
ಸಿರಿಯಾ(ಮಾ.01): ಐಸಿಸ್ ಉಗ್ರರರ ಸದಬಡಿಯಲು ಅದೆಷ್ಟೇ ದಾಳಿ ನಡೆದರೂ ಐಸಿಸ್ ಸಂಘಟನೆ ಮತ್ತೆ ಮತ್ತೆ ಬಲಗೊಳಿಸಲು ಪ್ರಯತ್ನಗಳು ನಡೆಯುುತ್ತಲೇ ಇದೆ. ಇದೀಗ ಐಸಿಸ್ ಉಗ್ರರ ಸಂಖ್ಯೆ ಕಡಿಮೆಯಾಗುತ್ತಿದೆ ಅನ್ನುವಷ್ಟರಲ್ಲೇ ಐಸಿಸ್ ಭಯಾನಕ ಪ್ಲಾನ್ ಮಾಡಿದೆ. ಐಸಿಸ್ ಉಗ್ರರ ಕ್ಯಾಂಪ್‌ನಲ್ಲಿ ಮಹಿಳೆಯರೂ ಇದ್ದಾರೆ. ಹಲವರು ಸ್ವಯಂ ಪ್ರೇರಿತರಾಗಿ ಐಸಿಸ್ ಗುಂಪು ಸೇರಿಕೊಂಡಿದ್ದರೆ, ಮತ್ತೆ ಕೆಲವರನ್ನು ಒತ್ತಾಯಪೂರ್ವಕವಾಗಿ ಹಿಡಿದಿಡಲಾಗಿದೆ. ಈ ಮಹಿಳೆಯರು ಇಷ್ಟು ದಿನ ಐಸಿಸ್ ಉಗ್ರರ ಲೈಂಕಿಗ ಬಯಕೆ ಈಡೇರಿಸುವ ವಸ್ತುಗಳಾಗಿದ್ದರು. ಹಲವು ಮಹಿಳೆಯರನ್ನು ಐಸಿಸ್ ಕಮಾಂಡರ್ಸ್ ಪ್ರತ್ಯೇಕವಾಗಿ ಬಳಕೆ ಮಾಡುತ್ತಿದ್ದಾರೆ. ಇದೀಗ ಐಸಿಸ್ ಕ್ಯಾಂಪ್‌ನಲ್ಲಿರುವ 10,000ಕ್ಕೂ ಹೆಚ್ಚು ಮಹಿಳೆಯರಿಗೆ ಹೊಸ ಟಾಸ್ಕ್ ನೀಡಲಾಗಿದೆ. ಐಸಿಸ್ ಉಗ್ರರ ಸಂಖ್ಯೆ ಹೆಚ್ಚಿಸವು ಟಾಸ್ಕ್ ನೀಡಲಾಗಿದೆ. ಇದಕ್ಕಾಗಿ ಐಸಿಸ್ ಮಹಿಳೆಯರು ಇದೀಗ 13 ರಿಂದ 18ರ ವರ್ಷದೊಳಗಿನ ಬಾಲಕರನ್ನು ಲೈಂಗಿಕ ಗುಲಾಮರಂತೆ ಬಳಸಿಕೊಳ್ಳುತ್ತಿದ್ದಾರೆ.
ಐಸಿಸ್ ಉಗ್ರ ಕ್ಯಾಂಪ್‌ನಲ್ಲಿರುವ ಹೆಣ್ಣುಮಕ್ಕಳು ಇದೀಗ ಮಕ್ಕಳೊಂದಿಗೆ ಸೆಕ್ಸ್ ಮಾಡಿ ಗರ್ಭಧರಿಸುತ್ತಿದ್ದಾರೆ. 13 ವರ್ಷದ ಅಹಮ್ಮತ್ 14 ವರ್ಷದ ಹಮೀದ್‌ನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಸಿರಿಯಾದಲ್ಲಿನ ಕ್ಯಾಂಪ್ ಆಲ್ ಹೊಲ್ ಪ್ರವೇಶಿಸಿದ ಭದ್ರತಾ ಸಿಬ್ಬಂದಿಗಳು ಅಲ್ಲಿನ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ. ಐಸಿಸ್ ಸಿರಿಯಾದ ಹಲವು ಭಾಗಗಳಲಲಿ ಸಣ್ಣ ಸಣ್ಣ ಕ್ಯಾಂಪ್ ಮಾಡಿದೆ. ಈ ಕ್ಯಾಂಪ್‌ಗಳಲ್ಲಿ ಮಹಿಳೆಯರು ಇದ್ದಾರೆ. ಇದೀಗ ಇವರು ಬಾಲಕರನ್ನು ಕರೆಯಿಸಿ ಒತ್ತಾಯಪೂರ್ವಕವಾಗಿ ಸೆಕ್ಸ್ ಮಾಡುತ್ತಿದ್ದಾರೆ. ಅಲ್ಲಿನ ಭದ್ರತಾ ಸಿಬ್ಬಂದಿ ಬಳಿ ತಮ್ಮನ್ನು ನರಕ ಕೂಪದಿಂದ ಹೊರತರಲು ಮನವಿ ಅಹಮ್ಮತ್ ಹಾಗೂ ಹಮೀದ್ ಮಾಡಿದ್ದಾರೆ. ಈ ಕುರಿತು ಮಾಹಿತಿ ಕೇಳಿದಾಗ ಭಯಾನ ಕತೆ ಬಿಚ್ಚಿಟ್ಟಿದ್ದಾರೆ.
ಐಸಿಸ್, ಖೈದಾಗೆ ಫ್ರೆಂಚ್ ಅನುವಾದಕ ಆಗಿದ್ದ ಬೆಂಗಳೂರಲ್ಲಿ ಸಿಕ್ಕ ಶಂಕಿತ ಉಗ್ರ!
2019ರಲ್ಲಿ ಸಿರಿಯಾ ಸರ್ಕಾರದ ವಿರುದ್ದ ಗೆಲುವು ಸಾಧಿಸಿದ ಐಸಿಸ್ ಉಗ್ರರು ಅಟ್ಟಹಾಸ ಮೆರೆದಿದ್ದರು. ಈ ವೇಳೆ 8,000ಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಕ್ಕಳನ್ನು ಒತ್ತೆಯಾಳಾಗಿ ಇಟ್ಟುಕೊಂಡ ಐಸಿಸಿ ಕಾಮತೃಷೆಗೆ ಬಳಸಿಕೊಂಡಿತ್ತು. ಹಲವು ಮಕ್ಕಳು ಹೊರಜಗತ್ತು ನೋಡವು ಮೊದಲೇ ಪ್ರಾಣ ತ್ಯಾಗ ಮಾಡಬೇಕಾಯಿತು. ಇನ್ನು ಭಾರತ ಸೇರಿದಂತೆ ಹಲವು ದೇಶಗಳಿಂದ ಮಹಿಳೆಯರು ಹಾಗೂ ಪುರುಷರು ಐಸಿಸ್ ಸೇರಿಕೊಂಡಿದ್ದಾರೆ. ಐಸಿಸ್ ಸೇರಿಕೊಂಡ ಹಾಗೂ ಐಸಿಸ್‌ನಲ್ಲಿ ಬಂಧಿಯಾಗಿರುವ ಮಹಿಳೆಯರು ಇದೀಗ ಬಾಲಕರನ್ನು ಒತ್ತಾಯಪೂರ್ವಕವಾಗಿ ಸೆಕ್ಸ್‌ಗೆ ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಉಗ್ರರ ಜನಸಂಖ್ಯೆ ಹೆಚ್ಚಿಸುವು ಪ್ರಯತ್ನ ನಡೆಯುತ್ತಿದೆ.
ತಾಯಿ-ಮಗಳು ಇಬ್ಬರೊಂದಿಗೂ ಮಾಲೀಕ ಲೈಂಗಿಕ ಸಂಬಂಧ ಇಟ್ಟುಕೊಳ್ಳಬಹುದು, ಐಸಿಸ್ ಫತ್ವಾ!
ಈ ಕ್ಯಾಂಪ್ ಗುಹೆಯೊಳಗಡೆ ಹಲವು ಸುರಂಗ ಮಾಡಲಾಗಿದೆ. ಇಲ್ಲಿ ಹಲವು ಮಹಿಳೆಯರನ್ನು ಹೂತು ಹಾಕಲಾಗಿದೆ. ಈ ಕ್ಯಾಂಪ್‌ನಿಂದ ಕೆಲ ಬಾಲಕರನ್ನು ರಕ್ಷಿಸಲಾಗಿದೆ. ಐಸಿಸ್ ಒತ್ತೆಯಾಳಾಗಿ ಇಟ್ಟುಕೊಂಡ ಮಹಿಳೆಯರ ಮಕ್ಕಳನ್ನು ಇದೀಗ ಈ ರೀತಿ ಲೈಂಗಿಕ ಗುಲಾಮರಂತೆ ಬಳಸಲಾಗುತ್ತಿದೆ. ಮಕ್ಕಳಿಗೆ ವಯಾಗ್ರ ನೀಡಲಾಗುತ್ತದೆ. ಬಳಿಕ ಐಸಿಸ್ ಮಹಿಳೆಯರು ಸೆಕ್ಸ್‌ಗಾಗಿ ಬಳಕೆ ಮಾಡಿಕೊಂಡು ಗರ್ಭದರಿಸುತ್ತಿದ್ದಾರೆ. ಹಲವು ಬಾಲಕರು ವಯಾಗ್ರ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದಾರೆ. ಹಲವರ ಆರೋಗ್ಯ ಗಂಭೀರವಾಗಿದೆ. ಸಿರಿಯಾದಲ್ಲಿನ ಐಸಿಸ್ ಕ್ಯಾಂಪ್‌ಗಳಲ್ಲಿನ ಹಲವು ಮಹಿಳೆಯರು ಗರ್ಭಧರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ