ಫ್ರಾನ್ಸ್‌ನ ವಿವಿಧ ನಗರಗಳಲ್ಲಿ ಸತತ ಐದನೇ ದಿನವೂ ಹಿಂಸಾಚಾರ ಮುಂದುವರೆದಿದ್ದು, ಭಾನುವಾರ ಉದ್ರಿಕ್ತರು ಪ್ಯಾರಿಸ್‌ನ ಮೇಯರ್ ಮನೆಯನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ತೀವ್ರ ಹಿಂಸಾಚಾರ ಇದೀಗ ನೆರೆ ದೇಶವಾದ ಸ್ವಿಜರ್‌ಲೆಂಡಿಗೂ ಹರಡಿದೆ
ಬರ್ಲಿನ್/ಪ್ಯಾರಿಸ್ (ಜುಲೈ 3, 2023): ಫ್ರಾನ್ಸ್‌ನಲ್ಲಿ ಆಫ್ರಿಕನ್ ಮೂಲದ ಮುಸ್ಲಿಂ ಯುವಕನೊಬ್ಬನನ್ನು ಪೊಲೀಸರು ಹತ್ಯೆಗೈದ ಕಾರಣದಿಂದ ಆರಂಭವಾದ ತೀವ್ರ ಹಿಂಸಾಚಾರ ಇದೀಗ ನೆರೆ ದೇಶವಾದ ಸ್ವಿಜರ್‌ಲೆಂಡಿಗೂ ಹರಡಿದೆ. ಅಲ್ಲಿನ ಲಾಸೇನ್ ನಗರದಲ್ಲಿ ಯುವಕರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದು, ಅಂಗಡಿ ಹಾಗೂ ಮನೆಗಳ ಬಾಗಿಲು ಮುರಿದು, ಕಿಟಕಿಯ ಗಾಜುಗಳನ್ನು ಧ್ವಂಸಗೊಳಿಸಿದ್ದಾರೆ.
ಇತ್ತ ಫ್ರಾನ್ಸ್‌ನ ವಿವಿಧ ನಗರಗಳಲ್ಲಿ ಸತತ ಐದನೇ ದಿನವೂ ಹಿಂಸಾಚಾರ ಮುಂದುವರೆದಿದ್ದು, ಭಾನುವಾರ ಉದ್ರಿಕ್ತರು ಪ್ಯಾರಿಸ್‌ನ ಮೇಯರ್ ಮನೆಯನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
ಇದನ್ನು ಓದಿ: ಮುಸ್ಲಿಂ ಯುವಕನ ಶೂಟೌಟ್ ಬಳಿಕ ಫ್ರಾನ್ಸ್ ಧಗಧಗ: 4 ದಿನಗಳಿಂದ ಗಲಭೆ; 2500 ಕಾರು, ಕಟ್ಟಡಕ್ಕೆ ಬೆಂಕಿ, 2400 ಜನರ ಸೆರೆ
ಸ್ವಿಜರ್‌ಲೆಂಡಿಗೂ ಹರಡಿದ ದಾಂಧಲೆ:
ಶನಿವಾರ ರಾತ್ರಿ ಸ್ವಿಜರ್‌ಲೆಂಡಿನಲ್ಲಿ ಫ್ರೆಂಚ್ ಭಾಷಿಕರೇ ಹೆಚ್ಚಿರುವ ಲಾಸೇನ್ ನಗರದಲ್ಲಿ ನೂರಾರು ಯುವಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿ ಅಂಗಡಿ ಹಾಗೂ ಮನೆಗಳ ಬಾಗಿಲುಗಳನ್ನು ಮುರಿದು, ಕಿಟಕಿ ಗಾಜುಗಳನ್ನು ಒಡೆದು ದಾಂಧಲೆ ನಡೆಸಿದ್ದಾರೆ. ಈ ಸಂಬಂಧ 15ರಿಂದ 17 ವರ್ಷದ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ ಮೂವರು ಯುವತಿಯರೂ ಸೇರಿದ್ದಾರೆ. ಇವರು ಪೋರ್ಚುಗೀಸ್, ಸೋಮಾಲಿ, ಬೋಸ್ನಿಯನ್, ಸ್ವಿಜರ್‌ಲೆಂಡ್, ಜಾರ್ಜಿಯನ್ ಹಾಗೂ ಸರ್ಬಿಯನ್ ನಾಗರಿಕರಾಗಿದ್ದಾರೆ. ಫ್ರಾನ್ಸ್‌ನಲ್ಲಿ ನಡೆದ ಘಟನೆಯ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ಪ್ರಚೋದಿಸುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಂದ ಪ್ರೇರಿತರಾಗಿ ಅವರು ಬೀದಿಗಿಳಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಯುವಕರು ಪ್ರತಿಭಟನೆಯ ವೇಳೆ ಪೊಲೀಸರ ಮೇಲೆ ಮದ್ಯದ ಬಾಟಲಿಗಳನ್ನು ಕೂಡ ಎಸೆದಿದ್ದಾರೆ.
ಫ್ರಾನ್ಸ್‌ನಲ್ಲಿ 5ನೇ ದಿನಕ್ಕೆ ಹಿಂಸೆ:
ಫ್ರಾನ್ಸ್‌ನ ವಿವಿಧ ನಗರಗಳಲ್ಲಿ ಭಾನುವಾರವೂ ಭಾರೀ ಹಿಂಸಾಚಾರ ನಡೆದಿದೆ. ಪೊಲೀಸರು ಮತ್ತೆ 719 ಜನರನ್ನು ಬಂಧಿಸಿದ್ದಾರೆ. ಶನಿವಾರ ರಾತ್ರಿ 1.30ರ ವೇಳೆಯಲ್ಲಿ ಯುವಕರು ಅಗ್ನಿಸ್ಪರ್ಶ ಮಾಡಿದ ಕಾರೊಂದನ್ನು ಪ್ಯಾರಿಸ್‌ನ ಮೇಯರ್ ವಿನ್ಸೆಂಟ್ ಜೀನ್‌ಬರ್ನ್ ಮನೆಗೆ ನುಗ್ಗಿಸಿದ್ದಾರೆ. ಆ ವೇಳೆ ನಿದ್ರಿಸುತ್ತಿದ್ದ ಮೇಯರ್ ಪತ್ನಿ ಹಾಗೂ ಮಕ್ಕಳಿಗೆ ಗಾಯವಾಗಿದೆ ಎಂದು ಹೇಳಲಾಗಿದೆ. ಬಳಿಕ ಭಾನುವಾರ ಬೆಳಿಗ್ಗೆ ಅನೇಕ ಶಾಲೆ, ಪೊಲೀಸ್ ಠಾಣೆಗಳು, ಟೌನ್ ಹಾಲ್‌ಗಳು ಹಾಗೂ ಅಂಗಡಿಗಳ ಮೇಲೆ ಉದ್ರಿಕ್ತರು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಬಾಲಕನ ಹತ್ಯೆ ಖಂಡಿಸಿ ಫ್ರಾನ್ಸಲ್ಲಿ ಭಾರಿ ಹಿಂಸೆ: ನೂರಾರು ವಾಹನಕ್ಕೆ ಬೆಂಕಿ; 200 ಪೊಲೀಸರಿಗೆ ಗಾಯ, ನೂರಾರು ಜನ ಸೆರೆ
ಒಲಿಂಪಿಕ್ಸ್ ಮೇಲೆ ಕರಿನೆರಳು:
ಫ್ರಾನ್ಸ್‌ನಲ್ಲಿ ಈವರೆಗೆ ಹಿಂಸಾಚಾರದಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ. ಫ್ರೆಂಚ್ ಗಯಾನಾದಲ್ಲಿ 54 ವರ್ಷದ ವ್ಯಕ್ತಿಯೊಬ್ಬ ಗುಂಡು ತಗುಲಿ ಮೃತಪಟ್ಟಿದ್ದಾನೆ. ಮುಂಬರುವ ಒಲಿಂಪಿಕ್ಸ್‌ನ ಆತಿಥ್ಯ ವಹಿಸಿರುವ ಫ್ರಾನ್ಸ್‌ನಲ್ಲಿ ಜಗತ್ತಿನ ಅತಿದೊಡ್ಡ ಕ್ರೀಡಾಕೂಟಕ್ಕೂ ಮೊದಲು ನಡೆಯುತ್ತಿರುವ ಈ ಹಿಂಸಾಚಾರ ಒಲಿಂಪಿಕ್ಸ್‌ನ ಮೇಲೆ ಕರಿನೆರಳು ಕವಿಯುವಂತೆ ಮಾಡಿದೆ.
ಮಾರ್ಸೆ ನಗರದಲ್ಲಿ ಕಳೆದ ಮಂಗಳವಾರ ಅಲ್ಜೀರಿಯಾ ಮೂಲದ 17 ವರ್ಷದ ಯುವಕನೊಬ್ಬ ಬಸ್ ಲೇನ್‌ನಲ್ಲಿ ಕಾರು ಓಡಿಸುತ್ತಿದ್ದ. ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡಿದ ಮೇಲೂ ಆತ ಪುಂಡಾಟ ಮುಂದುವರೆಸಿದ್ದ. ಬಳಿಕ ಪೊಲೀಸರು ಅವನನ್ನು ಅಡ್ಡಗಟ್ಟಿದಾಗ ಉಂಟಾದ ಚಕಮಕಿಯಲ್ಲಿ ಆತ ಪೊಲೀಸ್ ಗುಂಡಿಗೆ ಬಲಿಯಾಗಿದ್ದ. ಆ ಘಟನೆಯನ್ನು ಖಂಡಿಸಿ ಆಫ್ರಿಕಾ ಹಾಗೂ ಅರಬ್ ದೇಶಗಳ ಮುಸ್ಲಿಮರು ಫ್ರಾನ್ಸ್‌ನಾದ್ಯಂತ ಹಿಂಸಾಚಾರಕ್ಕಿಳಿದಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನೇ ವ್ಯಭಿಚಾರಿ ಮಾಡಿದ ಪತಿ: ಮಾದಕ ದ್ರವ್ಯ ನೀಡಿ 90ಕ್ಕೂ ಹೆಚ್ಚು ಜನರಿಂದ ರೇಪ್‌ಗೊಳಗಾದ ಮಹಿಳೆ!