಥಾಯ್ಲೆಂಡ್ ನಾಗರೀಕರ ಮೇಲೆ ಶೆಲ್ ಬಿದ್ದಿದೆ. ಇದರ ಪರಿಣಾಮ ಥಾಯ್ಲೆಂಡ್‌ನ 10 ಮಂದಿ ಮೃತಪಟ್ಟಿದ್ದಾರೆ.
ಶಿವ ದೇಗುಲಕ್ಕಾಗಿ ಶುರುವಾಗಿದೆ ಯುದ್ಧ
ಥಾಯ್ಲೆಂಡ್ ಪ್ರಾಂತ್ಯದಲ್ಲಿರುವ 1,100 ವರ್ಷ ಹಳೇ ಹಿಂದೂ ಶಿವನ ದೇವಾಲಯಕ್ಕಾಗಿ ಇದೀಗ ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ಯುದ್ಧ ಆರಂಭಿಸಿದೆ. ಪ್ರಮುಖಾಗಿ ಈ ದೇವಸ್ಥಾನ ವಿವಾದಿತ ಗಡಿ ಪ್ರದೇಶದಲ್ಲಿದೆ. ಎರಡೂ ದೇಶಗಳು ಗಡಿ ಗುರುತಿಸಿದ್ದು ಫ್ರೆಂಚ್ ವಸಾಹತು ಕಾಲದಲ್ಲಿ. ಬಳಿಕ ಈ ಗಡಿ ಬಗ್ಗೆ ತಕರಾರರು, ವಿವಾದ, ದಾಳಿಗಳು ನಡೆಯುತ್ತಲೇ ಇದೆ. ಪ್ರಮುಖವಾಗಿ 2008ರಲ್ಲಿ ಕಾಂಬೋಡಿಯಾ ಈ ಗಡಿ ಪ್ರದೇಶದಲ್ಲಿರುವ ಶಿವನ ದೇವಾಲಯವನ್ನು ತನ್ನದು ಎಂದು ನೋಂದಣಿ ಮಾಡಿಕೊಳ್ಳಳು ಮುಂದಾಗಿತ್ತು. ಯುನೆಸ್ಕೋ ಪಟ್ಟಿಯಲ್ಲಿದ್ದ ಈ ದೇಗುಲ, ಥಾಯ್ಲೆಂಡ್ ವಿವಾದಿತ ಪ್ರಾಂತ್ಯದಲ್ಲಿದೆ. ಹೀಗಾಗಿ 2008ರಲ್ಲಿ ಭಾರಿ ಪ್ರತಿರೋಧಗಳು ವ್ಯಕ್ತವಾಗಿತ್ತು. 2011ರಲ್ಲಿ ಉಭಯ ದೇಶಗಳ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದರು. ಇದಾದ ಬಳಿಕ ಗಡಿಯಲ್ಲಿ ದಾಳಿ ಪ್ರತಿದಾಳಿಗಳು ನಡೆಯುತ್ತಲೇ ಇದೆ. ಈ ಪ್ರದೇಶದಲ್ಲಿ ಹಲವು ಹಿಂದೂ ದೇವಾಲಯಗಳಿವೆ. ಇದನ್ನು ಕೈವಶ ಮಾಡಲು ಕಾಂಬೋಡಿಯಾ ಪ್ರಯತ್ನ ಮಾಡುತ್ತಲೇ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ