ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಅಸ್ಟ್ರೇಲಿಯಾ ಪೊಲೀಸರು..!

By BK Ashwin  |  First Published Mar 1, 2023, 10:43 AM IST

ಅಧಿಕಾರಿಗಳು ಪ್ರತಿಕ್ರಿಯಿಸಲು ಕೆಲವೇ ಸೆಕೆಂಡುಗಳ ಸಮಯ ಹೊಂದಿದ್ದರು ಮತ್ತು ಅಹ್ಮದ್‌ಗೆ ಗುಂಡು ಹಾರಿಸುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಸಹಾಯಕ ಕಮಿಷನರ್ ಸ್ಟುವರ್ಟ್ ಸ್ಮಿತ್ ಹೇಳಿದ್ದಾರೆ. 


ಸಿಡ್ನಿ (ಮಾರ್ಚ್‌ 1, 2023): ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಆಸ್ಟ್ರೇಲಿಯದ ಸಿಡ್ನಿ ರೈಲ್ವೇ ನಿಲ್ದಾಣದಲ್ಲಿ ಕ್ಲೀನರ್‌ಗೆ ಚಾಕುವಿನಿಂದ ಇರಿದ ಮತ್ತು ಕಾನೂನು ಜಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಮಂಗಳವಾರ ಆಸ್ಟ್ರೇಲಿಯಾ ಪೊಲೀಸರು ಭಾರತೀಯನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ತಮಿಳುನಾಡು ಮೂಲದ ಈ ವ್ಯಕ್ತಿ ಬ್ರಿಡ್ಜಿಂಗ್ ವೀಸಾದಲ್ಲಿ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

32 ವರ್ಷದ ಮೊಹಮ್ಮದ್ ರಹಮತುಲ್ಲಾ ಸೈಯದ್ ಅಹ್ಮದ್‌ (Mohamed Rahmathullah Syed Ahmed) ಎಂಬಾತನನ್ನು ಸಿಡ್ನಿ ಪೊಲೀಸರು (Sydney Police) ಮಾರಣಾಂತಿಕವಾಗಿ ಗುಂಡು ಹಾರಿಸಿದ್ದಾರೆ ಎಂದು ಭಾರತೀಯ ಕಾನ್ಸುಲೇಟ್ (Indian Consulate) ಗುರುತಿಸಿದೆ. ಈ ಘಟನೆಯು ಅತ್ಯಂತ ಕಳವಳಕಾರಿ ಮತ್ತು ದುರದೃಷ್ಟಕರವಾಗಿದೆ. ನಾವು ಔಪಚಾರಿಕವಾಗಿ ವಿದೇಶಾಂಗ ವ್ಯವಹಾರಗಳು ಮತ್ತು ವ್ಯಾಪಾರ ಇಲಾಖೆ (Department of Foreign Affairs and Trade) , ನ್ಯೂ ಸೌತ್ ವೇಲ್ಸ್ ಕಚೇರಿ (New South Wales Office) ಹಾಗೂ ರಾಜ್ಯ ಪೊಲೀಸ್ ಅಧಿಕಾರಿಗಳೊಂದಿಗೆ ಈ ವಿಚಾರದ ಬಗ್ಗೆ ಚರ್ಚೆ ಕೈಗೆತ್ತಿಕೊಂಡಿದ್ದೇವೆ ಎಂದು ಕಾನ್ಸುಲೇಟ್ ತಿಳಿಸಿದೆ.

Tap to resize

Latest Videos

ಇದನ್ನು ಓದಿ: ಪತ್ನಿ ಮಕ್ಕಳನ್ನು ಕೊಲ್ಲಲು ಹೋಗಿ ತಾನೇ 300 ಅಡಿ ಪ್ರಪಾತಕ್ಕೆ ಬಿದ್ದ NRI

ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಯ ವರದಿಯ ಪ್ರಕಾರ, ಮೊಹಮ್ಮದ್ ರಹಮತುಲ್ಲಾ ಸೈಯದ್ ಅಹ್ಮದ್ ಅವರು ಸಿಡ್ನಿಯ ಔಬರ್ನ್‌ ಠಾಣೆಯಲ್ಲಿ 28 ವರ್ಷದ ಕ್ಲೀನರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ನಂತರ ಅವರನ್ನು ಔಬರ್ನ್‌ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ. ನಂತರ, ಪೊಲೀಸ್ ಠಾಣೆಯಿಂದ ಹೊರಬರುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ತಮಿಳುನಾಡು ಮೂಲದ ವ್ಯಕ್ತಿ ಅವರ ಜತೆ ಮಾತನಾಡುವ ನೆಪದಲ್ಲಿ ಅವರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು ಎಂದು ವರದಿ ತಿಳಿಸಿದೆ.

ಈ ಹಿನ್ನೆಲೆ ಒಬ್ಬರು ಪೊಲೀಸ್‌ ಅಧಿಕಾರಿ, 3 ಗುಂಡುಗಳನ್ನು ಹಾರಿಸಿದ್ದು, ಅದರಲ್ಲಿ ಎರಡು ಗುಂಡು ಮೊಹಮ್ಮದ್ ರಹಮತುಲ್ಲಾ ಸೈಯದ್ ಅಹ್ಮದ್ ಎದೆಗೆ ಹೊಡೆದಿದ್ದಾರೆ. ಹಾಗೆ, ಒಬ್ಬರು ಮಹಿಳಾ ಪ್ರೊಬೇಷನರಿ ಕಾನ್‌ಸ್ಟೆಬಲ್ ತನ್ನ ಟೇಸರ್ ಅನ್ನು ವ್ಯಕ್ತಿ ಮೇಲೆ ಬಳಸಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಅಮೆರಿಕದ ಗೋಲ್ಡನ್‌ ಗೇಟ್‌ ಬ್ರಿಡ್ಜ್‌ಗೆ ಜಿಗಿದು ಮೃತಪಟ್ಟ ಭಾರತ ಮೂಲದ ಯುವಕ..!

ಹಾಗೂ, ಬಳಿಕ ಘಟನಾ ಸ್ಥಳದಲ್ಲಿ ಮೊಹಮ್ಮದ್ ರಹಮತುಲ್ಲಾ ಸೈಯದ್ ಅಹ್ಮದ್‌ಗೆ ಪ್ಯಾರಾಮೆಡಿಕ್ಸ್‌ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ನಂತರ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಮಧ್ಯೆ, ಈ ಹಿಂದೆಯೂ ಮೊಹಮ್ಮದ್ ರಹಮತುಲ್ಲಾ ಸೈಯದ್ ಅಹ್ಮದ್ 5 ಬಾರಿ ಪೊಲೀಸರನ್ನು ಭೇಟಿಯಾಗಿದ್ದು, ಆದರೆ ಇವೆಲ್ಲವೂ ಅಪರಾಧವಲ್ಲದ ಮತ್ತು COVID-19 ಸಂಬಂಧಿತವಾಗಿವೆ ಎಂದು ವರದಿ ತಿಳಿಸಿದೆ. 

ಇನ್ನು, ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ನ್ಯೂ ಸೌತ್ ವೇಲ್ಸ್ ಪೊಲೀಸ್ ಸಹಾಯಕ ಕಮಿಷನರ್ ಸ್ಟುವರ್ಟ್ ಸ್ಮಿತ್, ಅಧಿಕಾರಿಗಳು ಪ್ರತಿಕ್ರಿಯಿಸಲು ಕೆಲವೇ ಸೆಕೆಂಡುಗಳ ಸಮಯ ಹೊಂದಿದ್ದರು ಮತ್ತು ಅಹ್ಮದ್‌ಗೆ ಗುಂಡು ಹಾರಿಸುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ ಎಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ. "ನಾನು ಈ ಅಧಿಕಾರಿಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಇದು ಆಘಾತಕಾರಿಯಾಗಿದೆ. ನಮ್ಮ ಪೊಲೀಸ್ ಠಾಣೆಯೊಂದರಲ್ಲಿ ಇದೊಂದು ಮಹತ್ವದ ಘಟನೆ’ ಎಂದೂ ಅವರು ಹೇಳಿದರು. ಅಧಿಕಾರಿಗಳಿಗೆ ಗಾಜಿನ ಬಾಗಿಲುಗಳ ಮೂಲಕ ಅಧಿಕಾರಿಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ. ಈ ಹಿನ್ನೆಲೆ ಪೊಲೀಸರು ಪ್ರತಿಕ್ರಿಯಿಸಲು ಬಹಳ ಕಡಿಮೆ ಸಮಯವನ್ನು ಹೊಂದಿದ್ದರು. ಇದು ತಕ್ಷಣದ ಪ್ರತಿಕ್ರಿಯೆ’’ ಎಂದೂ ಅವರು ಹೇಳಿದರು.

ಇದನ್ನೂ ಓದಿ: New York: ಅಗ್ನಿಗೆ ಆಹುತಿಯಾದ ಭಾರತೀಯ ಮೂಲದ ಮಹಿಳಾ ಉದ್ಯಮಿ

ತನಿಖೆಗೆ ಸಹಾಯ ಮಾಡಲು ಭಯೋತ್ಪಾದನಾ ನಿಗ್ರಹ ಘಟಕವನ್ನು ತರಲಾಗುವುದು ಎಂದು ಸ್ಟುವರ್ಟ್ ಸ್ಮಿತ್ ಹೇಳಿದರು ಎಂದೂ ವರದಿಯಲ್ಲಿ ಹೇಳಲಾಗಿದೆ. ಈ ಮಧ್ಯೆ, ಪೊಲೀಸರು ಕ್ಲೀನರ್‌ನೊಂದಿಗೆ ಮಾತನಾಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಈಗ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

click me!