ಉಕ್ರೇನ್‌ ಯುದ್ಧ ಅಂತ್ಯಕ್ಕೆ ಟ್ರಂಪ್‌ ಜೂನ್ ಗಡುವು

Kannadaprabha News   | Kannada Prabha
Published : Feb 08, 2026, 07:24 AM IST
 Donald Trump

ಸಾರಾಂಶ

ಕಳೆದ 4 ವರ್ಷಗಳಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್‌ ಸಂಘರ್ಷಕ್ಕೆ ಅಂತ್ಯ ಹಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎರಡೂ ದೇಶಗಳಿಗೆ ಜೂನ್‌ ತನಕ ಗಡುವು ನೀಡಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ.

ಕೀವ್‌: ಕಳೆದ 4 ವರ್ಷಗಳಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್‌ ಸಂಘರ್ಷಕ್ಕೆ ಅಂತ್ಯ ಹಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎರಡೂ ದೇಶಗಳಿಗೆ ಜೂನ್‌ ತನಕ ಗಡುವು ನೀಡಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ.

ಈ ಬೇಸಿಗೆ ಆರಂಭದೊಳಗೆ ಯುದ್ಧವನ್ನು ಕೊನೆಗೊಳಿಸಲು ಸೂಚಿಸಿದೆ

ಶನಿವಾರ ಅವರು ಮಾತನಾಡಿ, ‘ಈ ಬೇಸಿಗೆ ಆರಂಭದೊಳಗೆ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಇಬ್ಬರಿಗೂ ಸೂಚಿಸಿದೆ. ಎಲ್ಲವನ್ನೂ ಜೂನ್‌ ಒಳಗೆ ಮುಗಿಸುವಂತೆ ಹೇಳಿದ್ದಾರೆ. ಒಂದು ವೇಳೆ ಗಡುವಿನೊಳಗೆ ಯುದ್ಧ ಕೊನೆಗೊಳಿಸದಿದ್ದರೆ ಅವರು ಒತ್ತಡ ಹೇರಲಿದ್ದಾರೆ’ ಎಂದಿದ್ದಾರೆ.

ಯುದ್ಧ ಅಂತ್ಯ ಸಂಬಂಧ ಮುಂದಿನ ಹಂತದ ತ್ರಿಪಕ್ಷೀಯ ಸಭೆ

‘ಜೊತೆಗೆ ಯುದ್ಧ ಅಂತ್ಯ ಸಂಬಂಧ ಮುಂದಿನ ಹಂತದ ತ್ರಿಪಕ್ಷೀಯ ಸಭೆಯನ್ನು ಮಿಯಾಮಿಯಲ್ಲಿ ಆಯೋಜಿಸಲಾಗಿದೆ. ಅದರಲ್ಲಿ ನಮ್ಮ ಭಾಗವಹಿಸುವಿಕೆ ಖಚಿತಪಡಿಸಿದ್ದೇವೆ’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವಾಸವೇ ಇಂದು ಭಾರತದ ಶಕ್ತಿಶಾಲಿ ಕರೆನ್ಸಿ : ಪಿಎಂ ಮೋದಿ
ಗಲ್ವಾನ್‌ ಸಂಘರ್ಷ ಬಳಿಕ ಚೀನಾ ರಹಸ್ಯ ಅಣು ಪರೀಕ್ಷೆ: ಅಮೆರಿಕ!