
ವುಹಾನ್[ಫೆ.03]: ಕೊರೋನಾ ವೈರಸ್‌ಗೆ ತುತ್ತಾಗಿರುವ ಸಾವಿರಾರು ರೋಗಿಗಳ ತ್ವರಿತ ಚಿಕಿತ್ಸೆಗಾಗಿ ಚೀನಾದಲ್ಲಿ ಕೇವಲ 10 ದಿನಗಳಲ್ಲಿ ಅತ್ಯಾಧುನಿಕ ಆಸ್ಪತ್ರೆಯೊಂದನ್ನು ನಿರ್ಮಿಸಲಾಗಿದ್ದು, ಸೋಮವಾರ ಅದರ ಉದ್ಘಾಟನೆಗೆ ಸಿದ್ಧತೆ ನಡೆದಿದೆ.
ವಿಶ್ವದೆಲ್ಲೆಡೆ ಚೀನಿ ಪ್ರವಾಸಿಗರಿಗೆ ನಿಷೇಧ: ರೆಸ್ಟೋರೆಂಟ್‌ಗಳಿಗೂ ಪ್ರವೇಶವಿಲ್ಲ!
ಪೂರ್ವ ನಿರ್ಮಿತ ಗೋಡೆಗಳ ರಚನೆ ಮೂಲಕ 25 ಸಾವಿರ ಚದರಡಿಯಲ್ಲಿ ಈ ಆಸ್ಪತ್ರೆ ನಿರ್ಮಿಸಲಾಗಿದೆ. 100ಕ್ಕೂ ಹೆಚ್ಚು ಭಾರೀ ಸಾಮರ್ಥ್ಯದ ಯಂತ್ರಗಳು ಮತ್ತು 4000ಕ್ಕೂ ಹೆಚ್ಚು ಕಾರ್ಮಿಕರ ಸತತ ಪರಿಶ್ರಮದಿಂದಾಗಿ ತ್ವರಿತ ಅವಧಿಯಲ್ಲಿ ಆಸ್ಪತ್ರೆಗೆ ನಿರ್ಮಾಣಗೊಂಡಿದೆ. ಕಾರ್ಮಿಕರಿಗೆ ಸಾಮಾನ್ಯಕ್ಕಿಂತ 3 ಪಟ್ಟು ಹೆಚ್ಚು ವೇತನ ಕೊಟ್ಟು ಈ ಕೆಲಸಕ್ಕೆ ಬಳಸಿಕೊಳ್ಳಲಾಗಿತ್ತು.
ವಿಶ್ವದೆಲ್ಲೆಡೆ ಚೀನಿ ಪ್ರವಾಸಿಗರಿಗೆ ನಿಷೇಧ: ರೆಸ್ಟೋರೆಂಟ್‌ಗಳಿಗೂ ಪ್ರವೇಶವಿಲ್ಲ!
ಈ ಆಸ್ಪತ್ರೆ 1000 ಬೆಡ್ ಸಾಮರ್ಥ್ಯ ಹೊಂದಿದೆ. ಕೊರೋನಾಕ್ಕೆ ತುತ್ತಾಗಿರುವವರ ಚಿಕಿತ್ಸೆಗೆ ಅನುಕೂಲವಾಗಲೆಂದು ಈ ರೋಗದ ಕೇಂದ್ರ ಸ್ಥಾನ ವುಹಾನ್ ಮತ್ತು ಹುಬೇ ಪ್ರಾಂತ್ಯದ ಭಾಗದಲ್ಲೇ ಈ ಆಸ್ಪತ್ರೆ ತಲೆ ಎತ್ತಿದೆ. ಅಷ್ಟೇ ಅಲ್ಲದೆ, ಹುಬೇ ಸರ್ಕಾರ ಮತ್ತೊಂದು ಪ್ರತ್ಯೇಕ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದು, 1600 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆ ಬುಧವಾರ ಕಾರ್ಯಪ್ರವೃತ್ತವಾಗಲಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ