ಇಸ್ತಾಂಬೂಲ್/ ಡಮಾಸ್ಕಸ್: ಸಿರಿಯಾ ಹಾಗೂ ಟರ್ಕಿಯಲ್ಲಿ ಭೀಕರ ಭೂಕಂಪನ ಸಂಭವಿಸಿದ್ದು, ಪರಿಣಾಮ ಮಲಗಿದ್ದ 180ಕ್ಕೂ ಹೆಚ್ಚು ಮಂದಿ ಸಜೀವ ಭೂ ಸಮಾಧಿಯಾಗಿದ್ದಾರೆ. ಟರ್ಕಿ ಮತ್ತು ಸಿರಿಯಾದಲ್ಲಿ ಇಂದು ನಸುಕಿನ ಜಾವ ಸಂಭವಿಸಿದ 7.8 ತೀವ್ರತೆಯ ಪ್ರಬಲ ಭೂಕಂಪಕ್ಕೆ ಸುಮಾರು 200 ಜನ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಅನೇಕರು ಮುಂಜಾನೆಯ ಸಿಹಿ ನಿದ್ದೆಯಲ್ಲಿದ್ದಾಗಲೇ ಭೂಕಂಪ ಸಂಭವಿಸಿದ್ದು, ಭೂಕಂಪನದ ತೀವ್ರತೆಗೆ ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡಗಳು ಕುಸಿದ ಪರಿಣಾಮ ಅಂದಾಜು 200 ಜನ ಸಜೀವ ಸಮಾಧಿಯಾಗಿದ್ದಾರೆ. ಸೈಪ್ರಸ್ ದ್ವೀಪ ಹಾಗೂ ಈಜಿಪ್ಟ್‌ನಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
ಕಟ್ಟಡದ ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ಆರಂಭದಲ್ಲಿ ಟರ್ಕಿಯಲ್ಲಿನ ತುರ್ತು ಸೇವಾ ಅಧಿಕಾರಿಗಳು ಸಾವಿನ ಸಂಖ್ಯೆಯನ್ನು 76 ಎಂದು ಖಚಿತಪಡಿಸಿದ್ದರು. ಆದರೆ ಇದು ಗಣನೀಯವಾಗಿ ಏರಿಕೆಯಾಗಿದೆ. ನಸುಕಿನ ಜಾವ ನಡೆದ ಈ ಭೂಕಂಪ ನಗರದಲ್ಲಿನ ಡಜನ್‌ಗೂ ಹೆಚ್ಚು ಅಪಾರ್ಟ್‌ಮೆಂಟ್ ಹಾಗೂ ಕಟ್ಟಡಗಳನ್ನು ನೆಲಸಮ ಮಾಡಿದ ಪರಿಣಾಮ ಸಾವಿನ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಆಗಿದೆ.
ರಾಜ್ಯ ಮಾಧ್ಯಮ ಮತ್ತು ಸ್ಥಳೀಯ ಆಸ್ಪತ್ರೆಗಳು ನೀಡಿದ ಮಾಹಿತಿ ಪ್ರಕಾರ, ಸಿರಿಯಾದ ಸರ್ಕಾರಿ ನಿಯಂತ್ರಿತ ಭಾಗಗಳಲ್ಲಿ ಮತ್ತು ಟರ್ಕಿಶ್ ಪರ ಬಣಗಳ ಹಿಡಿತದಲ್ಲಿರುವ ಉತ್ತರದ ಪ್ರದೇಶಗಳಲ್ಲಿ ಕನಿಷ್ಠ 111 ಜನರು ಸಾವನ್ನಪ್ಪಿದ್ದಾರೆ. ಟರ್ಕಿಯ ಟಿವಿಗಳಲ್ಲಿ (Television) ಬಿತ್ತರವಾಗಿರುವ ಭೂಕಂಪನದ ಫೋಟೋಗಳಲ್ಲಿ ಪೈಜಾಮಾ (pyjamas) ಧರಿಸಿರುವ ಆಘಾತಕ್ಕೊಳಗಾಗಿ ನಿಂತಿರುವ ಜನರು, ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು (debris) ತೆರವು ಮಾಡುತ್ತಿರುವುದನ್ನು ನೋಡುತ್ತಾ ನಿಂತಿರುವುದನ್ನು ಕಾಣಬಹುದು.
ಸುಮಾರು 17.9 ಕಿಲೋಮೀಟರ್ ಆಳದಲ್ಲಿ ಸ್ಥಳೀಯ ಕಾಲಮಾನ ಮುಂಜಾನೆ 4:17 ರ ಸುಮಾರಿಗೆ ಮೊದಲ ಭೂಕಂಪನ ಸಂಭವಿಸಿದೆ. ಇದಾಗಿ 15 ನಿಮಿಷಗಳ ನಂತರ ಮತ್ತೆ 6.7 ತೀವ್ರತೆಯ ಮತ್ತೊಂದು ಭೂಕಂಪನ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ವಿಜಯಪುರ ಜಿಲ್ಲೆ, ಮಹಾರಾಷ್ಟ್ರ ಗಡಿ ಭಾಗದಲ್ಲಿ ಲಘು ಭೂಕಂಪನ
ಟರ್ಕಿಯ(Turkey) ಎಎಫ್‌ಎಡಿ ತುರ್ತು ಸೇವಾ ಕೇಂದ್ರವು ಮೊದಲ ಭೂಕಂಪದ ತೀವ್ರತೆಯನ್ನು 7.4 ಎಂದು ಹೇಳಿದೆ. ಅಲ್ಲದೇ ಈ ಭೂ ಕಂಪನವೂ ಈ ಶತಮಾನದ ಅತ್ಯಂತ ತೀವ್ರವಾದ ಭೂಕಂಪನ ಎಂದು ಸೇವಾ ಕೇಂದ್ರ ಹೇಳಿದೆ. ಭೂಕಂಪದಿಂದ ಸಂತ್ರಸ್ತರಾದ ನಮ್ಮ ಎಲ್ಲಾ ನಾಗರಿಕರಿಗೆ ಸಂತಾಪ ಸೂಚಿಸುತ್ತೇನೆ ಎಂದು ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ (Recep Tayyip Erdogan) ಟ್ವೀಟ್ ಮಾಡಿದ್ದಾರೆ. ನಾವು ಅದಷ್ಟು ಬೇಗ ಕನಿಷ್ಠ ಹಾನಿಯೊಂದಿಗೆ ಈ ದುರಂತದಿಂದ ಹೊರಬರುತ್ತೇವೆ ಎಂದು ಭಾವಿಸುತ್ತೇವೆ ಎಂದು ಅವರು ಟ್ವಿಟ್‌ನಲ್ಲಿ ಹೇಳಿದ್ದಾರೆ.
ಈ ಭೂಕಂಪನದ ತೀವ್ರತೆ ಎಷ್ಟು ಭೀಕರವಾಗಿತ್ತು ಎಂದರೆ, ಇದು ಒಂದು ದಶಕಕ್ಕೂ ಹೆಚ್ಚು ಕಾಲ ಹಿಂಸಾಚಾರದಿಂದ ನಲುಗಿದ, ಲಕ್ಷಾಂತರ ಜನರ ಸಾವಿಗೆ ಕಾರಣವಾದ ಹಾಗೂ ಲಕ್ಷಾಂತರ ಜನರು ಜೀವ ಉಳಿಸಿಕೊಳ್ಳಲು ಪಲಾಯನ ಮಾಡುವಂತೆ ಮಾಡಿದ ಸಿರಿಯಾದ ಪ್ರಮುಖ ನಗರಗಳಾದ್ಯಂತ ಡಜನ್‌ಗೂ ಹೆಚ್ಚು ಕಟ್ಟಡಗಳನ್ನು ನೆಲಕ್ಕುರುಳುವಂತೆ ಮಾಡಿದೆ. ಟರ್ಕಿಯ ಟಿವಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ (social media) ಭೂಕಂಪದಿಂದ ಪೀಡಿತವಾದ ಕಹ್ರಮನ್ಮರಸ್ (Kahramanmaras)ಮತ್ತು ನೆರೆಯ ಗಜಿಯಾಂಟೆಪ್ ನಗರದಲ್ಲಿ (Gaziantep) ಲಸಮವಾದ ಕಟ್ಟಡಗಳ ಅವಶೇಷಗಳಡಿಯಿಂದ ಜನರನ್ನು ರಕ್ಷಿಸಲು ರಕ್ಷಣಾ ತಂಡ ಅವಶೇಷಗಳನ್ನು ತೆರವು ಮಾಡುತ್ತಿರುವ ದೃಶ್ಯಗಳು ಫೋಟೋಗಳು ಕಂಡು ಬರುತ್ತಿವೆ.
ರಾಷ್ಟ್ರ ರಾಜಧಾನಿ, ಸುತ್ತಮುತ್ತಲ ಪ್ರದೇಶಗಳಲ್ಲಿ 30 ಸೆಕೆಂಡುಗಳ ಕಾಲ ಕಂಪಿಸಿದ ಭೂಮಿ: ಭಯಭೀತರಾದ ಜನ..!
ಅದ್ಯಾಮಾನ್ (Adiyaman), ಮಾಲತ್ಯ ಮತ್ತು ದಿಯರ್‌ಬಕಿರ್ (Diyarbakir) ನಗರಗಳಲ್ಲಿ ಕಟ್ಟಡಗಳು ಕುಸಿದಿವೆ ಎಂದು ಅಲ್ಲಿನ ಎನ್‌ಟಿವಿ ದೂರದರ್ಶನ ವರದಿ ಮಾಡಿದೆ. ಸಿಎನ್‌ಎನ್ ಟರ್ಕ್ ಟೆಲಿವಿಷನ್ ಪ್ರಕಾರ, ಮಧ್ಯ ಟರ್ಕಿಯ ಕೆಲವು ಭಾಗಗಳಲ್ಲಿ ಮತ್ತು ರಾಜಧಾನಿ ಅಂಕಾರಾದಲ್ಲಿಯೂ ಭೂಕಂಪದ ಅನುಭವವಾಗಿದೆ ಎಂದು ಹೇಳಿದೆ. ಸಿರಿಯಾದ ಪಶ್ಚಿಮ ಕರಾವಳಿಯಲ್ಲಿರುವ ಲಟಾಕಿಯಾ ಬಳಿ ಕಟ್ಟಡವೊಂದು ಕುಸಿದಿದೆ ಎಂದು ಸಿರಿಯನ್ ಸ್ಟೇಟ್ ಟೆಲಿವಿಷನ್ ವರದಿ ಮಾಡಿದೆ. ಮಧ್ಯ ಸಿರಿಯಾದ ಹಮಾದಲ್ಲಿ ಹಲವಾರು ಕಟ್ಟಡಗಳು ಭಾಗಶಃ ಕುಸಿದಿದ್ದು, ನಾಗರಿಕ ರಕ್ಷಣಾ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಅವಶೇಷಗಳಿಂದ ಬದುಕುಳಿದವರನ್ನು ಹೊರತೆಗೆಯಲು ಕೆಲಸ ಮಾಡುತ್ತಿದ್ದಾರೆ ಎಂದು ಸರ್ಕಾರದ ಪರ ಮಾಧ್ಯಮಗಳು ತಿಳಿಸಿವೆ.
Anguished by the loss of lives and damage of property due to the Earthquake in Turkey. Condolences to the bereaved families. May the injured recover soon. India stands in solidarity with the people of Turkey and is ready to offer all possible assistance to cope with this tragedy. https://t.co/vYYJWiEjDQ
ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಭೂಕಂಪದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದು, ಅಗತ್ಯವಿದ್ದಲ್ಲಿ ನೆರವು ನೀಡುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ