
ವಾಷಿಂಗ್ಟನ್: ಅಮೆರಿಕದ ಕೆಲ ಭಾಗಗಳು, ಅದರಲ್ಲೂ ವಿಶೇಷವಾಗಿ ಟೆಕ್ಸಾಸ್‌ನ ಡಲ್ಲಾಸ್‌ನ ಮಾಲ್‌ಗಳು ಪಾಕಿಸ್ತಾನದಂತೆ ಕಾಣುತ್ತಿವೆ ಎಂದು ರಿಪಬ್ಲಿಕನ್ ಸಂಸದ ಬ್ರಾಂಡನ್ ಗಿಲ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಗಿಲ್, ‘ಅಮೆರಿಕದ ಹಲವು ಕಡೆ ಮಸೀದಿಗಳು ಒಂದರಮೇಲೊಂದರಂತೆ ತಲೆಯೆತ್ತುತ್ತಿವೆ. ಕೆಲವು ಕಡೆಗಳಲ್ಲಿ ಮಾಲ್‌ಗಳಿಗೆ ಹೋದರೆ ನೀವು ಡಲ್ಲಾಸ್‌ನಲ್ಲಿ ಇದ್ದೀರೋ ಅಥವಾ ಪಾಕಿಸ್ತಾನದಲ್ಲಿದ್ದೀರೋ ಎಂದು ತಿಳಿಯುವುದಿಲ್ಲ.
ನಾವು ತಿಳಿದಿರುವ ಮತ್ತು ಪ್ರೀತಿಸುವ ಅಮೆರಿಕವನ್ನು ಸಾಮೂಹಿಕ ಇಸ್ಲಾಮಿಕ್ ವಲಸೆಯು ಕೊಲ್ಲುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ತಲೆತಲೆ ಮಾರುಗಳಿಂದ ನಾವು ಮತ್ತು ನಮ್ಮ ಕುಟುಂಬ ವರ್ಗ ವಾಸಿಸುತ್ತಿದ್ದ ಜಾಗದಲ್ಲೆಲ್ಲಾ ಇದೀಗ ಭಾರೀ ಪ್ರಮಾಣದ ಮಸೀದಿಗಳು ತಲೆ ಎತ್ತಿವೆ ಎಂದು ನನ್ನ ಕ್ಷೇತ್ರದ ವ್ಯಾಪ್ತಿಯ ಜನರು ಮಾತನಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ