ಸತ್ತಿದ್ದಾನೆ ಎಂದೇ ನಂಬಿದ್ದ ಒಸಾಮಾ ಬಿನ್ ಲಾಡೆನ್ ಪುತ್ರ ಜೀವಂತ, ಅಲ್ ಖೈದಾಗೆ ಮರು ಜೀವ!

By Chethan Kumar  |  First Published Sep 13, 2024, 8:53 PM IST

ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಹತ್ಯೆ ಮಿಷನ್‌ನಲ್ಲಿ ಅಮೆರಿಕ ಪಡೆ ಲಾಡೆನ್ ಪುತ್ರನನ್ನೂ ಹತ್ಯೆ ಮಾಡಿದೆ ಎಂದಿತ್ತು. ಆದರೆ ಲಾಡೆನ್ ಪುತ್ರ ಜೀವಂತವಾಗಿದ್ದಾನೆ. ಅಲ್ ಖೈದಾ ಉಗ್ರ ಸಂಘಟನೆಗೆ ಮರು ಜೀವ ನೀಡಿದ್ದು, ಮತ್ತೊಂದು 9/11 ದಾಳಿ ಆತಂಕ ಎದುರಾಗಿದೆ.
 


ವಾಶಿಂಗ್ಟನ್(ಸೆ.13) ಅಮೆರಿಕ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಅಲ ಖೈದಾ ಉಗ್ರ ಸಂಘಟನೆ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ನಡೆಸಿದ ಭೀಕರ ದಾಳಿಗೆ ಜಗತ್ತೆ ಬೆಚ್ಚಿ ಬಿದ್ದಿತ್ತು. ಈ ದಾಳಿಯಲ್ಲಿ ಬರೋಬ್ಬರಿ 2,996 ಮಂದಿ ಮೃತಪಟ್ಟಿದ್ದಾರೆ. ಎರಡು ವಿಮಾನ ಹೈಜಾಕ್ ಮಾಡಿ ಕಟ್ಟಡಕ್ಕೆ ನುಗ್ಗಿಸಿ ದಾಳಿ ನಡೆಸಲಾಗಿತ್ತು. ಈ ದಾಳಿಗೆ ಪಾಠ ಕಲಿಸಲು ಅಮೆರಿಕ ಒಸಾಮಾ ಬಿನ್ ಲಾಡೆನ್ ಪತ್ತೆ ಹಚ್ಚಿ ಹತ್ಯೆ ಮಾಡಿತ್ತು. ಇದೇ ವೇಳೆ ಒಸಾಮಾ ಬಿನ್ ಪುತ್ರ ಹಮ್ಜಾ ಬಿನ್ ಲಾಡೆನ್‌ನನ್ನೂ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಪಡೆ ಹೇಳಿತ್ತು. ಆದರೆ ಹಮ್ಜಾ ಬಿನ್ ಲಾಡೆನ್ ಜೀವಂತವಾಗಿದ್ದಾನೆ. ಸೊರಗಿದ್ದ ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ಮರು ಜೀವ ನೀಡಿದ್ದಾರೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಅಮೆರಿಕಾಗೆ ಮತ್ತೊಂದು  9/11 ದಾಳಿ ಆತಂಕ ಹೆಚ್ಚಾಗಿದೆ.

2019ರಲ್ಲಿ ಅಮೆರಿಕ ಪಡೆ ಮಾಡಿದ ಏರ್ ಸ್ಟ್ರೈಕ್‌ನಲ್ಲಿ ಹಮ್ಜಾ ಬಿನ್ ಲಾಡೆನ್ ಮೃತಪಟ್ಟಿದ್ದಾನೆ ಎಂದು ಖಚಿತಪಡಿಸಿತ್ತು. ಆದರೆ ಮಿರರ್ ವರದಿ ಪ್ರಕಾರ ಹಮ್ಜಾ ಬಿನ್ ಲಾಡೆನ್ ಸತ್ತಿಲ್ಲ. 2021ರಲ್ಲಿ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾದ ಬೆನ್ನಲ್ಲೇ ಅಲ್ ಖೈದಾ ಮತ್ತೆ ಚಿಗುರಿಕೊಂಡಿದೆ. ಅಮೆರಿಕ ಪಡೆಗಳ ಕಣ್ತಪ್ಪಿಸಿ ರಹಸ್ಯ ಸ್ಥಳದಲ್ಲಿದ್ದ ಹಮ್ಜಾ ಬಿನ್ ಲಾಡೆನ್ ಹಾಗೂ ಆತನ ಸಹೋದರ ಅಬ್ದುಲ್ಲಾ ಬಿನ್ ಲಾಡೆನ್ ಇಬ್ಬರು ಇದೀಗ ಅಲ್ ಖೈದಾಗೆ ಮರು ಜೀವ ನೀಡಿದ್ದಾರೆ. 

Tap to resize

Latest Videos

undefined

ಹಳಿ ಮೇಲೆ ಸಿಲಿಂಡರ್, ಪೆಟ್ರೋಲ್ ಬಾಂಬ್ ಇರಿಸಿ ರೈಲು ಸ್ಪೋಟಕ್ಕೆ ಯುತ್ನ; ತಪ್ಪಿದ ಭಾರೀ ಅನಾಹುತ

ಅಫ್ಘಾನಿಸ್ತಾನದ ಭಯೋತ್ಪಾದಕರ ತಾಣ ಎಂದೇ ಗುರುತಿಸಿಕೊಂಡಿರುವ ಜಲಾಲಾಬಾದ್‌ನಲ್ಲಿ ಹಮ್ಜಾ ಬಿನ್ ಲಾಡೆನ್ ವಾಸವಾಗಿದ್ದಾನೆ. ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಜೊತೆ ಸತತ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾನೆ ಎಂದು ವರದಿಯಾಗಿದೆ. ಅಲ್ ಖೈದಾ ಪುನರ್ಜನ್ಮಕ್ಕೆ ತಾಲಿಬಾನ್ ಸರ್ಕಾರ ಕೂಡ ನೆರವು ನೀಡಿದೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ.

ಬಿನ್ ಲಾಡೆನ್ ಕುಟುಂಬದ ಹಲವು ಸದಸ್ಯರು ಸುರಕ್ಷಿತವಾಗಿದ್ದಾರೆ. ಇವರಿಗೆ ತಾಲಿಬಾನ್ ರಕ್ಷಣೆ ನೀಡುತ್ತಿದೆ. ಇದರ ನಡುವೆ ಅಲ್ ಖೈದಾ ಭಾರಿ ಸಭೆಗಳನ್ನು ನಡಸುತ್ತಿದೆ. ವಿವಿಧ ಮೂಲಗಳಿಂದ ಆರ್ಥಿಕತೆಯನ್ನೂ ಬಲಪಡಿಸಿಕೊಳ್ಳುತ್ತಿದೆ ಎಂದು ಇಂಟಲಿಜೆನ್ಸ್ ವರದಿ ಮಾಡಿದೆ. ಅಲ್ ಖೈದಾ ಸಂಘಟನೆ ಮತ್ತೆ ಮೈಕೊಡವಿ ನಿಂತುಕೊಳ್ಳುತ್ತಿರುವುದು, ಅದರಲ್ಲೂ ಮುಖ್ಯವಾಗಿ ಬಿನ್ ಲಾಡೆನ್ ಪುತ್ರರೇ ಅಲ್ ಖೈದಾ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಂಡಿರುವುದು ಅಮೆರಿಕ ಆತಂಕ ಹೆಚ್ಚಿಸಿದೆ. ಮತ್ತೆ ಟ್ವಿನ್ ಟವರ್ ಮೇಲಿನ ದಾಳಿಗೆ ಹೊಂಚು ಹಾಕಿರುವ ಸಾಧ್ಯತೆಯನ್ನು ಅಮೆರಿಕ ಮನಗಂಡಿದೆ.

ಅಫ್ಘಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ಅಲ್ ಖೈದಾ ಶಕ್ತಿಯುತವಾಗಿ ಬೆಳೆದಿದೆ. ಜೊತೆಗೆ ತಾಲಿಬಾನ್ ನೆರವು ಇರುವ ಕಾರಣ ಈ ಬಾರಿ ಅಲ್ ಖೈದಾ ದಾಳಿ ಮಾಡಿದರೆ ಇದರ ಸಾವು ನೋವು ನಷ್ಟದ ಪ್ರಮಾಣ ಊಹಿಸಲು ಸಾಧ್ಯವಾಗದು ಎಂದೇ ಹೇಳಲಾಗುತ್ತಿದೆ. 

ಉಗ್ರರ ಹೆಸರು ಭೋಲಾ, ಶಂಕರ್! ಹಿಂದೂಗಳ ಪ್ರತಿಭಟನೆಗೆ ಕೊನೆಗೂ ಸತ್ಯ ರಿವೀಲ್​ ಮಾಡಿದ ನೆಟ್​ಫ್ಲಿಕ್ಸ್​
 

click me!