ಭಯೋತ್ಪಾದಕ ಗುಂಪು ಐಸಿಸ್‌ ನಾಯಕ ಅಬು ಹಸನ್ ಅಲ್-ಖುರಾಷಿ ಸಾವು

By Santosh NaikFirst Published Nov 30, 2022, 10:07 PM IST
Highlights

ಕಳೆದ ಮಾರ್ಚ್‌ನಲ್ಲಿ ಭಯೋತ್ಪಾದಕ ಸಂಘಟನೆ ಐಸಿಸ್‌ನ ಖಲೀಫ್‌ ಅಥವಾ ನಾಯಕನಾಗಿ ನೇಮಕಹೊಂಡಿದ್ದ ಅಬು ಹಸನ್‌ ಅಲ್‌-ಖುರಾಷಿ ಸಾವು ಕಂಡಿದ್ದಾರೆ ಎಂದು ಸ್ವತಃ ಐಸಿಸಿ ಖಚಿತ ಪಡಿಸಿದೆ. ಇದು ಹಾಲಿ ವರ್ಷದಲ್ಲಿ ಐಸಿಸ್‌ನ 2ನೇ ಖಲೀಫನ ಸಾವು ಎನಿಸಿದೆ.

ಬೈರತ್‌, ಲೆಬನಾನ್‌ (ನ.30):  ಇಸ್ಲಾಮಿಕ್ ಸ್ಟೇಟ್ ಜಿಹಾದಿಸ್ಟ್ ಗುಂಪು ತನ್ನ ನಾಯಕ ಅಬು ಹಸನ್ ಅಲ್-ಹಶಿಮಿ ಅಲ್-ಖುರಾಶಿ ಯುದ್ಧದಲ್ಲಿ ಸಾವು ಕಂಡಿದ್ದು ಈಗಾಗಲೇ ಆತನ ಸ್ಥಾನಕ್ಕೆ ಇನ್ನೊಬ್ಬರನ್ನು ಆಯ್ಕೆ ಮಾಡಿರುವುದಾಗಿ ಘೋಷಣೆ ಮಾಡಿರುವುದಾಗಿ ಬುಧವಾರ ತಿಳಿಸಿದೆ. ಗುಂಪಿನ ವಕ್ತಾರ ಇರಾಕ್‌ ಮೂಲದ ಹಶಿಮಿ, 'ದೇವರ ಶತ್ರುಗಳ ಜೊತೆಗಿನ ಯುದ್ಧದಲ್ಲಿ ಸಾವು ಕಂಡಿದ್ದಾರೆ' ಎಂದು ಹೇಳಿದೆ. ಆದರೆ, ಅತನ ಸಾವುನ ದಿನಾಂಕ ಹಾಗೂ ಸಂದರ್ಭಗಳನ್ನು ಯಾವುದನ್ನೂ ವಿವರಿಸಲಾಗಿಲ್ಲ ಆಡಿಯೋ ಸಂದೇಶದಲ್ಲಿ ಮಾತನಾಡಿರುವ ವಕ್ತಾರ ಗುಂಪಿನ ಹೊಸ ನಾಯಕನಾಗಿ ಅಬು ಅಲ್-ಹುಸೇನ್ ಅಲ್-ಹುಸೇನಿ ಅಲ್-ಖುರಾಶಿಯನ್ನು ನೇಮಿಸಲಾಗಿದೆ ಎಂದಿದ್ದಾನೆ.  2014 ರಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್‌ ಆಕ್ರಮಣ ಏರಿಕೆಯ ನಂತರ, ಅದು ವಿಶಾಲವಾದ ಭೂಪ್ರದೇಶವನ್ನು ವಶಪಡಿಸಿಕೊಂಡಿತು, ಐಸಿಸ್‌ ಆಕ್ರಮಣಕಾರಿ ಅಲೆಯ ಅಡಿಯಲ್ಲಿ ತನ್ನ ಸ್ವಯಂ ಘೋಷಿತ "ಕ್ಯಾಲಿಫೇಟ್" ಕುಸಿತವನ್ನು ಕಂಡಿತ್ತು.

US Drone Strike: ಐಸಿಸ್‌ ಸಿರಿಯಾ ಮುಖ್ಯಸ್ಥನ ಹತ್ಯೆ ಖಚಿತಪಡಿಸಿದ ಪೆಂಟಗನ್

2017ರಲ್ಲಿ ಇರಾಕ್‌ನಲ್ಲಿ ಸೋಲು ಕಂಡರೆ, ಎರಡು ವರ್ಷಗಳ ಬಳಿಕ ಸಿರಿಯಾದಲ್ಲೂ ಸೋಲು ಕಂಡಿತ್ತು. ಆದರೆ ಸುನ್ನಿ ಮುಸ್ಲಿಂ ಉಗ್ರಗಾಮಿ ಗುಂಪಿನ ಸ್ಲೀಪರ್ ಸೆಲ್‌ಗಳು ಇನ್ನೂ ಎರಡೂ ದೇಶಗಳಲ್ಲಿ ದಾಳಿಗಳನ್ನು ನಡೆಸುತ್ತವೆ ಮತ್ತು ಪ್ರಪಂಚದ ಬೇರೆಡೆ ದಾಳಿಗಳನ್ನು ತಾನೇ ಮಾಡಿದ್ದಾಗಿ ಹೇಳಿಕೊಳ್ಳುತ್ತಿದೆ.

ಐಸಿಸ್‌ ನಂಟು, ಬಂಧಿತನಿಗಿಲ್ಲ ಬೇಲ್‌ : ನ್ಯಾಯಾಂಗ ಬಂಧನ ವಿಸ್ತರಿಸಿದ ಹೈಕೋರ್ಟ್

ಐಎಸ್‌ನ ಹಿಂದಿನ ನಾಯಕ ಅಬು ಇಬ್ರಾಹಿಂ ಅಲ್-ಖುರಾಶಿ ಈ ವರ್ಷದ ಆರಂಭದಲ್ಲಿ ಉತ್ತರ ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿ ಯುಎಸ್ ದಾಳಿಯಲ್ಲಿ ಸಾವು ಕಂಡಿದ್ದ. ಆತನ ಹಿಂದಿನ ಅಬು ಬಕರ್ ಅಲ್-ಬಾಗ್ದಾದಿಯನ್ನು ಅಕ್ಟೋಬರ್ 2019 ರಲ್ಲಿ ಇಡ್ಲಿಬ್‌ನಲ್ಲಿ ಕೊಲ್ಲಲಾಗಿತ್ತು.

click me!