
ಲಾಸ್ ವೆಗಾಸ್ (ಜ.08) ಲಾಲಿಪಾಪ್ ಚಾಕ್ಲೇಟ್ ಸ್ವಾದ ಬಹುತೇಕರಿಗೆ ಗೊತ್ತು. ಮಕ್ಕಳು ಹೆಚ್ಚು ಇಷ್ಟಪಡುವ ತಿಂಡಿಗಳಲ್ಲಿ ಇದೂ ಒಂದು. ಇಷ್ಟೇ ಅಲ್ಲ ಕಾಲೇಜು ದಿನಗಳಲ್ಲಿ ಹಲವರು ಬಾಲ್ಯದ ಸವಿನೆನಪಿಗಾಗಿ ಲಾಲಿಪಾಪ್ ಇಷ್ಟುಪಡುವ ಮಂದಿ ಹೆಚ್ಚಿದ್ದಾರೆ. ದೊಡ್ಡವರು ಲಾಲಿಪಾಪ್‌ನಿಂದ ದೂರ ಉಳಿದಿಲ್ಲ. ಇದೀಗ ಮಕ್ಕಳಿಗೆ ಅಚ್ಚರಿ ಮೂಡಿಸಲು, ದೊಡ್ಡವರ ಬಾಲ್ಯದ ನೆನಪಿಗೆ ಸಂಗೀತದ ಟಚ್ ನೀಡಲು ಲಾಲಿಪಾಪ್ ಮಾರುಕಟ್ಟೆಗೆ ಬಂದಿದೆ. ಇದು ತಂತ್ರಜ್ಞಾನದ ಯುಗ. ಹೀಗಾಗಿ ಲಾಲಿಪಾಪ್ ಜೊತೆ ಟೆಕ್ ಕೂಡ ಸೇರಿಕೊಂಡಿದೆ. ಹೊಸದಾಗಿ ಬಂದಿರುವ ಅಡ್ವಾನ್ಸ್ ಲಾಲಿಪಾಪ್ ನೀವು ಚೀಪಿದರೆ ಸಾಕು ಇಂಪಾದ ಮ್ಯೂಸಿಕ್ ಕೇಳುತ್ತದೆ.
ಲಾಲಿಪಾಪ್‌ನ ಹೀಗೂ ಮಾರುಕಟ್ಟೆಗೆ ಪರಿಚಯಿಸಬಹುದು ಅನ್ನೋ ಕಲ್ಪನೆ ಬಹುಷ ಬಹುತೇಕರಿಗೆ ಇರಲೇ ಇಲ್ಲ. ಕಾರಣ ಈ ಲಾಲಿಪಾಪ್ ತಿನ್ನುವಾಗ ಸಿಹಿ ಜೊತೆಗೆ ಮ್ಯೂಸಿಕ್ ಕೂಡ ಆಸ್ವಾದಿಸಬಹುದು. ಈ ಲಾಲಿಪಾಪ್‌ನಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಹಾಗೂ ರೋಬೋಟಿಕ್ ಟೆಕ್ನಾಲಜಿಯೊಂದಿಗೆ ಲಾಲಿಪಾಪ್ ಉತ್ಪಾದನೆಯಾಗಿದೆ. ಆಕರ್ಷಕ ಶೈಲಿಯಲ್ಲಿ ಈ ಲಾಲಿಪಾಪ್‌ನ್ನು ಅಮೆರಿಕದ ಲಾಸ್ ವೆಗಾಸ್‌ನಲ್ಲಿ ಆಯೋಜಿಸಿದ್ದ CES 2026 ಪ್ರದರ್ಶನದ ವೇಳೆ ಪರಿಚಯಲಾಗಿದೆ. ಆಸಕ್ತ ತಂತ್ರಜ್ಞರ ತಂಡ ಲಾಲಿಪಾಪ್‌ಗೆ ಹೊಸ ಸ್ಪರ್ಶ ನೀಡಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇಡೀ ವಸ್ತು ಪ್ರದರ್ಶನದಲ್ಲಿ ಈ ಲಾಲಿಪಾಪ್ ಹಲವರ ಗಮನಸೆಳೆದಿದೆ.
ಸಾಮಾನ್ಯ ಲಾಲಿಪಾಪ್‌ನಂತೆ ಮೇಲ್ಗಡೆ ಕ್ಯಾಂಡಿ ಇದೆ. ಇನ್ನು ಕೋಲಿನ ಜಾಗದಲ್ಲಿ ತಂತ್ರಜ್ಞಾನ ಬಳಸಲಾಗಿದೆ. ಎಐ ಹಾಗೂ ರೋಬಿಟಿಕ್ ತಂತ್ರಜ್ಞಾನ ಮೂಲಕ ಮ್ಯಾಸಿಕ್ ಚಿಪ್ ಇಡಲಾಗಿದೆ. ಹೀಗಾಗಿ ಈ ಕ್ಯಾಂಡಿ ಚೀಪುತ್ತಿದ್ದಂತೆ ಮ್ಯೂಸಿಕ್ ಆರಂಭಗೊಳ್ಳಲಿದೆ. ನಿಶ್ಯಬ್ಧ ಪ್ರದೇಶದಲ್ಲಾದರೆ ಸ್ಪಷ್ಟವಾಗಿ ಮ್ಯೂಸಿಕ್ ಕೇಳಲಿದೆ. ಇನ್ನು ಮಾರುಕಟ್ಟೆ ಸೇರಿದಂತೆ ಜನಸಂದಣಿ ಪ್ರದೇಶದಲ್ಲಿ ಈ ಲಾಲಿಪಾಪ್ ಚೀಪುವಾಗ ಕಿವಿ ಮುಚ್ಚಿಕೊಂಡರೆ ಮ್ಯೂಸಿಕ್ ಕೇಳಿಸುತ್ತದೆ.
ಈ ಮ್ಯೂಸಿಕ್ ಲಾಲಿಪಾಪ್‌ನಲ್ಲಿ ಜನಪ್ರಿಯ ಗಾಯಕರ ಸಾಂಗ್ ಬಳಕೆ ಮಾಡಲಾಗಿದೆ. ಐಸ್ ಸ್ಪೈಸ್, ಅಕೂನ್, ಅರ್ಮಾನಿ ವೈಟ್ ಸೇರಿದಂತೆ ಜನಪ್ರಿಯ ಮ್ಯೂಸಿಕ್ ಸಾಂಗ್ ಬಳಕೆ ಮಾಡಲಾಗಿದೆ. ಈ ಲಾಲಿಪಾಪ್ ಕಂಪನಿಯ ವಕ್ತಾರ ಕ್ಯಾಸಿ ಲಾರೆನ್ಸ್ ಈ ತಂತ್ರಜ್ಞಾನ ಹಾಗೂ ಲಾಲಿಪಾಪ್ ಕುರಿತು ಮಾತನಾಡಿದ್ದಾರೆ. ಹೊಸ ಲಾಲಿಪಾಪ್ ಚೀಪಿದರೆ ಅಥವಾ ಜಗಿದರೆ ಮ್ಯೂಸಿಕ್ ಪ್ಲೇ ಆಗಲಿದೆ. ಮ್ಯೂಸಿಕ್ ವೈಬ್ರೇಶನ್ ನಿಮ್ಮ ದವಡೆ, ಬುರುಡೆಗಳಿಂದ ನೇರವಾಗಿ ಕಿವಿಗೆ ತಲುಪಲಿದೆ. ಹೀಗಾಗಿ ನೀವು ಲಾಲಿಪಾಪ್ ಚೀಪುವ ಅಷ್ಟು ಹೊತ್ತು ಮ್ಯೂಸಿಕ್ ನಿಮ್ಮ ಕಿವಿಗೆ ಕೇಳಿಸುತ್ತಲೇ ಇರುತ್ತದೆ. ಪ್ರಯಾಣ ಮಾಡುವಾಗ ನೀವು ಲಾಲಿಪಾಪ್ ಇದ್ದರೆ ಸಾಕು, ಅಥವಾ ಬೋರ್ ಆದಾಗ ಲಾಲಿಪಾಪ್ ಚೀಪಿದರೆ ಸಾಕು, ಬಾಯಿ ಸಿಹಿ ಮಾಡುವುದಲ್ಲದೇ ನಿಮ್ಮ ಕಿವಿಯನ್ನು ಇಂಪಾಗಿಸುತ್ತದೆ ಎಂದು ಲಾರೆನ್ಸ್ ಹೇಳಿದ್ದಾರೆ.
ಹೊಸ ಲಾಲಿಪಾಪ್ ಇದೀಗ ಲಾಸ್ ವೆಗಾಸ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಂಪನಿ ಭರ್ಜರಿ ತಯಾರಿ ನಡೆಸುತ್ತಿದೆ. ಲಾಸ್ ವೆಗಾಸ್‌ನಲ್ಲಿ ಇದರ ಬೆಲೆ $8.99 ಡಾಲರ್. ಭಾರತೀಯ ರೂಪಾಯಿಗಳಲ್ಲಿ 808 ರೂಪಾಯಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ